ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
- ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ By: Shyam Kishore (Jan 23 2007 - 12:28pm)
- Re: ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ By: ಸಂಗನಗೌಡ (Jan 23 2007 - 1:52pm)
- ಉ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ By: hpn (Jan 23 2007 - 11:23am)


RSS:
ಅನಿಸಿಕೆ: ಶಿವಾಜಿನಗರದಲ್ಲಿ ಬಡಿ-ಕಡಿ : ಕೊಳಕು ರಾಜಕೀಯದ ಫಲ
ಒಂದು ವೇಳೆ ಎಲ್ಲ ಕೋಮಿನವರೂ ಪರಸ್ಪರ ಹೊಂದಾಣಿಕೆಯಿಂದ ಇರುತ್ತೀವಿ ಅಂತ ನಾವು (ಸಾಮಾನ್ಯ ಜನರು) ನಿರ್ಧರಿಸಿದರೂ, ಈ ನಮ್ಮ "ನೇತಾರರು" ಬಿಡೋದಿಲ್ಲ. ಅವರ ಬೇಳೆ ಬೇಯಬೇಕಲ್ಲ. ಒಂದು ಕೋಮಿನವರು ಯಾವುದಾದರೂ ಒಂದು ಸಮಾವೇಶ ನಡೆಸಿದಾಗ, ಅದರಲ್ಲಿ ಹೀಗೆ ಗಲಾಟೆಯಾಯಿತು, ಅದಕ್ಕೆ ಕಾರಣ ಇನ್ನೊಂದು ಕೋಮಿನವರು ಅಂತೆಲ್ಲ ಕೂಗುತ್ತಾರಲ್ಲ, ನನಗೇನೋ ಅನುಮಾನ. ಇವರೇ ಬೇಕಾದರೆ "ಬಾಡಿಗೆ ಜನರನ್ನು" ಬಿಟ್ಟು ಆ ರೀತಿ ಮಾಡಿಸಿದ್ದರೂ ಮಾಡಿಸಿರುತ್ತಾರೆ. ಒಟ್ಟಿನಲ್ಲಿ ಆಗಾಗ ಗಲಭೆಗಳು ಆಗುತ್ತಿರಬೇಕು. ಕೊನೆಗೆ ಅನುಭವಿಸುವುದು ನಾವು, ನಮ್ಮಂಥವರು.
ಅದರೆ ಇದರಲ್ಲಿ, ಮುಕ್ತವಾಗಿ "ವೇದಿಕೆ"ಗಳಲ್ಲಿ ಚರ್ಚಿಸಲಾಗದಂತಹ ಒಳ ಸುಳಿವುಗಳೂ ಇವೆ ಅನ್ನೋದು ಕಟು ಸತ್ಯ. ಕೆಲವೊಮ್ಮೆ ಬರೆಯುವುದೂ ಬಹಳ ಕಷ್ಟ. ಏಕೆಂದರೆ "ಮತ, ಧರ್ಮ" ಅನ್ನೋದು ಬಹಳ ವೈಯಕ್ತಿಕ ಶ್ರದ್ಧೆಯ ವಿಚಾರ (ಯಾವ ಕೋಮಿನವರಿಗೇ ಆದರೂ) ನೋಡಿ.
- ಶ್ಯಾಮ್ ಕಿಶೋರ್