ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ.
- ಉ: ನಮ್ಮ ಬೆಂಗಳೂರು ಅಥವ ಅವರ್ ಬ್ಯಾಂಗ್ಳೂರ್ By: manjunathsinge (Jun 27 2007 - 1:29pm)
- ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ. By: ಸಂಗನಗೌಡ (Nov 12 2006 - 5:27pm)
- ಉ: ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ. By: mahesha (Apr 30 2007 - 4:58pm)
- ಉ: ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ. By: ಸಂಗನಗೌಡ (Apr 30 2007 - 8:05pm)
- ತಪ್ಪಿದ್ದಲ್ಲಿ ಕ್ಷಮಿಸಿ By: kishan_mv (Nov 13 2006 - 11:14am)
- ಉ: ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ. By: mahesha (Apr 30 2007 - 4:58pm)
- Hindi Beda... Kannada beku... By: kannadiga_1956 (Nov 12 2006 - 4:59am)
- ಹಿಂದಿ ಬೇಡ ಕನ್ನಡ ಬೇಕು !!! By: venkatesh (Nov 12 2006 - 7:56am)
- ನ ಮ್ಮ ಬೆಂ ಗ ಳೂ ರು ! By: venkatesh (Nov 11 2006 - 1:18pm)
- ಬೆಂಗಳೂರು ನಾಮಕರಣ By: anant (Nov 11 2006 - 9:02am)


RSS:
ಕನ್ನಡ ಮೂರನೇ ಹಳೆಯ ನುಡಿ?... ಅಲ್ಲವೇ ಅಲ್ಲ.
ಇದನ್ನು ಒಪ್ಪಬೇಕಿಲ್ಲ. ಇದು ನಾವು ಕನ್ನಡಿಗರ ಪೆದ್ದುತನಕ್ಕೆ ಕನ್ನಡಿ.
ಇಲ್ಲಿ ನೋಡಿ
ಪುಟ ೧೭ ನೋಡಿ
ಗುಜರಾತಿನಲ್ಲಿ http://local.live.com ನೋಡಿದರೆ, ಗುಜರಾತಿನ ಅನೇಕ ಊರುಗಳ ಹೆಸರುಗಳು, ಕನ್ನಡದ್ದೇ ಆಗಿವೆ. ಕಾಮನಕಟ್ಟೆ ಎಂಬ ಊರು ಗುಜರಾತಿನಲ್ಲಿದೆ. ಮಹಾರಾಷ್ಟ್ರದ ಹಲಾವಾರು ಊರುಗಳ ಹೆಸರುಗಳೂ ಕನ್ನಡದ್ದೇ ಆಗಿವೆ. ಈಗಲೂ ಮಹಾರಷ್ಟ್ರದ ತಾಲೂಕೊಂದರ ಹೆಸರು 'ಕನ್ನಡ' ಎಂದಿದೆಯಂತೆ.
ಮೇಲಿನ ಹೊತ್ತಿಗೆಯಲ್ಲಿ ಕೊಟ್ಟಿರುವಂತೆ, ಹರಪ್ಪಾ ನಡಾವಳಿಯ(ಸಂಸ್ಕೃತಿ) ಲಿಪಿಯು ಕನ್ನಡ ಮತ್ತು ತುಳುಗಳಿಗೆ ಹೆಚ್ಚು ಹತ್ತಿರವಿದೆ, ತಮಿಳಿಗಲ್ಲ.
ಕನ್ನಡ ಮತ್ತು ತುಳುವಿನಲ್ಲಿ ತಮಿಳಿನಲ್ಲಿರದ ಆದರೆ ಅದರಲ್ಲಿರುವ ಪದಗಳಿಗಿಂತಲೂ ಹಳೆಯದಾದ ಪದಗಳಿರುವ ಆರುಪು(ಸಾಧ್ಯತೆ) ಇದೆಯೆಂದು ೧೭ ನೇ ಹಾಳೆಯಲ್ಲಿ ನಿಚ್ಚಳವಾಗಿ ಬರೆಯಲಾಗಿದೆ.
ಗುಜರಾತಿನ ಕೆಲ ಬುಡಕಟ್ಟು ಮಂದಿಯ ಮನೆನುಡಿ ಕನ್ನಡವೇ ಆಗಿದೆಯೆಂದು ಕೇಳಿದ್ದೇನೆ.
ಕನ್ನಡವು ತಮಿಳಿನನಿತೇ ಹಳೆಯದು, ಇಲ್ಲವೇ ಅದಕ್ಕಿಂತಲೂ ಹಳೆಯದು, ಅದಕ್ಕಿಂತ ಇತ್ತೀಚಿನದಂತೂ ಅಲ್ಲ.