ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು

January 13, 2007 - 10:41am — Shyam Kishore

ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು

Shyam Kishore's picture

ಚರ್ಚೆಗೆ ಹಾಕಿರುವ ಲೇಖನದಲ್ಲಿರುವ ವಿಚಾರಗಳ ಬಗ್ಗೆ ನನ್ನ ಅನಿಸಿಕೆಗಳು ಈ ಕೆಳಕಂಡಂತಿವೆ:

೧. ಮೂಲ ಲೇಖನದಲ್ಲಿ ಉದಾಹರಣೆಯಲ್ಲಿ ಹೇಳಿರುವಂತೆ ಸರಕಾರ ತೆರೆಯಬೇಕಿದ್ದ ಶಾಲೆಯೊಂದನ್ನು ಮಠವೊಂದು ತೆರೆಯುವುದರಿಂದ ರಾಜಕೀಯ ಪ್ರಜ್ಞೆ ಬೆಳೆಯುವುದನ್ನು ತಡೆದಂತೆ ಎಂಬ ಹೇಳಿಕೆ ನಿಜಕ್ಕೂ ನಾಣ್ಯದ ಒಂದು ಮುಖ ಮಾತ್ರ ತೋರಿಸಿದಂತಾಗಲಿಲ್ಲವೇ? ಇವತ್ತಿಗೂ ಮಠದ ಪ್ರಭಾವವಿಲ್ಲದ, ಅಥವಾ ಮಠಗಳ ನೆರಳೂ ಬೀಳದ ಹಳ್ಳಿ/ಊರುಗಳು ನಮ್ಮಲ್ಲಿ ಸಾವಿರಾರಿವೆ. ಅಂತಹ ಊರುಗಳಲ್ಲಿ ಕೂಡಾ ಶಾಲೆ, ರಸ್ತೆ, ಆಸ್ಪತ್ರೆ ಮೊದಲಾದ ಮೂಲಭೂತ ಸೌಲಭ್ಯಗಳು ಇಂದಿಗೂ ಇಲ್ಲ, ಹೌದು ತಾನೇ? ಹಾಗಿದ್ದಲ್ಲಿ ಈ ವೇಳೆಗಾಗಲೇ ಅಂತಹ ಊರುಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಬೇಕಿತ್ತಲ್ಲವೇ? ಹಾಗಾಗಿ ಬೇರೆಯ factors ಕೂಡ ಈ "ರಾಜಕೀಯ ಪ್ರಜ್ಞೆ"ಯನ್ನು ಪ್ರಚೋದಿಸುತ್ತವೆ ಅಂತ ನನಗನ್ನಿಸುತ್ತಿದೆ. ಈ ಬಗ್ಗೆ ನಾನು ಓದಿಲ್ಲವಾದ್ದರಿಂದ ಹೆಚ್ಚು ಬರೆಯಲಾರೆ. ಯಾವುದೋ ಊರಿನ ಉಸಾಬರಿ ಏತಕ್ಕೆ? ಬೆಂಗಳೂರಿನಲ್ಲೇ ಎಷ್ಟು ಬಡಾವಣೆಗಳಲ್ಲಿ ರಸ್ತೆ ಸರಿಯಾಗಿವೆ ಅಂತ ಹೇಳಿ ನೋಡೋಣ! ಹೀಗಿರುವಾಗ, ಒಬ್ಬ ಮಠಾಧಿಪತಿ ಅಂಥಹ ಊರಿನಲ್ಲಿ ಶಾಲೆಯೊಂದನ್ನು ತೆರೆದಲ್ಲಿ ಅದು ಹೇಗೆ ರಾಜಕೀಯ ಪ್ರಜ್ಞೆಯನ್ನು ತುಳಿದಂತಾಗುತ್ತದೆ? ಈ ಐದು ದಶಕಗಳಿಂದ ರಾಜಕೀಯ, ಸಾಮಾಜಿಕ ಪ್ರಜ್ಞೆ ಮೂಡಿಲ್ಲ. ಹಾಗಿದ್ದಾಗ ಮಠದಿಂದ at least ಶಿಕ್ಷಣವಾದರೂ ಆ ಊರಿಗೆ ದೊರೆತಂತೆ ಆಯಿತಲ್ಲ. ಯಾರಿಗೆ ಗೊತ್ತು, ಆ ಶಾಲೆಯಲ್ಲಿ ಓದಿದ ಹುಡುಗ(ಹುಡುಗಿ)ಯೊಬ್ಬ ನಾಳೆ ಸತ್ಪ್ರಜೆಯಾಗಿ, ತನ್ನಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬಹುದೇನೋ? ಆಗ ಇದರಿಂದ ಒಳ್ಳೆಯದೇ ಆದಂತಾಗಲಿಲ್ಲವೇ? ಏನಂತೀರಾ?

೨. ಎಲ್ಲಾ ಮಠಗಳೂ ಎಲ್ಲ ಕಾಲದಲ್ಲಿಯೂ ಬರಿಯ ಆಧ್ಯಾತ್ಮಿಕ ಕೇಂದ್ರಗಳೆ ಆಗಿದ್ದವು ಅಂತಲ್ಲ. ಕೆಲವು ಮಠಗಳ ಧ್ಯೇಯವೇ ಸಮಾಜಮುಖಿಯಾಗಿರಬಹುದಲ್ಲ. ಅಲ್ಲಿ ಕಾವಿ ಕೂಡ ಇರುವುದಿಲ್ಲ. ಉದಾ: ಮಲ್ಲಾಡಿಹಳ್ಳಿ ಮಠ, ಬಾಬಾ ಆಮ್ಟೆ "ಆನಂದಾಶ್ರಮ". ನಿಮಗೆ ಅವುಗಳನ್ನು "ಮಠ/ಆಶ್ರಮ" ಅಂತ ಕರೆಯೋದಕ್ಕೆ (conventional ಆಗಿ) ಆಗೋದಿಲ್ಲ. ಏಕೆಂದರೆ ಅವುಗಳ ಧ್ಯೇಯವೇ ಬೇರೆ. ಸೇವೆಯ ಮೂಲಕ ಜನರ ನೋವಿಗೆ ಸ್ಪಂದಿಸಿ, ಆ ಮೂಲಕ ನೈತಿಕ ಪ್ರಜ್ಞೆ ಮೂಡಿಸುವುದು ಅವುಗಳ ಧ್ಯೇಯ. ಹಾಗಿರುವಾಗ, ಅಂಥ ಮಠವೊಂದು ಶಾಲೆಯೊಂದನ್ನು/ಆಸ್ಪತ್ರೆಯೊಂದನ್ನು ತೆರೆಯುತ್ತೇನೆ ಅಂದಾಗ ಬೇಡ ಅಂದರೆ ನಮ್ಮದೇ ತಪ್ಪಾಗಲೂಬಹುದು ಅಲ್ಲವೇ? ಇದು ನನ್ನ ಅನಿಸಿಕೆ. ನನ್ನ ಅಧ್ಯಯನದ ವಿಷಯವೂ ಇದಲ್ಲ. ಹಾಗಾಗಿ ಇದರಲ್ಲಿ ತಪ್ಪಿದ್ದಲ್ಲಿ ಹೇಳಿ. ಈ ರೀತಿಯ ಮಠ/ಮಠಾಧಿಪತಿಯ ವಿಚಾರ ಬಂದಾಗಲೆಲ್ಲ ಭೈರಪ್ಪನವರ "ಗ್ರಹಣ" ಕಾದಂಬರಿ ಪದೇ ಪದೇ ಮುಂದೆ ನಿಲ್ಲುತ್ತೆ.

೩. ಇನ್ನು ರಾಜಕೀಯ ಪ್ರಜ್ಞೆ. ನನ್ನದೇ ಅನುಭವ (ಬಹಳ ಹಳೆಯದೂ ಅಲ್ಲ, ಕೇವಲ ೨ ವರ್ಷ ಹಿಂದಿನದ್ದು) ಹೇಳುತ್ತೀನಿ. ಕೇಳಿದ ನಂತರ, ಏನನ್ನಬೇಕು ಅಂತ ನೀವೇ ಹೇಳಿ: ಬೆಂಗಳೂರಿನಲ್ಲಿ ನಮ್ಮ ಮನೆ ಇರೋದು ರೆವಿನ್ಯೂ ನಿವೇಶನವೊಂದರಲ್ಲಿ. ನಮ್ಮ ಬೀದಿಯಲ್ಲಿ ಒಟ್ಟು ೨೦-೨೫ ಮನೆಗಳಿವೆ. ಅಲ್ಲಿಗಿನ್ನೂ ತಾರು ರಸ್ತೆ ಬಂದಿಲ್ಲ. ಇದರ ಬಗ್ಗೆ ನಮ್ಮ ಕಾರ್ಪೊರೇಟರ್ ಹತ್ತಿರ ಮಾತಾಡಿ, ಬೇಕಿದ್ದಲ್ಲಿ ಅವರ ಮನೆಯ ಮುಂದೆ ಸತ್ಯಾಗ್ರಹ ಕುಳಿತು, ನಮ್ಮ ಹಕ್ಕನ್ನು ನಾವು ಪಡೆಯೋಣ ಅಂತ ಹೊರಟಿದ್ದಕ್ಕೆ ಬೀದಿಯಲ್ಲಿನ ೨೦ ಮನೆಗಳಿಂದ ನಾಲ್ಕು ಜನ ಮುಂದೆ ಬಂದರು. ಉಳಿದ ಸುಮಾರು ೪೦ ಜನರೂ "ಗಪ್ ಚುಪ್"! "ಏನಾದರೂ ಹೆಚ್ಚು ಕಡಿಮೆ ಆದರೆ..ರೆ...ರೆ..." ಬರೀ ಇದೇ ಮಾತು. ಯಾವುದೋ ಸಿನೆಮಾದಲ್ಲಿ ಉಮೇಶ್ ಹೇಳುವಂತೆ "ಅವರೇನಾದರೂ ಅಪಾರ್ಥ ಮಾಡಿಕೊಂಡರೆ, ಮನೆಯಿಂದ ಹೊರಗೆ ಹಾಕಿದರೆ..." ಅನ್ನುವ ರೀತಿ. ಪ್ರೋತ್ಸಾಹ ಕೊಡದಿರುವ ೪೦ ಜನರಲ್ಲಿ ಸುಮಾರು ೩೫ ಜನ ಪದವೀಧರರು! ಇದಕ್ಕೇನನ್ನುತ್ತೀರಾ? ನಮ್ಮಲ್ಲಿ "ಬೆಕ್ಕಿಗೆ ಗಂಟೆ ಕಟ್ಟಬೇಕು" ಅಂತ ಹೇಳಿ, "ಹೌದು, ಹೌದು, ಕಟ್ಟಲೇಬೇಕು. ಕಟ್ಟಿದಲ್ಲಿ ಹಾಗಿರುತ್ತೆ, ಹೀಗಿರುತ್ತೆ.." ಅಂತ ಉತ್ತರನ ಬಡಾಯಿ ಕೊಚ್ಚುತ್ತಾರೆಯೇ ಹೊರತು "ಸರಿ ನಡಿ, ಕಟ್ಟೋಣ" ಅಂತ ಹೊರಟರೆ "ಏ, ಯಾಕೆ ಬೇಕೋ ಮಾರಾಯ, ಬೆಕ್ಕು ಪರಚಿದರೆ?" ಅನ್ನುವವರೇ ಹೆಚ್ಚು. ನಗರಗಳಲ್ಲೇ ಹೀಗಿರುವಾಗ ಇನ್ನು ಹಳ್ಳಿಗಳ ಕಥೆ ಏನಾಗಬೇಕು ಹೇಳಿ?

