ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಲೇಖನ: "ಈ ನೀರು ಕುಡದ್ರ ಉಚ್ಚಿ ಕುಡಧಾಂಗ ಆಗತೈತಿ ನೋಡಪಾ..!"

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ

ಪಂಚಕೋಶ ವಿದ್ಯಾ

January 14, 2007 - 11:31am — Sunil Jayaprakash

ಪಂಚಕೋಶ ವಿದ್ಯಾ

Sunil Jayaprakash's picture

Shyam Kishore wrote:
ಝೆನ್ ಎಂದರೆ ಬದುಕಿನಲ್ಲಿ ಎಲ್ಲದಕ್ಕೂ ಅರ್ಥ ಹುಡುಕುವುದಲ್ಲ; ಬದಲಾಗಿ ಬದುಕಿನಲ್ಲಿ ಪ್ರತಿ ಕ್ರಿಯೆಯಲ್ಲೂ ಆನಂದವನ್ನು ಅನುಭವಿಸುವುದು".

ಶ್ಯಾಮ್ ಕಿಶೋರ್‌(ಅವರೇಕಾಳು ಬೇಯಿಸುವುದು ಬೇಡ ಅಂತ ಈ ಸಂಬೋಧನೆ Eye-wink ),
ಈ ಕಥೆಯು ಚಿಕ್ಕದೂ ಸರಳವೂ, ಹಾಗೆಯೇ ಹಿತವೂ ಆಗಿದೆ. ಈ ಮೇಲಿನ ನುಡಿ, ಚರ್ಚಿಸಲು ಅನೇಕ ವಿಷಯಗಳು ದೊರಕಿಸಿಕೊಟ್ಟವು.

"ಪಂಚಕೋಶ ವಿದ್ಯಾ" - ಇದು ನಮಗೆ First PUC ಸಂಸ್ಕೃತದಲ್ಲಿದ್ದ ಮೊದಲ ಪಾಠ. ನಮಗೆ ಕಲಿಯಲು ಸಿಕ್ಕ ಎಷ್ಟೋ ಒಳ್ಳೆಯ ಪಾಠಗಳಲ್ಲಿ ಇದು ಅತ್ಯಂತ ಪ್ರಮುಖವಾದುದು ಎಂದು ನನಗೆ ಅನಿಸುವುದು. ಯಾವುದೋ ಉಪನಿಷತ್ತಿನ ಕುರಿತಾದ ಮಾತುಗಳಿದ್ದವು.

"ಭೃಗುರ್ವೈ ವಾರುಣಿಃ | ವರುಣಂ ಪಿತರಂ ಉಪಸಸಾರ | ಅಧೀಹಿ ಭಗವೋ ಬ್ರಹ್ಮೇತಿ | ತಸ್ಮಾ ಏತತ್ ಪ್ರೋವಾಗ | ತಪಸಾ ಬ್ರಹ್ಮ ವಿಜಿಜ್ಞಾಸಸ್ವ | ತಪೋ ಬ್ರಹ್ಮೇತಿ ||

ಸತಪೋತಪ್ಯತ | ಸತಪಸ್‌ತಪ್ತ್ವಾ...ಅನ್ನಂ ಬ್ರಹ್ಮ.............| ಪ್ರಾಣಂ ಬ್ರಹ್ಮ.........| ಮನೋಬ್ರಹ್ಮ..............| ವಿಜ್ಞಾನಂ ಬ್ರಹ್ಮ........| "

ಇದಾವುದೂ ಸರಿಹೊಂದದೆ, ಕೊನೆಯಲ್ಲಿ

ಆನಂದಂ ಬ್ರಹ್ಮೇತಿ ವ್ಯಜಾನಾತ್ | ಆನಂದಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೆ | ಆನಂದಾದ್ಯೇವ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಷಂತೀತಿ |.......

ಇಲ್ಲಿ, ಬರುವ ಪ್ರಮುಖ ಅಂಶವೆಂದರೆ, ಬ್ರಹ್ಮ ಎಂದರೇನು ತಿಳಿಯಬೇಕು ಎಂಬುದಾಗಿ ತೀವ್ರ ಕುತೂಹಲದಲ್ಲಿದ್ದ ಒಬ್ಬ ಶಿಷ್ಯನಿಗೆ ಆನಂದವೇ ಬ್ರಹ್ಮನೆಂಬ ಉತ್ತರ ಸಿಗುತ್ತದೆ.

ಅಂದರೆ ಉಪನಿಷತ್ತಿನ ಪ್ರಕಾರ, "ಆನಂದದಿಂದಲೇ ನಾವೆಲ್ಲರೂ ಹುಟ್ಟುವುದು, ಆನಂದದಿಂದಾಗಿಯೇ(ಆನಂದಕ್ಕೋಸ್ಕರವೇ) ಬದುಕುವುದು, ಕೊನೆಯಲ್ಲಿ ಆನಂದದಲ್ಲಿಯೇ ಲೀನವಾಗುವೆವು. ಇದುವೇ ಬ್ರಹ್ಮ". ಇದರ ಅರ್ಥ ಇನ್ನೂ ಸಂಕೀರ್ಣವಾಗಿರಬಹುದು, ಆದರೆ ಇದನ್ನು ಸರಳವಾಗಿ ಈ ರೀತಿ ನನ್ನ ಮನಸ್ಸಿಗೆ ತಿಳಿಸಿಕೊಟ್ಟಿದ್ದೇನೆ.

ಇಷ್ಟು ಸರಳವಾಗಿರುವ ವಾಕ್ಯವನ್ನು ಪುರಾಣ ಪುಣ್ಯ ಕಥೆಗಳು ರಬ್ಬರ್ ನಂತೆ ಎಳೆಯುತ್ತವೆ ಎಂಬುದು ನನ್ನ ಅನುಮಾನ . ಈ ಆನಂದವೇ ಬ್ರಹ್ಮ ಎಂಬುದರಲ್ಲಿ ಬರುವ ಬ್ರಹ್ಮನನ್ನು ಪುರಾಣ ಪುಣ್ಯಕಥೆಗಳು ಪೂಜೆಯನ್ನು ಬೇಡುವ ದೇವರಾಗಿ ಸಮೀಕರಿಸುತ್ತವೆ. ಆದರೆ ಈ ದೇವರು ಎಂಬುದು ಮುಖ್ಯವಾಗಿ ಭಕ್ತಿಮಾರ್ಗದಲ್ಲಿ ಮುನ್ನಡೆಸುವ ಸಾಧನಗಳು. ಆದರೆ ದೇವೆರೆಂಬುದು Eternal Truth ಆಗಲು ಸಾಧ್ಯವೇ?. ಉದಾ - ರಾವಣನಿಗೆ ಹತ್ತುತಲೆಗಳಿದ್ದವು, ದೇವತೆಗಳಿಗೆ ನಾಲ್ಕು ಕೈಗಳಿರುತ್ತವೆ, ವಿಷ್ಣುವಿನ ದಶಾವತಾರಗಳು ಹೀಗೆ.

ದೇವರೆಂಬ ಕಲ್ಪನೆಯು ಕಾಲಕಾಲಕ್ಕೆ ಬದಲಾಗುತ್ತದೆ ? ಉದಾ -
೧. ಬೌದ್ಧ ವಿಗ್ರಹವು ವೆಂಕಟೇಶನಾಗಿ ಪೂಜೆಗೈಯಲ್ಪಡುವುದು.
೨. ಶಿವನನ್ನು ಪೂಜಿಸುತ್ತಿದ್ದ ಒಂದು ಸಮುದಾಯ ಬಸವಣ್ಣನವರಿಗೇ ತಲೆಬಾಗಬಹುದು. ಬಸವಣ್ಣರಿಗೇ ದೇವರ ಸ್ಥಾನ ನೀಡಿ, ಬಸವಣ್ಣನವರನ್ನು ಪೂಜೆಗೈದರೆ ಶಿವನನ್ನು ಪೂಜಿಸದಂತೆಯೇ ಎಂಬಂತಹ ಮಾತುಗಳೂ ಕೆಲವೆಡೆ ಕೇಳಿಬರುತ್ತವೆ.

ದೇವರು, ಪೂಜೆ ಇವುಗಳು ಮುಖ್ಯವಾಗಿ ಜನರಲ್ಲಿ ಭಕ್ತಿಯನ್ನು ಸ್ಫುರಿಸುವ Economical means ?. Eternal Truth ಅಥವಾ ಸರ್ವಕಾಲಿಕ ಸತ್ಯಗಳೆಂದರೆ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ?

ಈ ಆನಂದವೇ ಬ್ರಹ್ಮ ಎನ್ನುವಂತಹ conceptsಗಳು ಅನೇಕ ಒಳ್ಳೆಯ ಚರ್ಚೆಯೆಡೆಗೆ ಕರೆದೊಯ್ಯುತ್ತವೆ.

೧. ಬ್ರಹ್ಮ ಎಂಬುದನ್ನು ದೇವರಾಗಿ ಸಮೀಕರಿಸು ಸಾಧ್ಯವೇ ? ಇದರ ಕುರಿತು ಬೇರೆ ಎಳೆಯಲ್ಲಿ ಹಾಕಲಿದ್ದೇನೆ.
೨. ದೇವರು ಎಂಬುವುದು ಸರ್ವಕಾಲಿಕ ಸತ್ಯವಾಗುತ್ತದೆಯೇ ?
೩. ಪೂಜೆಗಳಲ್ಲಿ (ಎಲ್ಲ ರೀತಿಯ ಪೂಜೆ, ಕೇವಲ ಒಂದು ಧರ್ಮದ ಅಥವಾ ಆಗಮ ಪದ್ಧತಿಯ ಪೂಜೆಯಷ್ಟೇ ಅಲ್ಲ), ನಾವು ಹೆಚ್ಚು ಪ್ರಾಮುಖ್ಯವನ್ನು ದೇವರಿಗೆ ನೀಡುತ್ತೇವೆಯೋ ಅಥವಾ ಭಕ್ತಿಗೆ(Materialistic ತನ್ಮಯತೆ) ನೀಡುತ್ತೇವೆಯೋ?
೪. ಭಕ್ತಿ ಮತ್ತು ದೇವರಲ್ಲಿ ಸರ್ವಕಾಲಿಕವಾದುದು ಯಾವುದು ?
೫. ಈಗ ಹಿಂದುವೊಬ್ಬ, ಕ್ರಿಶ್ಚಿಯನ್ ಅಥವಾ ಬೌದ್ಧ ಮತಕ್ಕೆ ಮತಾಂತರ ಹೊಂದಿದನೆನ್ನಿ. ಆಗ ಅವನು(ಅವನು ಎಂಬುದನ್ನು ಪುಲ್ಲಿಂಗವೆಂದು ತಿಳಿಯಬೇಡಿ Eye-wink ) ನಂಬುವ ದೇವರು ಬದಲಾಗುತ್ತದೆ, ಆದರೆ ಭಕ್ತಿಯ ಸ್ವರೂಪ ಬದಲಾಗುತ್ತದೆಯೇ ?
೬. ಯಾರು ಯಾವ ಪೂಜೆಗೈದರೂ, ಅಥವಾ ನಾಸ್ತಿಕರಾಗಿಯೇ ಉಳಿದರೂ ಉಪನಿಷತ್ತಿನಲ್ಲಿ ಬರುವ ಆನಂದವೇ ಬ್ರಹ್ಮ ಎಂಬಂತಹ ವಾಕ್ಯಗಳು ಸುಳ್ಳಾಗುತ್ತದೆಯೇ ?

ನೀವುಗಳೇನೆನ್ನುತ್ತೀರಿ ?

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ! By: Shyam Kishore (2 replies) January 14, 2007 - 5:15am
  • ಪಂಚಕೋಶ ವಿದ್ಯಾ By: Sunil Jayaprakash (Jan 14 2007 - 11:31am)
    • ಉ: ಪಂಚಕೋಶ ವಿದ್ಯಾ By: Shyam Kishore (Jan 16 2007 - 3:54am)

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • smurthygr
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:34pm
  • palachandra
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:26pm
  • srivathsajoshi
    ಉ: ತಲೆ ಬಾಗು
    November 22, 2008 - 5:14pm
  • harshavardhan v...
    ಉ: ಛಾಯಗ್ರಹಣದಲ್ಲಿ "Shutter Speed" ನ ಪಾತ್ರ
    November 22, 2008 - 5:06pm
  • muralihr
    ಉ: ಓಶೋ ಕಂಡಂತೆ ಗಾಂಧಿ!
    November 22, 2008 - 4:57pm
  • mahesha
    ಉ: ತಲೆ ಬಾಗು
    November 22, 2008 - 4:50pm
  • srivathsajoshi
    ಉ: ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?
    November 22, 2008 - 3:57pm
  • srivathsajoshi
    ಉ: ತಲೆ ಬಾಗು
    November 22, 2008 - 3:43pm
  • Chamaraj
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 22, 2008 - 3:32pm
  • gurubaliga
    ಉ: "ರ್ರೀ ಎಷ್ಟು ಹೊತ್ತಿಗೆ ಮನೆಗೆ ಬರ್ತೀರಿ?":- ಭಾಗ ೨
    November 22, 2008 - 2:56pm
ಇನ್ನಷ್ಟು


ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator