ಮಗುದೊಂದು ಅನಿಸಿಕೆ : Minimize and Maximize
- ಅನಿಸಿಕೆ: Minimize and Maximize By: Shyam Kishore (Jan 21 2007 - 3:09pm)
- Re: ಅನಿಸಿಕೆ: Minimize and Maximize By: vardhana (Jan 31 2007 - 3:04pm)
- ಮೆಚ್ಚುಗೆ : Minimize and Maximize By: Sunil Jayaprakash (Jan 21 2007 - 10:06pm)
- ಉ: Minimize and Maximize By: Shyam Kishore (Jan 22 2007 - 12:27pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ನಗು ತಂದ ವಿಚಾರ: ನಮ್ಮ ದನಿ..... By: Sunil Jayaprakash (Jan 31 2007 - 11:47pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ಮಗುದೊಂದು ಅನಿಸಿಕೆ : Minimize and Maximize By: bhatpp (Jan 22 2007 - 4:39am)
- Re: Minimize and Maximize By: shreekant.mishrikoti (Jan 22 2007 - 11:29am)
- ಉ: Minimize and Maximize By: Shyam Kishore (Jan 22 2007 - 12:27pm)

RSS:
ಮಗುದೊಂದು ಅನಿಸಿಕೆ : Minimize and Maximize
ಸಂದರ್ಭಕ್ಕೆ ತಕ್ಕಂತೆ ಹಿಗ್ಗಿಸು/ಕುಗ್ಗಿಸು ಎಂಬೆರಡು ಪದಗಳನ್ನೇ maximize/minimize ಹಾಗೂ unzip/zip ಗಳಿಗೆ ಬದಲಾಗಿ ಬಳಸಬಹುದಲ್ಲವೇ? ಅಥವಾ zip/unzip ಗಳ ಬದಲಾಗಿ, ವಿಶೇಷಣದ ಜೊತೆಗೆ, ಕಡತದ ಗಾತ್ರ ಹೆಚ್ಚಿಸು/ತಗ್ಗಿಸು ಎಂದೂ ಹೇಳಬಹುದಲ್ಲವೇ?
ಹೊಸ, ಅಥವಾ ರೂಪಾಂತರಗೊಂಡ ಪದಗಳನ್ನು (ಉದಾ: ಪರ್ವಳಿಸು, ಇತ್ಯಾದಿ), ಪದಗಳನ್ನು ತಿರಸ್ಕರಿಸುವ ಉದ್ದೇಶ ನನ್ನದಲ್ಲ, ಆದರೆ ಇಲ್ಲಿ ಈ ಯತ್ನದ ಅಗತ್ಯವಿಲ್ಲ ಎಂದು ನನ್ನ ಅನಿಸಿಕೆ. ಯಾಕೆಂದರೆ, ಹಿಗ್ಗಿಸು/ಕುಗ್ಗಿಸು, ಹೆಚ್ಚಿಸು/ತಗ್ಗಿಸು, ಅಲ್ಲದೇ ಕನ್ನಡ/ಸಂಸ್ಕೃತ ಪದಗಳಾದ ವೃದ್ಧಿಸು/ಕ್ಷೀಣಿಸು ಎಂಬವುಗಳನ್ನೂ ಇಲ್ಲಿ ಬಳಸಬಹುದಾಗಿದೆ. ಇನ್ನು ಹಿಂಜರಿಕೆಯ ವಿಚಾರ, ದೈನಂದಿನ ಬಳಕೆಯಲ್ಲಿ ಈ ಹಿಂಜರಿಕೆಯಿಲ್ಲವೆಂದೇ ನನ್ನ ತಿಳುವಳಿಕೆ. ಅಂದರೆ, ಕನ್ನಡ ಅಥವಾ ಹೆಚ್ಚಾಗಿ ಇಂಗ್ಲಿಷ್ ನಾಮಪದಗಳ ಜೊತೆಗೆ ಕನ್ನಡ ಕ್ರಿಯಾಪದಗಳನ್ನು ಜೋಡಿಸಿಬಿಡುವುದು ವಾಡಿಕೆ (ಉದಾ: file size ದೊಡ್ಡದು/ಸಣ್ಣದು ಮಾಡು, window maximize/minimize ಮಾಡು). ಬರೆಯುವ ವಿಷಯಕ್ಕೆ ಬಂದಾಗ ಮಾತ್ರ ಈ ಮಡಿವಂತಿಕೆ (ಬರೀ ನಮ್ಮಲಲ್ಲ, ಎಲ್ಲವರಲ್ಲೂ, ಅಂದರೆ ಎಲ್ಲಾ ಭಾಷೆಗಳ ವಿಚಾರದಲ್ಲೂ)
.