ಅನಿಸಿಕೆ: Minimize and Maximize
- ಅನಿಸಿಕೆ: Minimize and Maximize By: Shyam Kishore (Jan 21 2007 - 3:09pm)
- Re: ಅನಿಸಿಕೆ: Minimize and Maximize By: vardhana (Jan 31 2007 - 3:04pm)
- ಮೆಚ್ಚುಗೆ : Minimize and Maximize By: Sunil Jayaprakash (Jan 21 2007 - 10:06pm)
- ಉ: Minimize and Maximize By: Shyam Kishore (Jan 22 2007 - 12:27pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ನಗು ತಂದ ವಿಚಾರ: ನಮ್ಮ ದನಿ..... By: Sunil Jayaprakash (Jan 31 2007 - 11:47pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ಮಗುದೊಂದು ಅನಿಸಿಕೆ : Minimize and Maximize By: bhatpp (Jan 22 2007 - 4:39am)
- Re: Minimize and Maximize By: shreekant.mishrikoti (Jan 22 2007 - 11:29am)
- ಉ: Minimize and Maximize By: Shyam Kishore (Jan 22 2007 - 12:27pm)

RSS:
ಅನಿಸಿಕೆ: Minimize and Maximize
ಸುನಿಲ್,
ಹೊಸ ಪದಗಳನ್ನು (ಅಂದರೆ ಈಗ ನಿತ್ಯ ಬಳಕೆಯಲ್ಲಿಲ್ಲದ ಪದಗಳು ಅಂತ; ವಾಸ್ತವವಾಗಿ ಈ ಪದಗಳು ಪುರಾತನವೇ!) ಬರಮಾಡಿಕೊಳ್ಳುವ ದೃಷ್ಟಿಯಿಂದ "ಪರ್ವಿಸು, ಪರ್ವಳಿಸು"ಗಳನ್ನು ಬಳಸಿ ನೋಡಬಹುದು; ಎಲ್ಲರೂ ಹೇಗೆ ಸ್ವೀಕರಿಸುತ್ತಾರೆ ಅಂತ. "ಹಾಡ್ತಾ ಹಾಡ್ತಾ ರಾಗ" ಅನ್ನುವಂತೆ, ಬಳಸುತ್ತಾ ಬಳಸುತ್ತಾ ಎಲ್ಲರೂ ಮೆಚ್ಚಿ, ಬಳಕೆಗೆ ತಂದರೆ, ಒಳ್ಳೆಯದೇ ಆಯಿತು. ನನಗೆ, ವೈಯಕ್ತಿಕವಾಗಿ, ಈ ಪದಗಳು ಚಿಕ್ಕದಾಗಿ-ಚೊಕ್ಕವಾಗಿದ್ದು, ಇಷ್ಟವಾದವು.
ಆದರೆ "ಹಿಗ್ಗಿಸು/ಕುಗ್ಗಿಸು"ಗಾದರೆ ನಿಘಂಟಿನ ಸಹಾಯವಿಲ್ಲದೇ ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಅಂತ ನನ್ನ ಅನಿಸಿಕೆ. ಯಾಕೆಂದರೆ ಕನ್ನಡೀಕರಣಗೊಂಡ ಪದಗಳ ಮೊದಲ ಸ್ಪರ್ಧೆ ಈಗಾಗಲೇ ಇದ್ದ Maximize/Minimize ಜತೆ ಅನ್ನುವುದನ್ನು ನಾವು ಮರೆಯಬಾರದು ಅಲ್ಲವೇ! ಹೊಸ ಪದಗಳನ್ನು ಸ್ವಾಗತಿಸುವ ಮನೋಭಾವದಲ್ಲಿ, ತುಸು ಶ್ರಮ ವಹಿಸಿ, ನಿಘಂಟು ನೋಡಿ, ಅರ್ಥ ತಿಳಿದಲ್ಲಿ ಪರವಾಗಿಲ್ಲ. ಅದು ಬಿಟ್ಟು, "ಅಯ್ಯೋ, ಇದ್ಯಾವ ಪದಾಂತ ಹಾಕಿದ್ದಾರೆ, ಹೊಗೋ ಮಾರಾಯ, ಇದರ ಸಹವಾಸವೇ ಬೇಡ" ಅಂತ ಮೂಗು ಮುರಿದರೆ, ಇಷ್ಟೆಲ್ಲ ಶ್ರಮ ಪಟ್ಟದ್ದೂ ವ್ಯರ್ಥ ಅಲ್ಲವೇ?
ಅದೂ ಅಲ್ಲದೇ Unzip ಅನ್ನುವುದು ನಿಜಕ್ಕೂ Zipನ ವಿರುದ್ಧ ಅಲ್ಲ ಅಲ್ಲವೇ? ನೀವೇ ಯೋಚಿಸಿ; zip ಮಾಡುವುದು ಗಾತ್ರದಲ್ಲಿ ಕಡತವನ್ನು ಕುಗ್ಗಿಸುತ್ತದೆ. ಆದರೆ unzip ಅದನ್ನು ಗಾತ್ರದಲ್ಲಿ ಹಿಗ್ಗಿಸುವುದಿಲ್ಲ; ಮೊದಲಿದ್ದ ಗಾತ್ರಕ್ಕೆ ತರುತ್ತದೆ. ಹಾಗಾಗಿ Zip/Unzipಗೆ ಬೇರೆ ಪದಗಳನ್ನು ಹುಡುಕಬಹುದೇನೋ? ಏನಂತೀರಾ?
ಈ ರೀತಿಯ ಅನುವಾದ ಮಾಡುವಾಗ ನಾವು ಪದಶಃ ಅನುವಾದಕ್ಕಿಂತ, ಕೆಲವೊಮ್ಮೆ ಭಾವಾನುವಾದ ಮಾಡುವುದೇ ಸೂಕ್ತವೇನೋ ಅಂತ ನನ್ನ ಭಾವನೆ. ಇದೊಂದು ರೀತಿಯ paradigm shift ಅನ್ನುವ ಹಾಗೆ. ಪದಶಃ ಅನುವಾದದಿಂದ ನಮ್ಮನ್ನು ನಾವು ಬಿಡಿಸಿಕೊಂಡು ಈ ಕೆಲಸ ಮಾಡಬೇಕಾದೀತು. ನಾನು translate.sampada.net ನಲ್ಲಿ ಮೋಝಿಲ್ಲಾವನ್ನು ಅನುವಾದ ಮಾಡುವಾಗ, ನಿನ್ನೆ, ಕೆಲವೊಂದಕ್ಕೆ ಈ ರೀತಿ ಅನುವಾದ ಮಾಡಲು ಪ್ರಯತ್ನಿಸಿದೆ.
ನಿಮಗೆ ಏನನ್ನಿಸಿತು ಅಂತ ತಿಳಿಸಿ.
- ಶ್ಯಾಮ್ ಕಿಶೋರ್