ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......
- ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು - ಅಂಬಿಗನ ಆರ್ತನಾದ By: Shyam Kishore (Jan 19 2007 - 2:43pm)
- ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)
- Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
- ಉ: Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Shyam Kishore (Jan 20 2007 - 3:29am)
- Re: ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: srivathsajoshi (Jan 20 2007 - 12:21am)
- ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು...... By: Sunil Jayaprakash (Jan 19 2007 - 9:22pm)

RSS:
ಪ್ರತಿಕ್ರಿಯೆ : ಮೊದಲ ಇಣುಕು: ಬೇಕೇ ಬೇಕು ನ್ಯಾಯ ಬೇಕು......
ಶ್ಯಾಮ್ ಕಿಶೋರ್,
ನಿಮ್ಮ ಪ್ರತಿಕ್ರಿಯೆಯನ್ನು ನನ್ನ ಗೂಗಲ್ ರೀಡರ್ನಲ್ಲಿ ಮಧ್ಯಾಹ್ನವೇ ಓದಿದೆ. ನಿಜಕ್ಕೂ ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ಸಂತೋಷವಾಯಿತು. ಕೆಲಸದ ಒತ್ತಡದಲ್ಲಿದ್ದುದರಿಂದ (ನಮ್ಮ ಸಹೋದ್ಯೋಗಿ, ಈಗಷ್ಟೇ ಪ್ಲೇನ್ ಹತ್ತಿಯಾಯಿತು) ನೀವು ಮೊದಲು ಮಾಡಿದ ಮಾತುಗಳು ಮತ್ತು ಪ್ರಶ್ನೆಗಳಿಗೆ ನನ್ನ ಮಾತುಗಳನ್ನು ಸೇರಿಸಲಾಗಲಿಲ್ಲ.
ಖಂಡಿತವಾಗಿಯೂ ನಿಮ್ಮ ಟಿಪ್ಪಣಿಗಳನ್ನು ವೈಯಕ್ತಿಕ ಟೀಕೆಯೆಂದು ನಾನು ಭಾವಿಸಲಿಲ್ಲ. ಇದರ ಬಗ್ಗೆ ಎಳ್ಳಷ್ಟೂ ಸಂಶಯ ಬೇಡ.
ಹೌದು, ನಿಮ್ಮ ಮಾತುಗಳು, ನನ್ನ ಮನಸ್ಸಿಗೆ ಹೀಗೆ ಮನವರಿಕೆ ಮಾಡಿಕೊಡಲು ಸಹಾಯ ಮಾಡಿದೆ. "ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಬರೆಯುವುದು ನನಗಾಗಿಯೇ"
ಈ ಮಾತಿಗೆ ನಿಜಕ್ಕೂ ಸವಿಯೊದಗನ್ನು ಸಲ್ಲಿಸುವೆ. ಒಂದು ವಿಷಯ ಸ್ಪಷ್ಟಪಡಿಸಿಬಿಡುವೆ, ನಾನು ಯಾವುದಾದರೂ ಲೇಖನ ಬರೆದಾಗ ಅದಕ್ಕೆ ಪ್ರತಿಕ್ರಿಯೆ ಬರಲಿಲ್ಲವೆಂದ ಮಾತ್ರಕ್ಕೆ ನನಗೆ ಖಂಡಿತವಾಗಿಯೂ ಬೇಸರವಾಗುವುದಿಲ್ಲ. ನನಗೆ ನಿಜವಾದ ಸಂತೋಷ ಸಿಗುವುದು ಬರೆಯುವುದರಿಂದ. ಇಂಥವರು ಓದಲಿ, ಅಥವಾ ಇಂಥವರೇ ಪ್ರತಿಕ್ರಿಯಿಸಲಿ ಎಂಬ ಪೂರ್ವಾಗ್ರಹಪೀಡಿತನಾಗಿ ಖಂಡಿತವಾಗಿಯೂ ಕೂಡ ಬರೆಯುವುದಿಲ್ಲ. ಯಾರಾದರು ಪ್ರತಿಕ್ರಿಯಿಸದರೆ ಮತ್ತಷ್ಟು ಸಂತೋಷವಾಗುತ್ತದೆಯೇ ಹೊರತು, ಯಾರು ಪ್ರತಿಕ್ರಿಯಿಸದ ಮಾತ್ರಕ್ಕೆ ಬೇಸರ ಖಂಡಿತವಾಗಿಯೂ ಆಗುವುದಿಲ್ಲ.
ಅಯ್ಯೋ, ಶ್ಯಾಮ್ ಕಿಶೋರರೆ, ಮತ್ತೊಮ್ಮೆ ನಾನು ಪ್ರಾರಂಭಿಸಿದ ಚರ್ಚೆಯನ್ನು ನೋಡಿ. ನಾನು ಚರ್ಚಿಸ ಹೊರಟಿದ್ದು, ಇಂಗ್ಲೀಷಿಗೊಂದು ನ್ಯಾಯ, ಸಂಸ್ಕೃತಕ್ಕೊಂದು ನ್ಯಾಯವೇಕೆ ? ಎಂಬುದರ ಕುರಿತಾಗಿ. ಇದು ಪಂಡಿತರೆನಿಸಿದವರ ಸ್ವಹಿತಾಸಕ್ತಿಯ ಸಂಕೇತವೇ ? H.S.R.Raghavendra Raoರವರು ತುಂಬಾ ಚೆನ್ನಾಗಿ, ಕರ್ನಾಟಕ v/s ಕನ್ನಡ ಎಂಬುದಾಗಿ ಬರೆದಿದ್ದಾರೆ ನೋಡಿ. ಸಂಸ್ಕೃತವನ್ನು ಬರಮಾಡಿಕೊಂಡ ವಿದ್ವಾಂಸರು, ಇಂಗ್ಲೀಷನ್ನೇಕೆ ಬೇಡವೆನ್ನುತ್ತಾರೆ ? ಇದು ಪುರೋಹಿತಶಾಯಿ ಪದ್ಧತಿಯ ಸಂಕೇತವೇ ?
ನಿಮ್ಮ ಮಾತಿಗೆ ನಿಜಕ್ಕೂ ನನ್ನ ಸಹಮತವೂ ಇದೆ. ನನಗೆ ಕನ್ನಡ ಇಷ್ಟವಾಗಲು ಕನ್ನಡವೇ ಕಾರಣ. ದಯವಿಟ್ಟು, ಇಡೀ ಲೇಖನವನ್ನು ಮತ್ತೊಮ್ಮೆ ಓದಿ ನೋಡೀಪ್ಪ(ಪಾತಿಗೆ ಸಾತು ಸಂಪತ್ತುನಲ್ಲಿ ಪಾಚು ಹೇಳುವ ರೀತಿ
). ನಾನು ಸಂಸ್ಕೃತವನ್ನೇ ಆಗಲೀ, ಬೇರೆ ಯಾವುದೇ ಭಾಷೆಯನ್ನಾಗಲೀ ಎಲ್ಲಿಯೂ ತುಚ್ಛವಾಗಿ ಕಂಡಿಲ್ಲ. ಬೇರೆ ಭಾಷೆಯನ್ನು ಕೀಳಾಗಿ ಕಾಣುವುದು ಒಂದು ರೀತಿಯ ಅಸಹನೆಯ ಸಂಕೇತ ಎಂಬ ಮಾತನ್ನು ಒಪ್ಪುತ್ತೇನೆ
. ನಿಮ್ಮಂತೆ ನನಗೂ ಕೂಡ, ಕನ್ನಡ ಇಷ್ಟವಾಗಲು ಅದು ಪುರಾತನ ಎನ್ನುವ ಕಾರಣಕ್ಕೋ ಅಥವಾ ಇನ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿಯೋ ಖಂಡಿತವಾಗಿಯೂ ಅಲ್ಲ. ಕನ್ನಡವನ್ನು ಬೇರೆ ಭಾಷೆಯ ಜೊತೆ ಹೋಲಿಸಿ ಬೇರೆಯದನ್ನು ತುಚ್ಛವಾಗಿ ಕಂಡು ನಮ್ಮನ್ನು ಉದ್ಧಾರವಾಗಿಸುವುದರಲ್ಲಿ ಯಾವ ಪುರುಷಾರ್ಥವೂ ನನಗೆ ಕಾಣಿಸುವುದಿಲ್ಲ.ಈ ಚರ್ಚೆಯ ಆಶಯ ಸಂಸ್ಕೃತದ ವಿರುದ್ಧವಾಗಲೀ, ಅಥವಾ ಬೇರೆ ಭಾಷೆಯ ವಿರುದ್ಧ ಖಂಡಿತವಾಗಿಯೂ ಅಲ್ಲ.