Re: ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು
- ಉ: ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು By: kannadakanda (Apr 25 2008 - 1:35am)
- Re: ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು By: sb1966 (Jan 8 2007 - 7:18pm)
- ಅನಿಸಿಕೆ: ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು By: Shyam Kishore (Jan 9 2007 - 12:03am)

RSS:
Re: ಹೊಸ ಶೀಶೆಯಲ್ಲಿ ಹಳೆಯ ಜನಪ್ರಿಯ ಗಾದೆಗಳು
ಹಳೆಯ ಗಾದೆ: ನೀರಿಳಿಯದ ಗಂಟಳೊಲ್ ಕಡುಬು ತುರುಕಿದರಂತೆ
ಹೊಸ ಗಾದೆ: ಬೀರಿಳಿಯದ ಗಂಟಳೊಲ್ ಚಿಕನ್ ತುರುಕಿದರಂತೆ
ಹಳೆಯ ಗಾದೆ:ಊರಿಗೆ ಬಂದವಳು ನೀರಿಗೆ ಬರದೇ ಇರ್ತಾಳಾ
ಹೊಸ ಗಾದೆ: ಊರಿಗೆ ಬಂದವನು ಬಾರಿಗೆ ಬರದೇ ಇರ್ತಾನಾ
ಹಳೆಯ ಗಾದೆ:ಧರ್ಮಕ್ಕೆ ದಟ್ಟಿ ಕೊಟ್ಟರೆ, ಹಿತ್ತಲಿಗೆ ಹೋಗಿ ಮೊಳ ಹಾಕಿದರು
ಹೊಸ ಗಾದೆ:ಧರ್ಮಕ್ಕೆ ಕೋಡ್ ಬರೆದು ಕೊಟ್ಟರೆ, ನೂರಾರು ಬಗ್ಸ್ ಇದೆ ಅಂದ್ನಂತೆ
ಹಳೆಯ ಗಾದೆ:ಮಂತ್ರಕ್ಕಿಂತ ಉಗುಳೇ ಜಾಸ್ತಿ
ಹೊಸ ಗಾದೆ:ಕೋಡ್ ಗಿಂತ ಬಗ್ಸೇ ಜಾಸ್ತಿ