ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

January 11, 2007 - 3:04pm — Shyam Kishore

ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು

Shyam Kishore's picture

ಶ್ಯಾಮ್ ಕಶ್ಯಪ ಅವರೇ,

ಒಳ್ಳೆಯ ವಿಚಾರಧಾರೆ. ಸ್ವಲ್ಪ ಹೊತ್ತು ಯೋಚಿಸಲೇಬೇಕಾದ ವಿಚಾರ. ನಮಗೆ (ನಮಗೆ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ, ನನ್ನನ್ನೂ ಸೇರಿಸಿಕೊಂಡು!) "ನಾಗರಿಕ ಹಕ್ಕು"ಗಳ ಬಗ್ಗೆ ಇರುವಷ್ಟು ಕಾಳಜಿ "ನಾಗರಿಕ ಕರ್ತವ್ಯ"ಗಳ ಬಗ್ಗೆ ಇಲ್ಲ ಅಂದರೆ ತಪ್ಪಾಗಲಾರದು.

೧. ಅಂತರ್ಜಲದ ಬಗ್ಗೆ ನೀವು ಬರೆದಿರುವಂತೆ ನಾವು ಆದಷ್ಟೂ ಬೇಗ ಎಚ್ಚರಗೊಳ್ಳಬೇಕು. ಬೋರ್ ತೋಡುವುದು ನಿಲ್ಲಿಸಬೇಕು ಅಂತಲ್ಲ, ಆದರೆ "ಮಳೆಕೊಯ್ಲು" ಬಗ್ಗೆ ಗಮನ ಹರಿಸಬಹುದಲ್ಲವೇ? ಈಗಂತೂ ಇದರ ಬಗ್ಗೆ ಸಹಾಯ ಮಾಡಲು ನಮ್ಮಲ್ಲಿ ಸಾಕಷ್ಟು ಪರಿಣಿತರಿದ್ದಾರೆ.

೨. ಆದರೆ ಬಹಳ ಬೇಸರ ತರುವ ವಿಷಯ ಅಂದರೆ ನಮ್ಮದೇ ಆದ ದ್ವಂದ್ವ ನೀತಿಗಳು (double standards). ಉದಾಹರಣೆಗೆ: ಎರಡು ವರ್ಷದ ಹಿಂದೆ ಒಮ್ಮೆ ಭಾರತಕ್ಕೆ ಬರುವಾಗ ನಾನು ಹೊರಡುವ ಜಾಗದಿಂದ ಇನ್ನೂ ಒಬ್ಬ ಯುವಕ ಹೊರಟಿದ್ದ. ಭಾರತೀಯನಾದ್ದರಿಂದ ಪರಿಚಯ, ಮಾತು ಬೆಳೆಯಿತು. ನಾನೂ ಸುಮ್ಮನೇ ಗಮನಿಸುತ್ತಿದ್ದೆ. ವಿದೇಶದಲ್ಲಿದ್ದಾಗ (ವಿಮಾನ ನಿಲ್ದಾಣದಲ್ಲಿ) ಆತ ಏನೇ ತ್ಯಾಜ್ಯ ವಸ್ತುಗಳಿದ್ದರೂ ಹುಡುಕಿಕೊಂಡು ಹೋಗಿ ಕ.ಬು.ಯಲ್ಲಿಯೇ ಹಾಕಿ ಬರುತ್ತಿದ್ದ. ದೆಹಲಿ ವಿಮಾನ ನಿಲ್ದಾಣ ಬಂತು. ಸಾಮಾನುಗಳನ್ನು ತೆಗೆದುಕೊಳ್ಳಲು ಕಾಯುತ್ತಿದ್ದಾಗ ಆತ ತನ್ನ ಜೇಬಿನಿಂದ ಒಂದಷ್ಟು ಬೇಡದ ಚೀಟಿಗಳನ್ನು ತೆಗೆದು ಏನೂ ಸಂಕೋಚವೇ ಇಲ್ಲದೆ ನಿಂತಲ್ಲೇ ಬಿಸಾಡಿದ. ನನಗೆ ಬಹಳ ಬೇಸರವಾಯಿತು. ಏನಾದರೂ ಅಂದುಕೊಳ್ಳಲಿ ಅಂತ ಆತನ ಮುಂದೆಯೇ ಆ ಚೀಟಿಗಳನ್ನು ಆರಿಸಲು ಶುರು ಮಾಡಿದೆ. ಅಲ್ಲಿದ್ದ ಕೆಲವರು ಆತನ ಕಡೆಗೇ ಗಮನಿಸಲು ಆರಂಭಿಸಿದರು. ಅಗಾತ ಎಚ್ಚೆತ್ತು ತಾನೂ ಕಸವನ್ನು (ತಾನೇ ಎಸೆದ ಕಸ) ಆರಿಸಲು ಮುಂದಾದ. ಆಗ ಕೇಳಿದೆ "ಅಲ್ಲ, ನೀವೇ ವಿದೇಶದಲ್ಲಿ ಹುಡುಕಿಕೊಂಡು ಹೋಗಿ ಕಸ ಎಸೆಯುತ್ತಿದ್ದಿರಿ. ಇಲ್ಲಿ ನೋಡಿದರೆ ಹೀಗೆ. ಯಾಕೆ ಹೀಗೆ?". ಆಗ ಆತ ನನ್ನತ್ತ "ಗುರಾಯಿಸಿದ್ದು" ನೋಡಬೇಕಿತ್ತು. "ಯಾವುದೋ ಪಳೆಯುಳಿಕೆ" ಅನ್ನುವಂತೆ ನೋಡಿದ. Embarassed

