Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
- Re: ನಾಗರೀಕ ಜವಾಬ್ದಾರಿಗಳು By: anupkumart (Feb 26 2007 - 4:30pm)
- ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: Shyam Kishore (Jan 11 2007 - 3:04pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: H.S.R.Raghavendra Rao (Jan 11 2007 - 6:47pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 11 2007 - 11:33pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ASHOKKUMAR (Jan 13 2007 - 9:26am)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 13 2007 - 11:28pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: manju mysooru (Jan 16 2007 - 12:12pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 13 2007 - 11:28pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ASHOKKUMAR (Jan 13 2007 - 9:26am)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: ಶ್ಯಾಮ ಕಶ್ಯಪ (Jan 11 2007 - 11:33pm)
- Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು By: H.S.R.Raghavendra Rao (Jan 11 2007 - 6:47pm)

RSS:
Re: ಪ್ರತಿಕ್ರಿಯೆ: ನಾಗರೀಕ ಜವಾಬ್ದಾರಿಗಳು
ಶ್ಯಾಮ್ ಕಿಶೋರ್ ಮತ್ತು ರಾಘವೇಂದ್ರರಾಯರ ಅನಿಸಿಕೆಗಳಿಗೆ ಧನ್ಯವಾದಗಳು. ನಮ್ಮಲ್ಲಿ ಸಿವಿಕ್ ಸೆನ್ಸ್ ಹಿಂದಿನ ತಲೆಮಾರುಗಳಲ್ಲಿ ಹೇಗಿತ್ತೋ ನಾ ಕಾಣೆ, ಆದರೆ ಈಗಂತು ತೀರ ಕೆಟ್ಟು ಹೋಗುತ್ತಿರುವುದು ದಿನನಿತ್ಯ ಕಾಣುತ್ತಲೇ ಇರುತ್ತೇವೆ. ಆದರೆ ಇಲ್ಲಿ ನನ್ನ ಉದ್ದೇಶವು ಬಹಳ obvious ಆಗಿ ಕಾಣುವ ನಮ್ಮ ಭಂಡತನವಾಗಲಿ ಅಥವ ನಮ್ಮ ದುರಾಭ್ಯಾಸಗಳ ಚರ್ಚೆಯಾಗಲೀ ಅಲ್ಲ. ಅವುಗಳ ವಿಷಯದಲ್ಲಿ ಮಾತಾಡುವ ಅಗತ್ಯವೇ ಇಲ್ಲ. ಶ್ಯಾಮ್ ಕಿಶೋರ್ ಹೇಳುವಂತೆ ಬರೆಯುವುದಕ್ಕಿಂತ ನಮ್ಮನ್ನು ನಾವು ಸರಿಪಡಿಸಿಕೊಳ್ಳುವುದೇ ಹೆಚ್ಚು ಸೂಕ್ತ.
ಆದರೆ ಮೇಲೆ ನಾನು ಕೊಟ್ಟ ಉದಾಹರಣೆಗಳಲ್ಲಿ ತಕ್ಷಣಕ್ಕೆ ಸರಿ/ತಪ್ಪುಗಳ ನಿರ್ಧಾರವಾಗಲೀ ನಮ್ಮ ಕೃತ್ಯದಿಂದಾಗುವ ಹಾನಿಯಾಗಲಿ ಅಥವ ಸರಿಪಡಿಸಿಕೊಳ್ಳುವ ಕ್ರಮವಾಗಲೀ ಹೊಳೆಯುವುದಿಲ್ಲ, ನಾವು ಯೋಚಿಸಿಕೊಳ್ಳುವುದಕ್ಕೂ ಹೋಗುವುದಿಲ್ಲ. ನಮ್ ಮನೆಯನ್ನೊಡಗೂಡಿದಂತೆ ಎಲ್ಲರ ಮನೆಗಳಲ್ಲೂ ಕಾಣಬಹುದಾದಂತದ್ದೇ ವಿಚಾರಗಳು ಮತ್ತೆ.
ಸಿವಿಕ್ ಸೊಸೈಟಿಗಳಲ್ಲಿ ಇಲ್ಲಿ ಬರೆದಿರುವ 'public commons' ಬಹುಚರ್ಚಿತ ವಿಚಾರವೇ.. ಆದರೆ ಅದು ಬಳಕೆದಾರರ ದೃಷ್ಟಿಕೋನದಿಂದ, ಖಾಸಗೀಕರಣದ ಚರ್ಚೆಯಲ್ಲಿ ಕಾರ್ಪೊರೇಟ್‍ಗಳ ಜವಾಬ್ದಾರಿ ಮುಂತಾದ ಸ್ವಂತವನ್ನು ಬದಿಗಿಟ್ಟು ಯೋಚಿಸುವ ವಿಷಯಗಳಲ್ಲಿಯೇ ಉಲ್ಲೇಖಿತವಾಗುತ್ತದೆ ವಿನ: ಅದನ್ನು ವೈಯುಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೇವಲ ಕಲವರ 'ಪ್ರಗತಿಪರತೆಯ ಶೋಕಿ'ಯಾಗಿಯೇ ಉಳಿದಿದೆ. ಉದಾಹರಣೆಗೆ ಶ್ಯಾಮ್ ಕಿಶೋರ್ ಪ್ರಸ್ತಾಪಿಸಿದ ಮಳೆಕೊಯ್ಲು. ಇದಲ್ಲದೇ ಇದೇ ತರಹದ ಇನ್ನು ಹಲವು ಬಗೆಯ ಫ್ಯಾಷನ್ನುಗಳಿವೆ ಪ್ರಗತಿಪರ circlesನಲ್ಲಿ. ಇವು ಹೀಗೆ ಕೇವಲ ಬೆರಳೆಣಿಕೆಯ ಸಂಖ್ಯೆಯಲ್ಲಿ ಅನುಷ್ಠಾನಕ್ಕೆ ಬಂದಿರುವುದೇ ಸಮಸ್ಯೆ. ಅದಕ್ಕೇ ಶೋಕಿ, ಫ್ಯಾಷನ್ನುಗಳಾಗಿಯೇ ಉಳಿದಿವೆ ಅಂದಿದ್ದು. ಇದರಲ್ಲಿ ಬದಲಾವಣೆ ಅಗತ್ಯ, ಅನಿವಾರ್ಯ ಕೂಡ.
ಹಾಗೆಯೇ ಇಲ್ಲ ವಿಷಯಗಳಲ್ಲಿಯೂ ತಂತ್ರಜ್ಞಾನ ನಮ್ಮ ನೆರವಿಗೆ ಬರುತ್ತದೆ ಎಂದು ನಂಬಬಾರದು, ಕೆಲವೊಮ್ಮೆ ನಮ್ಮ ಕೆಲವು ಬೇಕುಗಳನ್ನು ತ್ಯಜಿಸಲೂಬೇಕಾಗಬಹುದು, ಇದಕ್ಕೆ ತ್ಯಾಗ ಅಗತ್ಯ ಅಂತ ನನ್ನ ಅನಿಸಿಕೆ.
ಶ್ಯಾಮ ಕಶ್ಯಪ
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