Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
- ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Shyam Kishore (Jan 13 2007 - 10:41am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- ಧನ್ಯವಾದಗಳು By: Yamini (Jan 13 2007 - 5:09pm)
- ಕೆಲವು ಪ್ರಶ್ನೆಗಳು: ಮಠ, ಮಠಾಧಿಪತಿ ಮತ್ತು ನೇತಾರರ ಬಗ್ಗೆ By: Shyam Kishore (Jan 14 2007 - 2:21am)
- Re: ಧನ್ಯವಾದಗಳು By: ಶ್ಯಾಮ ಕಶ್ಯಪ (Jan 14 2007 - 12:17am)
- ಧನ್ಯವಾದಗಳು By: Yamini (Jan 13 2007 - 5:09pm)
- ಪ್ರತಿಕ್ರಿಯೆಗೆ ಜೊತೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Sunil Jayaprakash (Jan 13 2007 - 11:12am)
- Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: Prabhu Murthy (Jan 13 2007 - 4:45pm)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: H.S.R.Raghavendra Rao (Jan 13 2007 - 12:06am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ಸಂಗನಗೌಡ (Jan 12 2007 - 10:01am)
- Re: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು By: ವೈಭವ (Jan 18 2007 - 10:53pm)
- ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ismail (Jan 12 2007 - 4:43pm)
- Re: ಆಡಳಿತದಲ್ಲಿ ಪ್ರಜೆಯ ಪಾಲ್ಗೊಳ್ಳುವಿಕೆಯನ್ನು ತಡೆಯುವ ಮಠ By: ಸಂಗನಗೌಡ (Jan 17 2007 - 12:19pm)

RSS:
Re: ಪ್ರತಿಕ್ರಿಯೆ: ಆಧುನಿಕ ಪ್ರಜಾಪ್ರಭುತ್ವದಲ್ಲಿ ಮಠಗಳು
ಯಾಮಿನಿಯವರ ಬ್ಲಾಗು ಮತ್ತು ಅದಕ್ಕೆ ಶ್ಯಾಮ್ ಅವರ ಪ್ರತಿಕ್ರಿಯೆಗಳು ಪ್ರಬುದ್ಧವಾಗಿವೆ. ಶ್ಯಾಮ್ ಅವರ ಮೊದಲನೆಯ ಮತ್ತು ನಾಲ್ಕನೆ ಪಾಯಿಂಟುಗಳಲ್ಲಿ ಅನೇಕ ವಿಶಯಗಳನ್ನು ಒಪ್ಪುತ್ತೇನೆ. ಉಳಿದವುಗಳ ಬಗ್ಗೆ ನನಗೆ ಗೊತ್ತಿಲ್ಲ.
ವಿದ್ಯಾಪ್ರಸರಣಕ್ಕೆ ಗುರುಕುಲಗಳ ವ್ಯೆವಸ್ಥೆಯಿದ್ದ ನಮ್ಮ ದೇಶಕ್ಕೆ ಈಗಿರುವ ಶಾಲಾವ್ಯೆವಸ್ಥೆ ಬಂದಿದ್ದು ಮಿಶಿನರಿಗಳಿಂದ ಅರ್ಥಾತ್ ಕ್ರಿಶ್ಚಿಯನ್ ಮಠಗಳಿಂದ. ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯಗಳ ಸಾಮಾಜಿಕ ಆಯಾಮವನ್ನು ಅವರು ಧರ್ಮಪ್ರಸರಣಕ್ಕೆ ಮುಲಾಜಿಲ್ಲದೆ ಬಳಸಿದ್ದಾರೆ.
ಮೀಸಲಾತಿ ವ್ಯವಸ್ಥಯಿಂದ ಹೊರತಾದ ಆದರೆ ಕೇವಲ ಮೆರಿಟ್ಟಿಗೆ ಬಾರದ ಅನೇಕ ಮಕ್ಕಳಿಗೆ ಅಕ್ಷರ ದಾಸೋಹವನ್ನು ಮಾಡುವ ವ್ಯವಸ್ಥೆಯನ್ನು ಮಠಗಳು ಕೈಗೊಂಡಿರುವುದನ್ನು ಕೇವಲ ರಾಜಕೀಯ ಪ್ರಜ್ಞೆಯ ಕೋನದಿಂದ ಪ್ರಾಮಾಣಿಕವಾಗಿ ಮೌಲ್ಯಮಾಪನ ಮಾಡುವುದು ಹೇಗೆ?
ಇಪ್ಪತ್ತೊಂದನೆ ಶತಮಾನದ ಈ ವೇಳೆಗೆ ಸರ್ಕಾರ-ಆಡಳಿತ ವ್ಯವಸ್ಥೆಗಳ ಇತಿಮಿತಿ ಮತ್ತು ಖಾಸಗಿವಲಯಗಳ ಆಳ ಮತ್ತು ವ್ಯಾಪ್ತಿಗಳನ್ನು ಲೋಕತಂತ್ರದ ರಮ್ಯ ಕನಸುಗಳಿಂದ ಎದ್ದ ಬಹುತೇಕ ಪ್ರೌಢ ಪ್ರಜಾಪ್ರಭುತ್ವಗಳು ಮನಗಂಡಿವೆ. ಅದಕ್ಕೆ ತಕ್ಕುದಾದ ಮಾರ್ಪಾಟುಗಳನ್ನೂ ಮಾಡಿಕೊಂಡಿವೆ. ಇಲ್ಲಿ ರಾಮರಾಜ್ಯದ ಕನವರಿಕೆಗಳ್ಯಾವುವೂ ಇಲ್ಲ. ಸಂಧರ್ಬೋಚಿತವಾದ ಹೊಂದಾಣಿಕೆಗಳಷ್ಟೆ.
ಖಾಸಗಿವಲಯ ಅಂದರೆ ಉದ್ದಿಮೆಗಳು, ಸಮೂಹಮಾಧ್ಯಮಗಳು, ಬುದ್ಧಿಜೀವಿಗಳು(ಕರ್ನಾಟಕದ ಮಟ್ಟಿಗೆ ಸಾಹಿತಿಗಳು), ಇತ್ಯಾದಿ. ಇವುಗಳ ಜೊತೆಗೆ ಮಠಗಳೂ ಸೇರುತ್ತವೆ. ಇವೆಲ್ಲವೂ ಲೋಕತಾಂತ್ರಿಕ ಪ್ರಕ್ರಿಯೆಗಳ ಹೊರಗಿಂದ ಸರ್ಕಾರ-ಆಡಳಿತ ವ್ಯವಸ್ಥೆಗಳ ಮೇಲೆ ಬೀರುವ ಪ್ರಭಾವವನ್ನು ಮಠಗಳದರಷ್ಟೇ ವಸ್ತುನಿಷ್ಠವಾಗಿ ರಾಜಕೀಯ ಪ್ರಜ್ಞೆಯ ಕೋನದಿಂದ ಮೌಲ್ಯಮಾಪನ ಮಾಡಬಹುದೆ?
ಪ್ರಭು ಮೂರ್ತಿ