ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು
- ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
- ತಂಜಾವೂರೀಕರಣ By: ismail (Jan 24 2007 - 8:32pm)
- Re: ತಂಜಾವೂರೀಕರಣ By: ವೈಭವ (Jan 25 2007 - 9:28am)
- ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)
- ತಂಜಾವೂರೀಕರಣ By: ismail (Jan 24 2007 - 8:32pm)

RSS:
ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು
ನಾನು ಇತ್ತೀಚೆಗೆ ಗಮನಿಸಿದ ಎರಡು ಸ್ಥಳಗಳೆಂದರೆ
೧. ಹೊರನಾಡು ಅನ್ನಪೂರ್ಣೇಶ್ವರೀ ದೇವಸ್ಥಾನ - ಈ ದೇವಸ್ಥಾನದ ದ್ವಾರದಲ್ಲಿರುವ ಸಿಂಹ ಹೊಯ್ಸಳರ ಸಿಂಹವನ್ನು ಹೋಲುವುದೇ ಇಲ್ಲ. ನಾಲಗೆ ಚಾಚಿಕೊಂಡಿರುವ ಸಿಂಹಗಳು ನವೀಕರಣದ ಹೆಸರಿನಲ್ಲಿ ನುಸುಳಿವೆಯೇ ? ಇಲ್ಲಿ ಬಳಿಯಲಾಗಿರುವ ತೆಳು ನೀಲಿ ಬಣ್ಣವೂ ಕೂಡ ನನಗೆ ಹತ್ತಿರವೆನಿಸಲಿಲ್ಲ.

೨. ಮೈಸೂರಿನಿಂದ ಬಂಡೀಪುರಕ್ಕೆ ಹೋಗುವ ದಾರಿಯಲ್ಲಿ ಸಿಗುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ. ಮೈಸೂರಿಗೆ ಇಷ್ಟು ಹತ್ತಿರವಿದ್ದಾಗಿಯೂ ಕೂಡ ಇಲ್ಲಿರುವ ದೇವಸ್ಥಾನ ಪೂಜಾವಿಧಾನದಲ್ಲಾಗಲೀ, ವಾಸ್ತುಶಿಲ್ಪದಲ್ಲಾಗಲೀ, ಕರ್ನಾಟಕದ್ದು ಅಂತ ಅನ್ನಿಸುವುದೇ ಇಲ್ಲ.
ಪ್ರಕೃತಿ ಸೌಂದರ್ಯವನ್ನು ಸವಿದು ಬರಬೇಕಷ್ಟೇ.
ಈ ಮಾತು ತುಂಬಾ ಇಷ್ಟವಾಯಿತು. ಧರ್ಮಶ್ರೀ ಕಾದಂಬರಿಯಲ್ಲಿ ಬರುವ ಈ ರೀತಿಯ ಒಂದು ಮಾತು ನನಗೆ ನಿಜಕ್ಕೂ ಇಷ್ಟವಾಗಿತ್ತು. ದೇವಸ್ಥಾನ, ಧರ್ಮ, ವಾಸ್ತುಶಿಲ್ಪ, ಕಲೆ (ಸಂಗೀತ, ನೃತ್ಯ ಮುಂತಾದವು) ಮತ್ತು ಆಧ್ಯಾತ್ಮ ಎಲ್ಲ ಕಡೆಯೂ ಪ್ರಾಚೀನ ಕಾಲದಿಂದ ಹೀಗೆ ಒಂದಕ್ಕೊಂದು ಜೊತೆಗೂಡುತ್ತಲೇ ಒಂದಕ್ಕೊಂದು ಪೂರಕವಾದ ಕೆಲಸ ಮಾಡಿಕೊಂಡು ಸಾಗಿವೆಯೇನೋ ಅಂತನಿಸುತ್ತದೆ. ಬೇಲೂರಿನಲ್ಲಿ ಚೆನ್ನಕೇಶವನಿದ್ದರೂ, ದೇವಸ್ಥಾನದ ಹೊರ ಆವರಣವಲ್ಲದೆ, ಆ ನಕ್ಷತ್ರಾಕಾರದ ಕಲ್ಲಿನಲ್ಲಿಯೂ ಕೂಡ ಜೈನ ಸನ್ಯಾಸಿಗಳ ಕೆತ್ತನೆಗಳಿರುವುದನ್ನು ಗಮನಿಸುವವರು ವಿರಳ.
ಹಾಗಾದರೆ, ನಿಜಕ್ಕೂ ನೀವು ಪುಣ್ಯವಂತರು ಬಿಡಿ. ಅಂದ ಹಾಗೆ ವಂಶಪಾರಂಪರ್ಯವಾಗಿ ಈ ಕಲೆ ನಿಮಗೂ ಸಿದ್ಧಿಸಿದೆಯೇ. ಇಲ್ಲವಾದರೆ ಶೇಮ್, ಶೇಮ್.