೩. ವಿದ್ಯಾವಂತರಾದ ನಾವೇ ಹೀಗೆ ಮಾಡಿದರೆ ಹೇಗೆ? ನನಗನ್ನಿಸುತ್ತೆ, ಇನ್ನೊಬ್ಬರತ್ತ ಬೆಟ್ಟು ಮಾಡಿ ತೋರಿಸುವ ಬದಲು ಮೊದಲು ನಮ್ಮ ಮನೆಯಿಂದ ಪ್ರಾರಂಭ ಮಾಡೋಣ. "ಮನೆ ಗೆದ್ದು ಮಾರು ಗೆದೆ" ಅಲ್ಲವೇ? ಬಹುಶಃ ಕ್ರಮೇಣ ಎಲ್ಲವೂ ಸರಿಯಾಗಬಹುದು. ಈಗ ಆಗುತ್ತಿರುವುದು ಎಲ್ಲರೂ ಉಪದೇಶ ಮಾಡಲು ನೋಡುತ್ತೇವೆಯೇ ವಿನಃ ಮಾಡಿ ತೋರಿಸಲು ಅಲ್ಲ. ನಾವು ನಮ್ಮ ಮನೆಯಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಯಾರಿಗೂ ಹೇಳಬಾರದು; ಮಾಡಿ ತೋರಿಸಬೇಕು ಅಂತ. (ಸ್ವಪ್ರಶಂಸೆಗಲ್ಲ ಈ ಮಾತು, ಕೇವಲ ನಾವು ಆಚರಿಸುತ್ತಿರುವುದನ್ನು ಹೇಳಲು ಅಷ್ಟೆ. ಅಲ್ಲದೇ ಇದು ನಡೆದ ಘಟನೆಯಾದ್ದರಿಂದ ನನಗೆ ಹೇಳಲೇಬೇಕು ಅಂತ ಅನ್ನಿಸಿದೆ) ಎಲ್ಲಿಗಾದರೂ ಹೊರಗೆ ಹೋದಲ್ಲಿ (ಉದ್ಯಾನವನ, ಪ್ರೇಕ್ಷಣೀಯ ಸ್ತಳ ಹೀಗೆ) ಅಲ್ಲಿ ನಮ್ಮಿಂದ ಏನೇ ಕಸ ಆದರೂ (ತಿಂಡಿ ತಿಂದ ಪೇಪರ್ ತಟ್ಟೆಗಳು, ನೀರಿನ ಲೋಟ ಇತ್ಯಾದಿ) ನಾವೇ ಅವನ್ನು ಆರಿಸಿ, ಒಂದು ಚೀಲಕ್ಕೆ ಹಾಕಿ ಅದನ್ನು ಅಲ್ಲಿಯೇ ಎಲ್ಲಾದರೂ ಒಂದು ಕಸದ ಬುಟ್ಟಿಗೆ ಹಾಕುತ್ತೇವೆ. ಇದೇ ರೀತಿ ಇನ್ನೂ ಹಲವು ಸಣ್ನ ಪುಟ್ಟ ಸಂಗತಿಗಳನ್ನು ರೂಢಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೀವಿ. ಇದು ಎಷ್ಟು ಪರಿಣಾಮಕಾರಿಯಾಗಿದೆ ಅಂದರೆ, ಹೋದ ವರ್ಷ ಒಂದು ಪ್ರವಾಸ ಹೋಗಿದ್ದಾಗ, ಒಂದು ಜಾಗದಲ್ಲಿ ನಾವು ತಿಂಡಿ ತಿನ್ನಲು ಕುಳಿತೆವು. ಇನ್ನೂ ಸುಮಾರು ಜನ ಅಲ್ಲೇ ತಿಂಡಿ ತಿನ್ನುತ್ತಿದ್ದರು. ತಿಂಡಿ ತಿಂದ ನಂತರ ನಾವು ಮಾಮೂಲಿನಂತೆ ಎಲ್ಲ ಕಸವನ್ನೂ ಚೀಲವೊಂದಕ್ಕೆ ಹಾಕುವುದನ್ನು ನೋಡಿ, ನಮ್ಮ ಪಕ್ಕದಲ್ಲಿ ತಿಂಡಿ ತಿನ್ನುತ್ತಿದ್ದ ಇನ್ನೊಂದು ಗುಂಪಿನಲ್ಲಿದ್ದ ಚಿಕ್ಕ ಹುಡುಗನೊಬ್ಬ ಬಂದು "ಅಂಕಲ್, ನನಗೂ ಒಂದು ಕವರ್ ಕೊಡಿ. ನಾನೂ ನಮ್ಮ ಕಸ ಆರಿಸಿ ಹಾಕುವೆ" ಅಂದ. ಎಲ್ಲರಿಗೂ ಎಷ್ಟು ಆಶ್ಚರ್ಯವಾಯಿತು ಅಂದರೆ, ನೀವೇ ಯೋಚಿಸಿ, ಎಲ್ಲಕ್ಕಿಂತ ಮೊದಲು ಅದು ಪ್ರೇರಣೆ ನೀಡಿದ್ದು ಒಂದು ಎಳೆಯ ಮನಸ್ಸಿಗೆ! ನಾವೇನೂ ಅಲ್ಲಿ ಭಾಷಣ ಮಾಡಿರಲಿಲ್ಲ. ನಮ್ಮ ಪಾಡಿಗೆ ನಾವು ಮಾಡಿದ್ವಿ ಅಷ್ಟೆ.

ಅಂದಿನಿಂದ ನನ್ನ (ನಮ್ಮ) ನಂಬಿಕೆ ಇನ್ನಷ್ಟು ಬಲವಾಗಿದೆ. ನಾವೇ ಮಾಡಿ ತೋರಿಸುವುದು ಎಲ್ಲಕ್ಕಿಂತ ಸುಲಭ, ಸರಳ ಮಾರ್ಗ ಅಂತ.

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (7 replies) January 11, 2007 - 2:00pm
  • Re: ನಾಗರೀಕ ಜವಾಬ್ದಾರಿಗಳು By: anupkumart (Feb 26 2007 - 4:30pm)
  • ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: Shyam Kishore (Jan 11 2007 - 3:04pm)
    • Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: H.S.R.Raghavendra Rao (Jan 11 2007 - 6:47pm)
      • Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 11 2007 - 11:33pm)
        • Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ASHOKKUMAR (Jan 13 2007 - 9:26am)
          • Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 13 2007 - 11:28pm)
            • Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: manju mysooru (Jan 16 2007 - 12:12pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator