ವಾಸ್ತವವೆಂದರೆ ಭಾಷೆಯೇ ಅಲ್ಲವೇ!
- Re: ಅನುಭವ - ಆಲೋಚನ-ಭಾಷೆ By: ಸಂಗನಗೌಡ (Dec 29 2006 - 1:54pm)
- ವಾಸ್ತವವೆಂದರೆ ಭಾಷೆಯೇ ಅಲ್ಲವೇ! By: olnswamy (Dec 24 2006 - 11:57am)
- ವಾಸ್ತವವೇ ಕಲ್ಪನೆ! By: bhatpp (Dec 25 2006 - 9:01pm)
- Re: ವಾಸ್ತವವೇ ಕಲ್ಪನೆ! By: muralihr (Dec 28 2006 - 9:42pm)
- ವಾಸ್ತವವೇ ಕಲ್ಪನೆ! By: bhatpp (Dec 25 2006 - 9:01pm)
- Re: ಅನುಭವ - ಆಲೋಚನ-ಭಾಷೆ By: bhatpp (Dec 24 2006 - 12:34am)
- Re: ಅನುಭವ - ಆಲೋಚನ-ಭಾಷೆ By: kannadiga_1956 (Dec 23 2006 - 11:15pm)

RSS:
ವಾಸ್ತವವೆಂದರೆ ಭಾಷೆಯೇ ಅಲ್ಲವೇ!
ಸಂಪದ ಬಳಗಕ್ಕೆ ಎಚ್.ಎಸ್.ಆರ್. ಅವರಿಗೆ ಸ್ವಾಗತ. ನಿಮ್ಮ ಬರಹದಿಂದ ಸಂಪದದ ಆಳ, ಘನತೆ ಹೆಚ್ಚುತ್ತದೆ.
ನೀವು ಎತ್ತಿರುವ ಪ್ರಶ್ನೆ ಬಲು ದೊಡ್ಡದು. ಹೀಗೂ ಆಗಬಹುದಲ್ಲವೆ? ಭಾಷೆಯ ಹಂಗಿಲ್ಲದೆ ವಾಸ್ತವ ಕೂಡ ಇಲ್ಲ. ನಾವು ಯಾವುದನ್ನು ವಾಸ್ತವ ಅನ್ನುತ್ತೇವೋ ಅದು ಭಾಷೆಯಲ್ಲಿ ನಾವು ಕಟ್ಟಿಕೊಂಡದ್ದೇ ಅಲ್ಲವೇ? ತೆಂಗಿನ ಮರಕ್ಕೆ ತಾನು ತೆಂಗಿನ ಮರ ಅಂತ ಗೊತ್ತೇ ಇಲ್ಲ. ಮನುಷ್ಯರು, ಕನ್ನಡ ಮಾತಾಡುವ ಮನುಷ್ಯರು, ಅದಕ್ಕೆ ತಮ್ಮ ಭಾಷೆಯಲ್ಲಿ ತೆಂಗಿನ ಮರ ಎಂದು ಹೆಸರಿಟ್ಟು ತಮ್ಮ ವಾಸ್ತವದ ಭಾಗ ಮಾಡಿಕೊಂಡಿದ್ದಾರೆ. ವಾಸ್ತವ ಅನ್ನುವುದು ಸಂಪೂರ್ಣವಾಗಿ ಭಾಷೆಯದೇ ಸೃಷ್ಟಿ. ಭಾಷೆಯ ಹಂಗಿಲ್ಲದೆ ನೋಡಲು ಅನುಭವಿಸಲು ಸಾಧ್ಯವೇ ಅನ್ನುವುದು ಮನುಷ್ಯನ ದೀರ್ಘ ಕಾಲದ ಹುಡುಕಾಟ. ಹಾಗಾದರೆ ವಾಸ್ತವವೇ ಭಾಷೆಯ ಪ್ರತಿಬಿಂಬ, ವಾಸ್ತವವೇ ಕಲ್ಪನೆ! ಅಲ್ಲವೆ!?