ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಹೊಗಳು ಮಾತು: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್

December 18, 2006 - 12:39pm — Sunil Jayaprakash

ಹೊಗಳು ಮಾತು: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್

Sunil Jayaprakash's picture

ಮೊಟ್ಟಮೊದಲಿಗೆ, ಈ ಪಾಡಕ್ಹಾಸ್ಟ್‌ಗೆ ಸಹಕರಿಸಿ ಮತ್ತು ಎಲ್ಲರಿಗೂ ದೊರಕುವಂತೆ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಂಪದದ ೭ನೆಯ ಪಾಡ್‌ಕ್ಹಾಸ್ಟ್ ಆಗಿ ನಿಸಾರರ ಮಾತುಗಳು ಕೇಳಲು ಸಿಕ್ಕಿದ್ದು, ಪ್ರಸ್ತತ ಸನ್ನಿವೇಶದಲ್ಲಿ ಅತ್ಯಂತ ಸಮಯೋಚಿತವಾಗಿದೆ. ಮತ್ತೊಮ್ಮೆ ಎಲ್ಲರಿಗೂ ವಿಶೇಷ ಅಭಿನಂದನೆಗಳು.

ಅದೇನೋ ಗೊತ್ತಿಲ್ಲ, ನಿಸಾರ ಅಹಮದ್ ಹೆಸರು ಕೇಳಿದ ತಕ್ಷಣ, ನನಗೆ ಎಷ್ಟು ಸಂತೋಷವಾಗುತ್ತದೆ ಗೊತ್ತೆ. ಇದಕ್ಕೆ ಎರಡು ವೈಯಕ್ತಿಕ ಕಾರಣಗಳಿವೆ. ದೊಡ್ಡ ಸಾಹಸ ಮಾಡಿದ ನೆನಪು ಬರುತ್ತದೆ.

೧. ನಾನು ಚಿಕ್ಕವನಿದ್ದಾಗ ನಮ್ಮ ಶಾಲೆಯಲ್ಲಿ, ಹಾಡಿನ ಸ್ಫರ್ಧೆಯಿತ್ತು. ಆದರೆ ಅಂದು ಏನಾಯ್ತಪ್ಪಾ ಅಂದರೆ, ಹುಡುಗರಾರೂ ಹಾಡಲೇ ಇರಲಿಲ್ಲ. ಬರೀ ಹುಡುಗಿಯರೇ ಹಾಡುತ್ತಿದ್ದರು. ಆಗ ಯಾರೋ ಒಬ್ಬರು ಮೇಷ್ಟ್ರು, ಅವಕ್ಕೇನು(ಅಂದರೆ ಹುಡುಗರಿಗೇನು) ಬರುತ್ತೆ, ಹಾಡು-ಹಸೆ, ಬರೀ ಪುಂಡಾಟಿಕೆ ಮಾಡಿಕೊಂಡು ಇರ್ತವೆ ಅಷ್ಟೆ ಅಂದಿದ್ದರು. ನಾನು ತಕ್ಷಣವೆ, ನಿಸಾರರ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಹಾಡನ್ನು ಹೇಳಿ ಶಹಭಾಶ್ ಗಿಟ್ಟಿಸಿದ್ದೆ. ನಾನು ಹಾಡಿದ್ದನ್ನು ಕೇಳಿ, ಇನ್ನಿತರ ಹುಡುಗರು ಹಾಡಲು ಒಪ್ಪಿ ತುಂಬಾ ಚೆನ್ನಾಗಿ ಹಾಡಿದರು. ನನಗೆ ವೈಯಕ್ತಿಕವಾಗಿ ಮೊದಲ ಬಹುಮಾನ ಬರದಿದ್ದರೂ, ಕೊನೆಯಲ್ಲಿ, ಮೊದಲ ಬಹುಮಾನ ನಮ್ಮ ಹುಡುಗರಿಗೆ ಬಂದಿತ್ತು. ಒಟ್ಟಿನಲ್ಲಿ ನಮ್ಮ ಹುಡುಗರಲ್ಲಿ ಸ್ವಾಭಿಮಾನ ಮೂಡಿಸಿದ ಕೀರ್ತಿ ನನ್ನದಾಗಿತ್ತು Smiling. ಈ ಕೀರ್ತಿಗೆ, ನಿಸಾರರ ಪದ್ಯ ಮತ್ತು ನಿಸಾರರು, ಈ ಪಾಡ್‌ಕ್ಹಾಸ್ಚಿನಲ್ಲಿ, ನೆನಪಿಸಿಕೊಂಡ ಮೈಸೂರು ಅನಂತಸ್ವಾಮಿಯವರು ನೇರ ಕಾರಣ. ಒಂದು ರೀತಿ ಆ ಹಾಡಿನಿಂದಲೇ ಜಗತ್ತನ್ನು ಗೆದ್ದೆವೆಂಬ ಭಾವನೆ ಮೂಡಿಬಿಟ್ಟಿತ್ತು, ನಮ್ಮಲ್ಲಿ ಆಗ.

೨. ನನ್ನ ಆತ್ಮೀಯ ದೊಡ್ಡಪ್ಪನವರೊಬ್ಬರಿಗೆ ನಿಸಾರರು ಮೇಷ್ಟ್ರಾಗಿದ್ದರಂತೆ. ಅದೂ ಒಂದು ಕಾರಣವಿರಬಹುದು.

ವಿಷಯಗಳಿಗೆ ಸಂಬಂಧಪಟ್ಟಂತೆ ೭ನೇ ಪಾಡ್‌ಕ್ಹಾಸ್ಟ್ ಸತ್ವಯುತವಾಗಿ ಮೂಡಿಬಂದು ನಿಜಕ್ಕೂ ಸಂಪದಕ್ಕೆ ಕಳೆಕಟ್ಟಿದೆ. ಈ ಪಾಡ್‌ಕ್ಹಾಸ್ಟಿನಲ್ಲಿ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು, ವಿಮರ್ಶಕರ ಕುರಿತು ಅವರು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದು. ಕಾವ್ಯದ ವಿಮರ್ಶೆಯನ್ನು ಕುರಿತು ಈ ವಾರದ ಸುಧಾದಲ್ಲೂ ಒಳ್ಳೆಯ ಲೇಖನ ಬಂದಿದೆ. ಇದರ ಕುರಿತು ಮತ್ತೊಮ್ಮೆ ಮಾತನಾಡೋಣ.

ಅಂದಹಾಗೆ, ತಾಂತ್ರಿಕತೆಗೆ ಸಂಬಂಧಪಟ್ಟಂತೆ ಎರಡು ಮಾತು ಹೇಳಬೇಕೆನಿಸಿತು.

೧. ಪಾಡ್‌ಕ್ಹಾಸ್ಟ್ ಪ್ರಾರಂಭದಲ್ಲಿ, ಸ್ವಾವಲಂಬಿಯಾದ ( Smiling ) ನಮ್ಮ ಇಸ್ಮಾಯಿಲರ ಮಾತುಗಳು ಸ್ವಲ್ಪ ವೇಗಗತಿಯಲ್ಲಿ ಸಾಗಿತೇನೋ ಎನ್ನಿಸಿತು. ಸುಮಾರು ೭ ಬಿಡಿ ವಾಕ್ಯಗಳ ಮಧ್ಯೆ ಎಲ್ಲೂ ವಿರಾಮವಿದ್ದಂತೆ ಕಾಣಲಿಲ್ಲ. ಬಹುಶಃ ಸಮಯಾಭಾವದಿಂದ ಹೀಗಾಗಿರಬಹುದು, ಅಥವಾ ಎಡಿಟಿಂಗ್ ವೇಳೆಯಲ್ಲಿ ಹೀಗಾಗಿರಬಹುದು. ಇದನ್ನು ಎಡಿಟಿಂಗ್ ಮಾಡಿ ಸುಧಾರಿಸಬಹುದೇ ?
೨. ಅಂದಹಾಗೆ, ಪಾಡ್‌ಕ್ಹಾಸ್ಟ್‌ನ ಕೊನೆಯಲ್ಲಿ ನಿಸಾರರ ಮಾತು, ಅರ್ಧದಲ್ಲಿಯೇ ಕಡಿದುಹೋದಂತಿದೆ. ಮೊದಲು ಅಭಿಮಾನ ಬೆಳೆಸಿಕೊಂಡು, ಬೇರೆಯವರ ಜೊತೆ ಬೀಗಬೇ...ಎನ್ನುವಲ್ಲಿಯೇ ಪಾಡ್‌ಕ್ಹಾಸ್ಟ್ ಕೊನೆಗೊಂಡಿದೆ. ಅಂದ ಹಾಗೆ ನಾನು ಕೇಳಿದ್ದು ಆಗ್ ವರ್ಬಿಸ್ ಫಾರ್ಮಾಟಿನಲ್ಲಿ, ಎಮ್.ಪಿ.೩ ನಲ್ಲಿ ಸರಿಯಾಗಿ ಮೂಡಿದೆಯೇ?.

ಒಟ್ಟಿನಲ್ಲಿ ನಿಸಾರರನ್ನು ಇಷ್ಟು ಹತ್ತಿರವಾಗಿ ಪರಿಚಯಿಸಿಕೊಟ್ಟು, ಒಳ್ಳೆಯ ಪ್ರಶ್ನೆಗಳನ್ನು Eye-wink ಕೇಳಿ, ನಮಗೆ ಸವಿಯೂಟ ಬಡಿಸಿದ್ದಕ್ಕಾಗಿ ಇಸ್ಮಾಯಿಲ್ ಮತ್ತು ಅವರನ್ನು ಜೊತೆಗೂಡಿದ್ದ ಎಲ್ಲರಿಗೂ ವಿಶೇಷ ಅಭಿನಂದನೆಗಳು. ಈ ಬೆಳಗ್ಗೆ ತಡವಾಗಿ ಆಫೀಸಿಗೆ ಬಂದ ನನಗೆ, ೪೮ ನಿಮಿಷಗಳು ಹೇಗೆ ಸರಿದವು ಎಂಬುದೇ ತಿಳಿಯಲಿಲ್ಲ Eye-wink.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: ismail (11 replies) December 17, 2006 - 6:24am
  • ಉ: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: kpbolumbu (Jul 5 2007 - 11:52am)
    • ಉ: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: kpbolumbu (Jul 14 2007 - 12:16pm)
  • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: npt (Dec 28 2006 - 2:23am)
    • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: hpn (Dec 28 2006 - 12:05pm)
      • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: npt (Dec 29 2006 - 7:12am)
        • Re:೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ....ಸ೦ದರ್ಶನಾರ್ಥಿ... By: ಸಂಗನಗೌಡ (Jan 1 2007 - 2:01pm)
  • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: gvnirmala (Dec 25 2006 - 7:47pm)
  • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: Dhruva (Dec 18 2006 - 1:43pm)
  • ಹೊಗಳು ಮಾತು: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ By: Sunil Jayaprakash (Dec 18 2006 - 12:39pm)
  • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: ಶಿವ (Dec 17 2006 - 7:38pm)
    • Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: betala (Dec 18 2006 - 7:01am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:27am
  • anivaasi
    ಉ: ಸಿಟಿಯ ಮೇಲಣ ಗುಳ್ಳೆ
    July 24, 2008 - 2:17am
  • Ennares
    ಉ: ಕುಮಾರವ್ಯಾಸ ಭಾರತ
    July 24, 2008 - 1:10am
  • srinivasps
    ಉ: ಸಂಗೀತ
    July 23, 2008 - 11:37pm
  • Rajeshwari
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:35pm
  • Rajeshwari
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:34pm
  • hpn
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 23, 2008 - 11:33pm
  • keerthi2kiran
    ಉ: ಕೆಂಪು ರಂಗಿನಲ್ಲಿ ಮಿಂದ ಹಿಮಾಲಯ
    July 23, 2008 - 11:31pm
  • muralihr
    ಉ: ಸಿಟಿಯ ಮೇಲಣ ಗುಳ್ಳೆ
    July 23, 2008 - 11:20pm
  • anil.ramesh
    ಉ: ಮುಸ್ಸಂಜೆ ಮಾತು ಚಿತ್ರದ ಹಾಡುಗಳು
    July 23, 2008 - 11:16pm
ಇನ್ನಷ್ಟು


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator