ಉ: Minimize and Maximize
- ಅನಿಸಿಕೆ: Minimize and Maximize By: Shyam Kishore (Jan 21 2007 - 3:09pm)
- Re: ಅನಿಸಿಕೆ: Minimize and Maximize By: vardhana (Jan 31 2007 - 3:04pm)
- ಮೆಚ್ಚುಗೆ : Minimize and Maximize By: Sunil Jayaprakash (Jan 21 2007 - 10:06pm)
- ಉ: Minimize and Maximize By: Shyam Kishore (Jan 22 2007 - 12:27pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ನಗು ತಂದ ವಿಚಾರ: ನಮ್ಮ ದನಿ..... By: Sunil Jayaprakash (Jan 31 2007 - 11:47pm)
- ನಮ್ಮ ದನಿ: Minimize and Maximize By: Sunil Jayaprakash (Jan 22 2007 - 3:50pm)
- ಮಗುದೊಂದು ಅನಿಸಿಕೆ : Minimize and Maximize By: bhatpp (Jan 22 2007 - 4:39am)
- Re: Minimize and Maximize By: shreekant.mishrikoti (Jan 22 2007 - 11:29am)
- ಉ: Minimize and Maximize By: Shyam Kishore (Jan 22 2007 - 12:27pm)

RSS:
ಉ: Minimize and Maximize
ಸುನಿಲ್,
ಭಟ್ ಅವರು ಹೇಳಿದಂತೆ ಕೆಲವೆಡೆ "ಸಾಂದರ್ಭಿಕವಾಗಿ" ಒಂದೇ ಪದವನ್ನು ಬಳಸಬಹುದು. ಆಯಾ ಸಂದರ್ಭಕ್ಕೆ ತಕ್ಕಂತೆ, ಬೇರೆ ಬೇರೆ ಅರ್ಥಗಳು ಬಳಸುವವರಿಗೆ ಹೊಳೆಯುತ್ತವೆ. ಈ ಅಂಶ ಚೆನ್ನಾಗಿದೆ ಅಲ್ಲವೇ?
ಹೌದು, ಕೆಲವೆಡೆ ಸರಳ ಆಂಗ್ಲ ಪದಗಳನ್ನೂ ಬರಮಾಡಿಕೊಳ್ಳಬಹುದು. ನೀವು ಕೊಟ್ಟ ಉದಾಹರಣೆಯಂತೆ, "ಯಾದೃಚ್ಛಿಕ" ಪದ ಕೂಡ, ಸಾಮಾನ್ಯವಾಗಿ ಈಗೀಗ ಬಳಕೆಯಲ್ಲಿಲ್ಲ. "ಯಾವುದಾದರೂ ಪುಟ" ಅನ್ನುವುದು ಗ್ರಾಮ್ಯ ಅನ್ನುವುದಕ್ಕಿಂತ, ಸ್ವಲ್ಪ ಗೊಂದಲವನ್ನು ಸೂಚಿಸುತ್ತದೆ. ಇಂತಹ ಕಡೆಗಳಲ್ಲಿ "ರಾಂಡಮ್ ಪುಟ" ಎನ್ನುವ ಸರಳ ಪದದ ಬಳಕೆಗೆ (ಅದು ಆಂಗ್ಲ ಪದವಾದರೂ ಕೂಡ) ನಾನೂ ಸಹ ದನಿಗೂಡಿಸುತ್ತೇನೆ.
"Minimize/Maximize"ಗಳಿಗೆ ಮಿಶ್ರಿಕೋಟಿಯವರು ಸೂಚಿಸಿದಂತೆ "ಅತಿ ದೊಡ್ಡದಾಗಿಸು/ಅತಿ ಸಣ್ಣದಾಗಿಸು" ಕೂಡ ಚೆನ್ನಾಗಿದೆ. ಸರಳವಾಗಿದೆ ಮತ್ತು ತಕ್ಕುದಾಗಿದೆ ಅಂತ ನನ್ನ ಅನಿಸಿಕೆ. ಆಗ ಬೇಕಿದ್ದಲ್ಲಿ "ಹಿಗ್ಗಿಸು/ಕುಗ್ಗಿಸು"ಗಳನ್ನು zip/unzipಗೆ ಬಳಸಬಹುದು. ಏನಂತೀರಾ?
- ಶ್ಯಾಮ್ ಕಿಶೋರ್