ಅನಿಸಿಕೆ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
- ಉ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ? By: kannadakanda (Jun 30 2008 - 12:30pm)
- Re: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ? By: ವೈಭವ (Jan 13 2007 - 12:25pm)
- ಅನಿಸಿಕೆ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ? By: ಸಂಗನಗೌಡ (Jan 12 2007 - 3:05pm)
- ಸತ್ಯ By: muralihr (Aug 9 2005 - 3:53pm)


RSS:
ಅನಿಸಿಕೆ: ವಚನ ಚಿಂತನ:೧೨: ನಾ ದೇವನಲ್ಲದೆ ನೀ ದೇವನೇ?
ಸರ್,
ನಾ ದೇವನಲ್ಲದೆ ನೀ ದೇವನೇ
ನೀ ದೇವರಾದರೆ ಎನ್ನನೇಕೆ ಸಲಹೆ
ಆರೈದು ಒಂದು ಕುಡಿತೆ ಉದಕವನೆರೆವೆ
ಹಸಿದಾಗ ಒಂದು ತುತ್ತು ಓಗರವನಿಕ್ಕುವೆ
ನಾ ದೇವ ಕಾಣಾ ಗುಹೇಶ್ವರ
ಇದರ ತಿಳಿವನ್ನು ನನಗೆ ತಿಳಿದಂತೆ ಹೇಳಲು ಒಂದು ಕಿರುಜತುನ. ನಾ ದೇವನಲ್ಲದೇ ನೀ ದೇವನೇ? ನೀ ದೇವನಾದರೆ ಎನ್ನನೇಕೆ ಸಲಹೆ? ನೀರಡಿಸಿದಾಗ ನೀರು ಕುಡಿವೆ, ಹಸಿದಾಗ ಒಂದು ತುತ್ತು ಓಗರವನ್ನಿಕ್ಕುವೆ. ಅಂದರೆ ಇಲ್ಲಿ ನೀರಡಿಸುವವನೂ ನಾನೇ, ಹಾಗೆ ನೀರಡಿಸಿದಾಗ ನೀರು ಕುಡಿವವನೂ ನಾನೇ, ಮತ್ತು ಹಸಿಯುವವನೂ ನಾನೇ, ಹಾಗೆ ಹಸಿದಾಗ ಅನ್ನ ಉಣ್ಣುವವನೂ ನಾನೇ. ಆದರೆ ಹಸಿವು, ನೀರಡಿಕೆಗಳನ್ನು ನಮ್ಮ ಮೈಗೆ ನೆಂಟಾದವುಗಳೆಂದು ತೆಗೆದುಕೊಂಡರೆ, ಹಸಿಯುವ ನನ್ನ ಮೈಗೆ ಉಣಬಡಿಸುವವ ನಾನೇ ಅಂದ ಮೇಲೇ ನನ್ನನ್ನು ನಾನು ಪೊರೆದುಕೊಳ್ಳುವದಕ್ಕಾಗಿ ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತಿರುವವ ನಾನೇ, ಹಾಗಾಗಿ ನನಗೆ ನಾನೇ ದೇವರು, ಮತ್ತಾರೂ ಅಲ್ಲ!