ಕನ್ನಡವೇ ಜಾತಿ-ಧರ್ಮ-ದೇವರು ?

ಕನ್ನಡವೇ ಜಾತಿ-ಧರ್ಮ-ದೇವರು ?

ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ.
ನಮಗೆ ಪರ ಊರಿನಿಂದ ಬಂದರೆ ಹೆಚ್ಚು,ಅದೇ ನಮ್ಮ ರಾಜ್ಯದಲ್ಲಿ ಅದು ಇದ್ದರು ನಾವು ಅದಕ್ಕೆ ಮರ್ಯಾದೆ ಕೊಡುವದಿಲ್ಲ, ಅದು ಸಿನೆಮಾ ಅಗಿರಬಹುದು,ನಟ-ನಟಿ, ಪುಸ್ತಕ,ಸಾಹಿತ್ಯ ಅಥಾವ ದೇವರುಗಳು. ನಮಗೆ ಎಲ್ಲಾ ಬೇರೆ ಕಡೆಯಿಂದ ಆಮದು ಆಗಬೇಕು. ಇದರಿಂದ ನಮ್ಮ ಸಂಸ್ಕ್ರುತಿ ಯಾವ ತರಹ ಮೇಲೆ ಧಾಳಿ ಆಗುತ್ತಿವೆ ಅಂತ ನಮಗೆ ಅರಿವಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

ಇವುಗಳಲ್ಲಿ ನಮಗೆ ಕಂಡು ಬರುವುದು ಧಾರ್ಮಿಕ ಧಾಳಿ, ಬೇರೆ ರಾಜ್ಯಗಳಿಂದ ಜನ ವಲಸೆ ಬರುವದರ ಜೊತೆಗೆ ಅಲ್ಲಿಯ ದೇವರುಗಳನ್ನು ತಂದರು. ಕಾಲಕ್ರಮೇಣ ನಮ್ಮ ಜನರು ಆ ದೇವರುಗಳನ್ನು ಅಪ್ಪಿಕೊಂಡರು. ಗಲ್ಲಿ-ಗಲ್ಲಿಗಳಲ್ಲಿ ಆ ದೇವರಿಗೆ ಗುಡಿ-ಗೋಪುರುಗಳು, ನಮ್ಮ ಊರಿನ ದೇವರುಗಳಿಗೆ ಒಂದು ೨x3 ಜಾಗವಿಲ್ಲ. ಆ ದೇವಸ್ಥಾನಗಳಿಗೆ ಹೋದರೆ, ಎಲ್ಲಾ ಪರಭಾಷೆಯು ಎದ್ದು ಕಾಣುತ್ತದೆ, ಕೇಳಿದರೆ ಆ ದೇವರಿಗೆ ಆರ್ಥ ಆಗುವುದು ಆ ಭಾಷೆ ಮಾತ್ರ ಅಂತ ಹೇಳುತ್ತಾರೆ. ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.

ಕನ್ನಡ ಬರದ ದೇವರುಗಳು ನಮಗೆ ಬೇಕೆ ??

ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು. ಯಾಕೆ ನಾವು ನಮ್ಮ ಕನ್ನಡವನ್ನು ಧರ್ಮವನ್ನಾಗಿ ಸ್ವೀಕರಿಸಿಲ್ಲ ??

ಹಿಂದೆ "ಕನ್ನಡ ಯುವಜನ" ಸಂಪಾದಕರು ಆಗಿದ್ದ ಮಾ.ರಾಮಮುರ್ತಿಯವರು " ಕನ್ನಡಿಗರಿಗೆ ಕನ್ನಡವೇ ದೇವರು, ಬೇರೆ ದೇವರಿಗೆ ಶರಣಾಗಲು ಬೇರೆ ದೇವರು ಬೇಕಾಗಿಲ್ಲ" ಅಂತ ಹೇಳಿದ್ದು ಮತ್ತು ಅದನ್ನು ತಮ್ಮ ಪತ್ರಿಕೆಯಲ್ಲಿ ಮುದ್ರಿಸುತ್ತಿದ್ದರು.

ಕನ್ನಡ ಜನರು ಒಂದೇ ಎಂಬ ಭಾವನೆ ಬರಲು ನಾವು ಒಂದು ಜನಾಂಗಕ್ಕೆ ಸೇರಬೇಕು ಮತ್ತು ಕನ್ನಡ ನಮ್ಮ ಜಾತಿ ಅಂತ ಭಾವನೆ ಬೆಳಸಿಕೊಂಡರೆ ಮಾತ್ರ ನಾವು ಒಗ್ಗಾಟ್ಟಾಗಿ ಕೆಲ್ಸ ಮಾಡಲು ಸಾಧ್ಯ.

ನೀವು ಏನು ಹೇಳುತ್ತಿರಿ ?

Rating
No votes yet

Comments