೪. ನನ್ನ ಅಭಿಪ್ರಾಯದಲ್ಲಿ. ಒಳ್ಳೆಯ ಕೆಲಸ ಆಗುವಂತಿದ್ದಲ್ಲಿ ಆಗಲಿ ಬಿಡಿ. ಸ್ವಾಗತಿಸೋಣ. ಮಠಾಧಿಪತಿ ಅದನ್ನು ತನ್ನ "ಹೆಸರಿ"ಗಾಗಿ ಮಾಡಿದರು ಅಂತಲೇ ಇಟ್ಟುಕೊಳ್ಳೋಣ. ಇದು ಪ್ರತಿಫಲ ಬಯಸಿ ಕೆಲಸ ಮಾಡುವ "ಮಧ್ಯಮ" ಮಟ್ಟದ ನಡವಳಿಕೆ ನಿಜ, ನಾನೂ ಒಪ್ಪುತ್ತೇನೆ. ಆದರೆ ನಮ್ಮ ರಾಜಕಾರಣಿಗಳಿಗಿಂತ ಇದು ಉತ್ತಮವಾಗಲಿಲ್ಲವೇ? ಕೆಲಸ ಮಾಡದೇ ಇದ್ದರೂ "ಬಡವರ ಬಂಧು, ಧೀಮಂತ ನಾಯಕ(ಕಿ)" ಅಂತೆಲ್ಲ ಹಾಕಿಕೊಳ್ಳುವ ಅವರ ವಿರುದ್ಧ ನಮ್ಮ ರಾಜಕೀಯ ಪ್ರಜ್ಞೆಯನ್ನು ಮೊದಲು ಬೆಳೆಸಿಕೊಳ್ಳಬೇಕಲ್ಲವೇ? ನಮ್ಮ ನೇತಾರರಿಗೆ ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ? ನಾವು ತೆರಿಗೆದಾರರು ಕೊಟ್ಟ ಹಣ ಅಥವಾ ಬೊಕ್ಕಸದ ಹಣ ತಾನೇ? ಇದರ ಬಗ್ಗೆ, ಇಂಥ ಸಿಂಪಲ್ ಅನ್ನಿಸುವ ವಿಷಯದ ಬಗ್ಗೆ ಎಲ್ಲಿ ಚರ್ಚೆ ನಡೆಯುತ್ತೆ ಹೇಳಿ? ಚರ್ಚೆ ನಡೆಯಬಹುದು, ಬೇಕಾದರೆ ಸಾವಿರ ಕಾಮೆಂಟ್ಸ್ ಬರುತ್ತೆ. ಆದರೆ ಅವರ ವಿರುದ್ಧ ಕ್ರಮ ಎಲ್ಲಿ ತಗೋತಾರೆ? ಇದೂ ಪ್ರಜಾಪ್ರಭುತ್ವದ ಅವನತಿ ತಾನೇ? ಆದರೆ ನೀವು ಹೇಳಿರುವಂತೆ ಮಠದ ಕೆಲಸವೊಂದು "ಜಾತಿ ವಿಭಜನೆಗೋ", "ಮತಾಂತರಕ್ಕೋ", "ರಾಜಕೀಯ ಓಟಿನ ಬ್ಯಾಂಕಿಗಾಗಿಯೋ" ನಡೆದಲ್ಲಿ ಮನಸ್ಸಿಗೆ ಬಹಳ ಬೇಸರವಾಗುತ್ತದೆ.

೫. ಕೊನೆಯದಾಗಿ, ನಾನು "ಎಡ/ಬಲ" ಹೀಗೆ ಯಾವ ಪಂಥೀಯನೂ ಅಲ್ಲ! ಮಠಗಳನ್ನು, ಅವುಗಳು ಮಾಡುವ ಎಲ್ಲವನ್ನೂ ಸಂಪೂರ್ಣ (ಕುರುಡು ನಂಬಿಕೆಯಿಂದ) ಬೆಂಬಲಿಸುತ್ತಿದ್ದೀನಿ ಅಂತಲೂ ಅಲ್ಲ. ಕೆಲವು ಮಠಗಳು ಈಗಲೂ ಬರಿಯ ಆಧ್ಯಾತ್ಮಿಕತೆಗೇ ತಮ್ಮನ್ನು ಸೀಮಿತವಾಗಿಟ್ಟುಕೊಂಡಿವೆ. ಒಂದು ಉದಾ: ರಾಮಕೃಷ್ಣಾಶ್ರಮ. ಆದರೆ ಬಹುಶಃ "ಗುರುಮನೆ" ಮತ್ತು "ಅರಮನೆ (ಅಧಿಕಾರ)"ದ ನಡುವಣ ಈ ನಂಟು ಇವತ್ತಿನದಲ್ಲ. ಹಂಪಿ-ವಿದ್ಯಾರಣ್ಯರು, ಶಿವಾಜಿ-ರಾಮದಾಸರು ಹೀಗೆ ದೊಡ್ದ ಪರಂಪರೆಯೇ ಇದೆ ಅಲ್ಲವೇ? ಒಂದು ರೀತಿಯಲ್ಲಿ ಮಠವೂ ಸಮಾಜದ ಅಂಗ ತಾನೇ? ಮಠಾಧಿಪತಿಯೂ ಕೊನೆಗೆ ಸಮಾಜದಲ್ಲಿ ಒಬ್ಬ ನಾಗರಿಕ ತಾನೇ?

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Yamini (11 replies) January 11, 2007 - 10:33pm
  • ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
    • Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
      • ಧನ್ಯವಾದಗಳು By: Yamini (Jan 13 2007 - 5:09pm)
        • ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
        • Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
    • ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
  • Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
  • Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
    • Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
    • ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
      • Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • siddharam
    ಉ: ಗಜಲ್
    October 8, 2008 - 1:30pm
  • Deeparavishankar
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 1:24pm
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 1:07pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:46pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:37pm
  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
ಇನ್ನಷ್ಟು


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator