ಮೆಚ್ಚುಗೆ : Minimize and Maximize
- ಅನಿಸಿಕೆ: Minimize and Maximize By: Shyam Kishore (Jan 21 2007 - 3:09pm)
- Re: ಅನಿಸಿಕೆ: Minimize and Maximize By: vardhana (Jan 31 2007 - 3:04pm)
- ಮೆಚ್ಚುಗೆ : Minimize and Maximize By: Sunil Jayaprakash (Jan 21 2007 - 10:06pm)
- ಉ: Minimize and Maximize By: Shyam Kishore (Jan 22 2007 - 12:27pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ನಗು ತಂದ ವಿಚಾರ: ನಮ್ಮ ದನಿ..... By: Sunil Jayaprakash (Jan 31 2007 - 11:47pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ಮಗುದೊಂದು ಅನಿಸಿಕೆ : Minimize and Maximize By: bhatpp (Jan 22 2007 - 4:39am)
- Re: Minimize and Maximize By: shreekant.mishrikoti (Jan 22 2007 - 11:29am)
- ಉ: Minimize and Maximize By: Shyam Kishore (Jan 22 2007 - 12:27pm)

RSS:
ಮೆಚ್ಚುಗೆ : Minimize and Maximize
ಶ್ಯಾಮ್ ಕಿಶೋರ್,
ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕೆ ತುಂಬಾ ಸವಿಯೊದಗು
. ನಿಮ್ಮ ಮಾತುಗಳಿಗೆ ನನ್ನ ದನಿಯನ್ನು ಸೇರಿಸುತ್ತಿರುವೆ. ಇವುಗಳನ್ನು ಕುರಿತು ಬಿಡುವಾದಾಗ ಚರ್ಚಿಸಿ ನಮ್ಮ ದನಿಯೆಡೆಗೆ ಸಾಗುವ ಪ್ರಯತ್ನವನ್ನು ಮಾಡೋಣ.
ಆಕ್ಚುಯಲಿ ಕುಗ್ಗಿಸು, ಹಿಗ್ಗಿಸುವನ್ನೇ Minimize Maximize ಅರ್ಥದಲ್ಲಿ ಅನೇಕ ಕಡೆ ಬಳಸಿರುವೆ. ಆದರೆ ಕುಗ್ಗಿಸು, ಹಿಗ್ಗಿಸು ಎಂಬುದನ್ನು zipಗೆ ಇಡಲು ಸಾಧ್ಯವೇ ಎಂಬುದಾಗಿಯೇ ನಾನು ಬಹಳವಾಗಿ ಯೋಚಿಸುತ್ತಿರುವೆ. ನಿಮ್ಮ ಸಲಹೆ ಸೂಕ್ತವೆನಿಸಿತು. ಸರಿ, zip ಮತ್ತು unzipಗಳಿಗೆ ಬೇರೆಯೇನನ್ನಾದರು ಮಾಡೋಣ ಬಿಡಿ
ಇದನ್ನು ನಾನೂ ಒಪ್ಪುತ್ತೇನೆ. ಆದರೂ ಕೆಲವೊಮ್ಮೆ ಮರೆತುಹೋಗಿರುವುದನ್ನು ನೆನಪಿಸಿಕೊಂಡು ಅದಕ್ಕೆ ಹೊಸ ಅರ್ಥ ಕೊಡಲೇ ಬೇಕಾಗುತ್ತದೆ. ನನ್ನ ಪ್ರಯತ್ನ ಇಷ್ಟೇ, ಗ್ರಾಮ್ಯವಲ್ಲದ ಕನ್ನಡ ಪದಗಳೂ ಇದೆ ಎಂಬುದನ್ನು ಎತ್ತಿಹಿಡಿಯುವುದು. ಸೃಜನಶೀಲ ಸಾಹಿತ್ಯಕ್ಕಷ್ಟೇ ಕನ್ನಡ ಸೀಮಿತ ಎಂಬ ಭಾವನೆ ನಮ್ಮಿಂದ ದೂರವಾಗಬೇಕು. ಅದರಲ್ಲೂ ಬಳಕೆಯಲ್ಲಿಲ್ಲದ ಸಂಸ್ಕೃತದ ಪದಗಳನ್ನು ತಂತ್ರಜ್ಞಾನದ ಹೆಸರಿನಲ್ಲಿ ಕನ್ನಡಕ್ಕೆ ಬಲವಂತವಾಗಿ ತುರುಕುವ ನಮ್ಮ ಮನೋಭಾವ ನಿಜಕ್ಕೂ ಒಳ್ಳೆಯದಲ್ಲ ಎನ್ನುವುದು ವೈಯಕ್ತಿಕ ಭಾವನೆ. ಒಂದು ವೇಳೆ ನಾವು ಕನ್ನಡಿಗರು ಹೊಸ ಪದವನ್ನೇ(Cache, Memory, Hard Disk, CD, DVD) ಕಲಿಯಬೇಕಾದ ಸಂದರ್ಭ ಬಂದಲ್ಲಿ ಇಂಗ್ಲೀಷನ್ನೇ ಕಲಿಯೋಣ(ತಂತ್ರಜ್ಞಾನ ಇನ್ನೂ ಹತ್ತಿರವೆನಿಸುತ್ತದೆ) ಅಥವಾ ಇರುವ ಕನ್ನಡ ಪದಕ್ಕೇ ಹೊಸ ಅರ್ಥವನ್ನು ನೀಡೋಣ. ನೀವೇನಂತೀರಾ ?
ಉದಾ - ಇಲ್ಲಿ ಯಾರನ್ನೂ ಟೀಕಿಸುವ ಉದ್ದೇಶ ನಿಜಕ್ಕೂ ನನಗೆ ಎಳ್ಳಷ್ಟೂ ಇಲ್ಲ. ಬದಲಾಗಿ ಚರ್ಚಿಸುವ ಉದ್ದೇಶದಿಂದ ಮಾತ್ರವೇ ಹಾಕುತ್ತಿರುವುದು. kn.wikipedia.orgನಲ್ಲಿ Random articleಗೆ ಮಾಡಿರುವ ಅನುವಾದ ಯಾದೃಚ್ಛಿಕ ಪುಟ. ಈ ಯಾದೃಚ್ಛಿಕ ಎಂಬ ಬಳಕೆಯನ್ನು ನಾವ್ಯಾರಾದರು ಎಂದಾದರೂ ಬಳಸಿದ್ದೇವೇಯೇ ನೀವೇ ಯೋಚಿಸಿ. ಇದು ಕನ್ನಡಿಗರಿಗೆ ಹೊಸ ಪದವಲ್ಲವೇ ? ಯಾವುದಾದರೊಂದು ಪುಟ ಅಂತಲೇ ಹೇಳಬಹುದಲ್ಲವೇ, ಇಲ್ಲವೇ ಅದು ಗ್ರಾಮ್ಯವೆನಿಸಿದರೆ ರಾಂಡಮ್ ಪುಟ ಅಂತಲೇ ಹೇಳಬಹುದು? ಪರ್ವಿಸು, ಪರ್ವಳಿಸು ಎಂಬ ಪ್ರಯೋಗಕ್ಕೆ ಸಂಬಂಧಿಸಿದ್ದು ಅಂತಲ್ಲ. ಆದರೆ ಸಂಸ್ಕೃತದ ವಿಷಯ ಬಂದಾಗ ಹೊಸತನ್ನು ಸುಲಭವಾಗಿ ಒಪ್ಪಿಕೊಳ್ಳುವ ನಾವು, ಕನ್ನಡದ ಅಥವಾ ಇಂಗ್ಲೀಷಿನ ವಿಷಯ ಬಂದಾಗ ಹಿಂಜರಿಯುವುದು ಏಕೆ