Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
- Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ? By: venkatesh (Dec 22 2006 - 5:06pm)
- Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ By: smurthygr (Mar 7 2007 - 8:23pm)
- Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀ By: manju mysooru (Dec 21 2006 - 5:08pm)

RSS:
Re: ಕನ್ನಡ ಚಿತ್ರರಂಗದ ದುಃಸ್ತಿತಿಗೆ Dr ರಾಜ್ (ಅಥವ ಅವರ ಕುಟುಂಬ) ಒಂದು ರೀತಿಯ ಕಾರಣವೆ ?
ಕನ್ನಡ ರಂಗದ ಈ ಸ್ಥಿತಿಗೆ ಅನ್ನಬಹುದೇನೋ ! ರಾಜ್ ಒಬ್ಬ ವರ ನಟ ಇದ್ದರು ನಿಜ. ಮುಂದೆ ಯಾರೂ ಅವರ ಜಾಗವನ್ನು ಸ್ವಲ್ಪ ಮಟ್ಟಿಗಾದರೂ ತುಂಬುವ ಸಾಧ್ಯತೆಗಳು ಇದ್ದೇ ಇವೆ !
ಕನ್ನಡ ಚಿತ್ರರಂಗಕ್ಕೆ ರಾಜ್ ಅವರ ಕೊಡುಗೆ ಅಪಾರ. ಇದರಲ್ಲಿ ಬೇರೆ ಮಾತಿಲ್ಲ ! ಆದರೆ ಅವರು ಆಲದ ಮರದ ರೀತಿಯಲ್ಲಿ ಬೆಳೆದು, ಬೇರೆಯವರಿಗೆ ಇನ್ನೂ ಸೊಂಪಾಗಿ ಬೆಳೆಯಲು ಅವಕಾಶಮಾಡಿಕೊಡಬಹುದಾಗಿತ್ತೇನೊ ! ಅವರ ಜೊತೆಗೆ ನಿಟಿಸಿದ 'ಚಿಲ್ಲೆರೆ ನಟಿಯರೂ' ಒಂದೇ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದನ್ನು ನಾವು ಕಾಣುತ್ತೇವೆ !
ಇನ್ನು ರಾಜ್ ಮನಸ್ಸು ಮಾಡಿದ್ದರೆ ಏನೇನೋ ಮಾಡಬಹುದಿತ್ತು ! ತಮಿಳು ನಟರಿಗೆ ಹೋಲಿಸಿದರೆ ರಾಜ್ ಕುಮಾರ್ ಕೊಡುಗೆ ಏನು ? ಎಂದು ತಲೆ ಕೆರೆದುಕೊಳ್ಳಬೇಕಾಗುತ್ತೆ !
'ರಾಜ್ ರವರ ಅಭಿಮಾನಿ'ಗಳಲ್ಲಿ ಒಬ್ಬನಾದ ನನಗೆ ಬಹಳ ಬೇಸರ ತರುವ ವಿಷಯ ಇದು !
ಉದಾ: ಕನ್ನಡ ರಂಗ ಮಂಚದ ಪ್ರಾಕಾರಗಳು,ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ವಸತಿಗೃಹಗಳು, ಅವರಹೆಸರಿನಲ್ಲಿ ಪ್ರಶಸ್ತಿಗಳು,ಇತ್ಯಾದಿಗಳನ್ನು ಅವರು ಮಾಡಿದ್ದಾರೆಯೇ ?
ರಾಜ್ ರವರ ವ್ಯಕ್ತಿತ್ವ ಮೇರು ಶ್ರೇಣಿಯಲ್ಲಿ ಇದ್ದದ್ದರಿಂದ ಇಂತಹ ಕಾರ್ಯಗಳು ಅವರಿಗೆ ನೀರುಕುಡಿದಂತೆ ಆಗಿತ್ತು. ಅದರ ಸದುಪಯೋಗ ಅವರು ಮಾಡಲಿಲ್ಲ.
ಇನ್ನೂ ಒಂದನ್ನು ಅವರು ಸುಲಭವಾಗಿ ಮಾಡಬಹುದಿತ್ತು. ಒಂದೇ ಒಂದು ನಮ್ಮದೇ ಆದ ಕನ್ನಡದ 'ಟೀವಿ ಛಾನಲ್' ಮಾಡುವುದು ಅವರು ಮನಸ್ಸು ಮಾಡಿದ್ದಿದ್ದರೆ ದೊಡ್ದದೇನೂ ಆಗಿರಲಿಲ್ಲ! ಜಯಲಲಿತ ನೋಡಿ- ಇಂದಿಗೂ ಸುದ್ದಿಯಲ್ಲಿ ಇರುವುದು ಅವರು ತಮಿಳರಿಗೆ ಮಾಡಿದ ಸುಕಾರ್ಯಗಳಿಂದ !
ಉದಯ ಟೀವಿ- ತಮಿಳರ ಛಾನಲ್, ಇ-ಟೀವಿ ಕೂಡ ನಮ್ಮದೆಂದು ನಾವು ಹೇಳಬೇಕು ಅಷ್ಟೆ !
ರಾಜ್ ಬಗ್ಗೆ ಒಂದು 'ಕಹಿಮಾತು' ಇಲ್ಲಿ ಬೇಸರದಿಂದ ಹೇಳಲು ಬಯಸುತ್ತೇನೆ. ಅವರ ಮಕ್ಕಳನ್ನು ನಟಿಸಲು ಪ್ರಚೋದನೆ ಮಾಡಬಾರದಾಗಿತ್ತು. ರಾಜ್ ಹೆಸರಿನಲ್ಲಿ ಅವರ ಮಕ್ಕಳು ಎಷ್ಟುದಿನತಾನೇ ನಟಿಸಬಹುದು ? ನಟನೆ, ಒಳ್ಳೆಯ ಶಾರೀರ, 'ಸ್ವಂತ ವರ್ಚಸ್ಸು', ಮೇಲಾಗಿ 'ಚಂದದ ಮುಖ', ಮತ್ತು ಸರಿಯಾದ 'ನಟನಾಕೌಶಲ್ಯಗಳು' ಮಾತ್ರ ಜನರ ಮನಸ್ಸನ್ನು ಸೂರೆಗೊಳ್ಳಲು ಸಾಧ್ಯ ! ರಾಜ್ ನೆನೆಪು ತಿಳಿಯಾದಂತೆ ಅವರ ಕುಟುಂಬದ ಜನರೂ ನೆನಪಿನಿಂದ ಜಾರುವ, ಉದುರುವ ಸಾಧ್ಯತೆ/ ಅಪಾಯ ಹೆಚ್ಚು ದೂರ ಇಲ್ಲ ಅಲ್ಲವೇ ? ನಿಜ ಹೇಳಿ ?
ವೆಂ-