Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು!
- ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: veena (May 8 2007 - 5:10pm)
- ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: ವೈಭವ (May 8 2007 - 8:40pm)
- ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: betala (May 10 2007 - 10:55pm)
- ಉ: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: ವೈಭವ (May 8 2007 - 8:40pm)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: govinda (Dec 13 2006 - 7:46pm)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: Rohit (Dec 13 2006 - 9:08pm)
- Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು! By: ravee... (Dec 14 2006 - 1:20am)
- Re: Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು! By: betala (Dec 14 2006 - 2:22am)
- Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು! By: ravee... (Dec 14 2006 - 1:20am)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: Rohit (Dec 13 2006 - 9:08pm)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: kannadiga_1956 (Dec 9 2006 - 10:57pm)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: veereshraya (Dec 11 2006 - 11:42am)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: betala (Dec 11 2006 - 8:29pm)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: veereshraya (Dec 11 2006 - 11:42am)
- Re: ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ By: hpn (Dec 9 2006 - 3:05pm)

RSS:
Re : ಕನ್ನಡ ಪುಸ್ತಕಗಳು ಅಂರ್ತಜಾಲದಲ್ಲಿ ಬೇಕೇ ಬೇಕು!
ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಪುಸ್ತಕಗಳನ್ನು ಮಾರುವ ಅಂಗಡಿಗಳು ಕಡಿಮೆಯಾಗಿರುವುದಕ್ಕೆ ಕನ್ನಡಿಗರು ಕಾರಣರೇ ಹೊರತು ಪುಸ್ತಕ ಅಂಗಡಿಗಳವರಲ್ಲ. ಕನ್ನಡ ಪುಸ್ತಕಗಳನ್ನು ನಿಯಮಿತವಾಗಿ ಕೊಂಡು ಓದುವ ಹವ್ಯಾಸ ಬೆಳೆಸಿಕೊಂಡರೆ ಎಲ್ಲರೂ ಮಾರಾಟ ಮಾಡಲು ಆಸಕ್ತಿ ತೋರಬಹುದು. ಸ್ನೇಹಿತ "betala"ರವರು ಅಂದುಕೊಂಡಿರುವಂತೆ ಬೆಂಗಳೂರಿನಲ್ಲಿ ಕನ್ನಡ ಪುಸ್ತಕಕ್ಕೆ ಪರದಾಡುವ ಹಾಗೇನೂ ಹಾಗಿಲ್ಲ. ನಿಮಗೆಲ್ಲ ಗೊತ್ತಿರುವಂತೆ ನಗರದ ಎಲ್ಲಾ ಭಾಗಗಳಲ್ಲೂ ಕನ್ನಡ ಪುಸ್ತಕಗಳು ಸಿಗುತ್ತವೆ(ಜಿಲ್ಲಾ ಕೆಂದ್ರಗಳು ಮತ್ತು ಹೊರನಾಡಿನಲ್ಲಿ ಕನ್ನಡಪುಸ್ತಕಗಳು ನಿಗದಿತ ಜಾಗಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗುತ್ತಿಲ್ಲವೆನ್ನುವುದು ನಿಜ).ಆದರೆ ನಮ್ಮ ಕಾಲಬುಡಕ್ಕೆ ಯಾವುದೂ ಬರುವುದಿಲ್ಲ. ಕೊನೇಪಕ್ಷ ಇರುವ ಪುಸ್ತಕ ಮಳಿಗೆಗಳಿಗೇ ನಿಯಮಿತವಾಗಿ ಭೇಟಿ ಕೊಡುವ ಅಭ್ಯಾಸವನ್ನಾದರೂ ಬೆಳೆಸಿಕೊಂಡರೆ ಈ ತರದ ಸಮಸ್ಯೆ ಬರಲಾರದು. ಜಯನಗರದ ಸಪ್ನ ಬುಕ್ ಸ್ಟಾಲ್‌ನಲ್ಲಿ ಜಾಸ್ತಿ ಪುಸ್ತಕ ಇಲ್ಲವೆನ್ನುವುದು ನಿಜವಾದರೂ ಬಹುತೇಕ ಪುಸ್ತಕಗಳು ಅಲ್ಲಿ ಲಭ್ಯವಿವೆ(ನಾನು ಮೊನ್ನೆ ತಾನೇ ಕೆ ಎಸ್ ನ ರವರ 'ಮೈಸೂರು ಮಲ್ಲಿಗೆ' ಮತ್ತು ವಸುಧೇಂದ್ರರ 'ಯುಗಾದಿ'ಗಳನ್ನು ಅಲ್ಲಿಂದ ಕೊಂಡುಕೊಂಡೆ.
ಕನ್ನಡ ಪುಸ್ತಕಗಳು ಸಿಗುವ ಜಾಗಕ್ಕೆ ಹೋಗುವುದು ಬಿಟ್ಟು ಇಲ್ಲದ ಜಾಗಗಳಲ್ಲೇ ಹುಡುಕುವುದೇಕೆ?(ಇರುದೆಲ್ಲವ ಬಿಟ್ಟು ಇಲ್ಲದುದರೆಡೆಗೇ ತುಡಿವುದೀ ಜೀವ!)
ಇನ್ನು ಗೆಳೆಯ ವೀರೇಶ್ ಹೇಳಿದಂತೆ ಅಂತರ್ಜಾಲದಲ್ಲಿ ಪುಸ್ತಕವನ್ನು ಟೈಪಿಸಿ ಇ-ಪುಸ್ತಕ ಮಾಡುವುದು. ಆಲೋಚನೆ ಚೆನ್ನಾಗಿಯೇನೋ ಇದೆ. ಆದರೆ ಇದರ ಹಿಂದೆ ಹಲವಾರು ಸಮಸ್ಯೆಗಳಿವೆ. ಮೊದಲನೆಯದು ಕಾಫಿರೈಟಿನದು. ನನ್ನ ತಿಳಿವಿನಂತೆ ಕಾಫಿರೈಟಿನ ಸಮಸ್ಯೆಯಿಲ್ಲದ ಪುಸ್ತಕಗಳೆಂದರೆ ತುಂಬ ಹಳೆಯ ಪುಸ್ತಕಗಳು, ರನ್ನ, ಪಂಪ ಇತ್ಯಾದಿ ಕವಿಗಳ ಕಾವ್ಯಗಳು(ವಚನಗಳು, ದಾಸರ ಪದಗಳು ಈಗಾಗಲೇ ಅಂತರ್ಜಾಲದಲ್ಲಿ ಇವೆ).
ಇನ್ನು ಕನ್ನಡ ಪುಸ್ತಕಗಳನ್ನು ಒಂದು ವೇಳೆ ಟೈಪಿಸಿದರೂ ಅದನ್ನು ಗುಟೆನ್‌ಬರ್ಗ್ ಸೈಟಿನಲ್ಲಿ ಹಾಕುವುದು ಏಕೆ? ಇಲ್ಲೇ ಸಂಪದದಲ್ಲಿ ಹಾಕಬಾರದೇಕೆ...? ವಾರಕ್ಕೆ ಹತ್ತು ಪುಟಗಳನ್ನಾದರೂ ನಿಮ್ಮ ನಿಮ್ಮ ಬ್ಲಾಗ್‌ಗಳಲ್ಲಿ ಹಾಕಬಹುದಲ್ಲ. ಹೇಗೂ ಇ-ಪುಸ್ತಕ ಮಾಡಿಕೊಡಲು ನಾಡಿಗರಿದ್ದಾರೆ.
ಸ್ನೇಹಿತರೆ, ಪುಸ್ತಕ ಟೈಪ್ ಮಾಡಿಕೊಡುವುದು ಅಷ್ಟು ಸುಲಭದ ಕೆಲಸವೂ ಅಲ್ಲ ಮತ್ತು ಕಷ್ಟದ್ದೂ ಅಲ್ಲ. ಆದರೆ ಕೆಲವು ಸಂಗತಿಗಳನ್ನು ನಾವು ತಿಳಿದುಕೊಂಡಿರಬೇಕು.
ಅಚ್ಚಾಗಿರುವ ಒಂದು ಪುಟವನ್ನು ಟೈಪಿಸಲು ಸುಮಾರು ೨೫೦೦ ಬೆರಳ ತುದಿಯ ಕೀ-ಸ್ಟ್ರೋಕ್‌ಗಳು ಬೇಕಾಗುತ್ತವೆಂಬುದು ನನ್ನ ಖಚಿತ ಲೆಕ್ಕಾಚಾರ. ಇನ್ನು ಒಂದು ಪುಸ್ತಕದಲ್ಲಿ ೧೦೦ ಪುಟಗಳಿವೆಯೆಂದುಕೊಂಡರೆ ಎರಡೂವರೆ ಲಕ್ಷ ಬೆರಳ ತುದಿಯ ಕೀ-ಸ್ಟ್ರೋಕ್‌ಗಳು ಬೇಕಾಗುತ್ತವೆ! ಅದಕ್ಕಿಂತ ಪುಸ್ತಕದಂಗಡಿ ಹುಡುಕಿಕೊಂಡು ಹೋಗುವುದೇ ಸುಲಭದ್ದೆನಿಸಬಹುದು.
ಯಾವುದೇ ಕಾರಣಕ್ಕೂ ಕಾಫಿರೈಟು ಕಾದಿರಿಸಿರುವ ಪುಸ್ತಕಗಳನ್ನು ನಾವು ಹಾಕಲಾಗುವುದಿಲ್ಲ(ಗುಟೆನ್ ಬರ್ಗ್ ಸೈಟ್‌ನಲ್ಲೂ).
ಇಷ್ಟೆಲ್ಲ ಅರಿತ ಮೇಲೂ ಪುಸ್ತಕದ ಕಾಫಿರೈಟ್ ಕೊಡುವಂತೆ ಲೇಖಕರ ಮನವೊಲಿಸಲು ಆಸಕ್ತಿಯಿರುವ, ವಾರಕ್ಕೆ ಕನಿಷ್ಟ ಹತ್ತು ಪುಟಗಳನ್ನು ಟೈಪಿಸುವ ಬದ್ಧತೆಯಿರುವ ಯಾರಾದರೂ ಮುಂದೆ ಬಂದರೆ ಅವರ ಜೊತೆ ನನ್ನ ಕೈಜೋಡಿಸುವೆ. ಆದರೆ ಒಂದು ಷರತ್ತಿನೊಡನೆ: ಟೈಪಿಸಿದ್ದನ್ನು ನಿಯಮಿತವಾಗಿ ಸಂಪದದಲ್ಲೇ ಹಾಕಬೇಕು.
ಪಿಡಿಎಫ್ ಫೈಲ್ ಮಾಡಿ ಇ-ಪುಸ್ತಕ ತಯಾರಿಸುವುದೂ ಮೇಲಿನ ಮಾದರಿಯ ಚಟುವಟಿಕೆಯನ್ನೇ ಬೇಡುತ್ತದೆ.
ಆಸಕ್ತ ಸಂಪದಿಗರು ದಯಮಾಡಿ ಮುಂದೆ ಬನ್ನಿ...
ರವೀ