Re: ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ
- Re: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ? By: kesari (Jan 10 2007 - 6:34pm)
- ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ By: tksbhat (Jan 11 2007 - 7:35pm)
- Re: ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ By: ಶ್ಯಾಮ ಕಶ್ಯಪ (Jan 11 2007 - 11:56pm)
- ಬೀಸು ಹೇಳಿಕೆಗಳು ಬೇಡ By: Yamini (Jan 11 2007 - 7:29pm)
- ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ By: tksbhat (Jan 11 2007 - 7:35pm)
- Re: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ? By: ಸಂಗನಗೌಡ (Jan 10 2007 - 9:28am)
- ಉ: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ? By: Sunil Jayaprakash (Jan 10 2007 - 10:11am)
- ಉ: ULFA ಕೋಪಕ್ಕೆ ಕಾರಣ ನಮಗೆ ಗೊತ್ತ ? By: hpn (Jan 10 2007 - 2:58am)

RSS:
Re: ಭಾರತದ ಬಾವುಟದಲ್ಲಿ 3 ಬಣ್ಣಗಳಿವೆ
ಯಾಮಿನಿಯವರ ಕಾಮೆಂಟ್‍ನಲ್ಲಿ ಇರುವುದನ್ನು ನಾನೂ ಕೇಳಿದ್ದೇನೆ. ನನಗೆ ಕೆಲವು ಮಿತ್ರರಿದ್ದಾರೆ ನಾರ್ತ್-ಈಸ್ಟ್‍ನಿಂದ. ಅವರ ಜೊತೆಯ ಮಾತುಕತೆ ಮತ್ತು ಈಗಿನ ಕೆಲವು ಸುದ್ದಿಗಳನ್ನು ನೋಡಿ ನನ್ನ ಅನಿಸಿಕೆ ವ್ಯಕ್ತಪಡಿಸುತ್ತಿದ್ದೇನೆ.
೧. ನಾರ್ತ್-ಈಸ್ಟಿನ ಮೇಲೆ ಕೇಂದ್ರ ಸರ್ಕಾರದ್ದೂ ಯಾವತ್ತೂ ಮಲತಾಯಿ ಧೋರಣೆ, ಹಾಗು ಅಲ್ಲಿರುವ ಸಾಂಸ್ಕೃತಿಕ ವೈವಿಧ್ಯಗಳನ್ನು ಒಪ್ಪಿಕೊಳ್ಳದಿರುವುದು... ಇವುಗಳಿಂದಾಗಿ ಹಲವರಲ್ಲಿ ಸಹಜವಾಗಿಯೇ ಸಿಟ್ಟಿದೆ.
೨. ಮತ್ತೊಂದು ಮುಖ್ಯ ಕಾರಣ ಇತರ ರಾಜ್ಯಗಳಿಂದ ವಲಸೆ ಬಂದ ಕೆಲಸಗಾರರು ಮತ್ತು ಸರ್ಕಾರಿ ನೌಕರರು (ಆಫಿಸರನ್ನೊಳಗೂಡಿ). ಅವರಿಂದ ಸ್ಥಳೀಯರ ಅಭಿವೃದ್ಧಿಗೆ ಭಾದೆಯಾಗಿದೆ ಎಂಬುದು ಅವರ ಆಂಬೋಣ. ಇದಕ್ಕೆ ಒಪ್ಪುವ ಕೆಲವು ಸಂಗತಿಗಳನ್ನು ನೋಡಿರುವೆ ತಿಂಗಳ ಕೆಳಗೆ ಸಿಎನ್ಎನ್-ಐಬಿಎನ್ ನಲ್ಲಿ ಬಂದ ವಿಶೇಷ ಕಾರ್ಯಕ್ರಮವೊಂದರಲ್ಲಿ.
೩. ಬಾಂಗ್ಲಾದಿಂದ ಅಧಿಕೃತ/ಅನಧಿಕೃತ ವಲಸೆ,ಅದನ್ನು ತಡೆಯುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ. ಇದರಿಂದ ಸ್ಥಳೀಯರಿಗಿಂತ ಹೆಚ್ಚು ಸವಲತ್ತುಗಳು ಅವರಿಗೇ ಸಿಗುವಂತಾಗಿದೆ ಎಂಬುವುದು..
ಇನ್ನು ಬಹಳಷ್ಟು ದು:ಖಮಯ ವಿಷಯಗಳೂ ಇವೆ, ಬೇಸತ್ತ ಜನ (ULFA ಅಲ್ಲ) Quit India Movement ತರಹದ ಆಂದೋಲನಗಳಂತೆ ಭಾರತದ ವಿರುದ್ಧವೇ ಹಲವು ಆಂದೋಲನಗಳನ್ನೂ ನಡೆಸಿದ್ದಾರಂತೆ ಅಲ್ಲಿ! ನಾನೇನು ಭಯೋತ್ಪಾದನೆಗಾಗಲೀ Anti-India sentimentಗಾಗಲೀ ಸಮಜಾಯಿಷಿ ಕೊಡುತ್ತಿಲ್ಲ, ನಾನು ಕೇಳಿದ್ದನ್ನು ಹೇಳಿದ್ದೇನೆ.
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