Re: ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು
- ಅಳು: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು By: Sunil Jayaprakash (Jan 12 2007 - 11:50am)
- ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು By: Shyam Kishore (Jan 12 2007 - 9:08am)
- Re: ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು By: venkatesh (Jan 12 2007 - 2:31pm)
- ಉ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು By: hpn (Jan 11 2007 - 10:42pm)
- Re: ಉ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು By: venkatesh (Jan 12 2007 - 8:48am)

RSS:
Re: ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು
ಮೊದಲ ಎಡಿಶನ್ ಗೆ 'ಮೊದಲ ಮಾತ'ನ್ನು ಜನವರಿ, ೧೮೯೯ ರಲ್ಲಿ (ಮಂಗಳೂರಿನಲ್ಲಿ), ಶ್ರೀ ಜೆ. ಬುಚರ್ ರವರು ಬರೆದಿದ್ದಾರೆ.
ಎರಡನೆಯ ಎಡಿಶನ್ ಚೆನ್ನಾಗಿ ಪರಿಷ್ಕ್ರುತ ಗೊಂಡಿತು. ಅದಕ್ಕೆ ಮುನ್ನುಡಿಯನ್ನು, ಪ್ರಕಾಶಕರು ಜನವರಿ, ೧೯೨೩ ರಲ್ಲಿ ಬರೆದಿದ್ದಾರೆ. ಈ ಪುಸ್ತಕ ಸಹಿತ ಮಂಗಳೂರಿನಲ್ಲಿ ಪ್ರಕಾಶನ ಕಂಡಿತು.
ರೆವ್.ಕಿಟ್ಟೆಲ್ಲರ ಅಮೂಲ್ಯವಾದ ಕೊಡುಗೆಯಂತೆ ಈ ಕೆಳಗೆ ಉಲ್ಲೇಖಿಸಿದ ಕೃತಿಗಳೂ ಹೆಚ್ಚಿನ ಮಾಹಿತಿಗಳನ್ನು ಕೊಡುವಲ್ಲಿ ಸಕ್ರಿಯವಾಗಿವೆ.
೧. ರೀವನ್ ನ ಕನ್ನಡ -ಇಂಗ್ಲೀಷ್ -ಶಬ್ದಕೊಶ
೨. ಅಪ್ಟೆ ಯವರ ಸಂಸ್ಕೃತ - ಇಂಗ್ಲೀಷ್ ಶಬ್ದಕೋಶ
೩. ಮೋಲ್ಸ್ವರ್ತರ ಮರಾಠಿ- ಇಂಗ್ಲೀಷ್ ಶಬ್ದಕೋಶ
೪. ಕ್ರಾವೆನ್ಸ್ ನ ಹಿಂದೂಸ್ಥಾನಿ -ಇಂಗ್ಲೀಷ್ ಶಬ್ದಕೋಶ
ಇನ್ನೊಂದು ವಿಶಯ ಇಲ್ಲಿ ಗಮನಿಸಬೇಕಾದದ್ದು- ಈ ಪ್ರಯತ್ನ ಆದದ್ದು, ಹತ್ತಾರು ದಶಕಗಳ ಹಿಂದೆ. ಆಗ ಸಿಗುತ್ತಿದ್ದದ್ದು ದೇವರ ಮನೆಯ ಗೂಡಿನಲ್ಲಿ ಶತಮಾನಗಳಿಂದ ಇಟ್ಟು ಪೂಜಿಸುತ್ತಿದ್ದ 'ಓಲೆ ಗರಿಗಳು'.
ಆ ತರಹ ನಮ್ಮ ಹಳ್ಳಿ ಮನೆಯಲ್ಲಿ ಸಿಕ್ಕ ಓಲೆಗರಿಯ ಕಂತೆಯನ್ನು ನನ್ನತಮ್ಮ, ಅಮೆರಿಕಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಅಭ್ಯಸಿಸಿ ಪುಸ್ತಕ ಪ್ರಕಟಿಸುವನಿದ್ದಾನೆ. ಇದು ಸದ್ಯದಲ್ಲೇ ಹೊರಗೆ ಬರಬಹುದು. ಅದನ್ನು ಎಲ್ಲರಿಗೂ ತಿಳಿಸುತ್ತೇನೆ.
ವೆಂ.