Re: ತಂಜಾವೂರೀಕರಣ
- ದನಿಗೂಡು: ಏಕೆ ಕನ್ನಡಿಗ ಶಿಲ್ಪಿಗಳನ್ನು ಕಡೆಗಣಿಸಲಾಗಿದೆ? By: Shyam Kishore (Jan 24 2007 - 12:21pm)
- ತಂಜಾವೂರೀಕರಣ By: ismail (Jan 24 2007 - 8:32pm)
- Re: ತಂಜಾವೂರೀಕರಣ By: ವೈಭವ (Jan 25 2007 - 9:28am)
- ಮತ್ತಷ್ಟು ತಂಜಾವೂರೀಕರಣ ಉದಾಹರಣೆಗಳು By: Sunil Jayaprakash (Jan 24 2007 - 11:06pm)
- ತಂಜಾವೂರೀಕರಣ By: ismail (Jan 24 2007 - 8:32pm)

RSS:
Re: ತಂಜಾವೂರೀಕರಣ
ಧನ್ಯವಾದಗಳು ಇಸ್ಮಾಯಿಲ್ ರವರೆ.
ನೀವು ಹೇಳುವುದು ಅರ್ಥವತ್ತಾಗಿದೆ. ನಮ್ಮ ಹಿಂದಿನವರು( ಹೊಯ್ಸಳ, ಚಾಲುಕ್ಯ) ದೇವರ ನೆಪ ಮಾಡಿಕೊಂಡು ಅದ್ಭುತ ಕಲಾಕೃತಿಗಳನ್ನು ರಚಿಸಿ ಹೋಗಿದ್ದಾರೆ. ಅವರ ದುಡಿಮೆಗೆ ನಾವು ಬೆಲೆ ಕೊಡಬೇಕಾದರೆ ನಾವು ವಾಸ್ತುಶಿಲ್ಪವನ್ನು ಅರ್ಥ ಮಾಡಿಕೊಂಡು ಅದರ ಮೂಲ ಆಶಯ ಧಕ್ಕೆ ಬಾರದಂತೆ ನವೀಕರಣಗೊಳಿಸುವುದು ಒಳಿತು. ಕನ್ನಡ ನಾಡಿಗೆ ತನ್ನದೆ ಆದ ವಾಸ್ತುಶಿಲ್ಪ ಸಂಪ್ರದಾಯ ಇದೆ. ಹೀಗುರುವಾಗ ಬೇರೆಯವರಿಗೆ ಮಣೆ ಹಾಕಿದರೆ ಉರಿದು ಹೋಗುತ್ತೆ. "ತಂಜಾವೂರಿಕರಣ" ಮತ್ತು "ಕಾಂಕ್ರೀಟಿಕರಣ" ಮಾಡಿ ನಾವು ನಮ್ಮ ಕಲೆಯನ್ನು ಕೊಲ್ಲುತ್ತಿದ್ದೇವೆ.
ಈ ಸಮಸ್ಯೆಯ ಇನ್ನೊಂದು ಮೊಗ್ಗಲು ನಮ್ಮ ಸರ್ಕಾರದ ದಿವ್ಯ ನಿರ್ಲಕ್ಷ್ಯ ಏಕೆಂದರೆ ನಾನು ಈಚೆಗೆ ಚಿತ್ರದುರ್ಗ ಪ್ರವಾಸ ಮಾಡಿದಾಗ "ಹೊಸದುರ್ಗ"ದ ( ಚಿತ್ರದುರ್ಗ ಜಿಲ್ಲೆಯ ಒಂದು ತಾಲ್ಲೂಕು) ಹತ್ತಿರ ( ಸುಮಾರು ೨೦-೩೦ ಕಿ.ಮೀ) ಇರುವ "ಬಾಗೂರು" ಎಂಬ ಹಳ್ಳಿಗೆ ಭೇಟಿ ನೀಡಿದ್ದೆ. ಇಲ್ಲಿರುವ ಹೊಯ್ಸಳರ ಕಾಲದ "ಚೆನ್ನಕೇಶವ ದೇವಾಲಯ" ಇನ್ನು ಎಲೆ ಮರೆಯ ಕಾಯಿಯಾಗಿ ಉಳಿದಿದೆ. ಅಲ್ಲಿಗೆ ಹೋದಾಗ ನನಗೆ ಆಶ್ಚರ್ಯ ಕಾದಿತ್ತು. ದೇವಳದ ಒಳ ಪ್ರಾಂಗಣದಲ್ಲಿ ಹುಡುಗರು "ಫುಟ್ ಬಾಲ್" ಆಡುತ್ತಿದ್ದ್ದರು. ಸುತ್ತಮುತ್ತ ನೋಡಿದಾಗ ಅಲ್ಲಿ ಯಾವ ಸ್ವಚ್ಚತೆಯನ್ನು ಕಾಪಾಡಿಲ್ಲ ಎಂದು ಅರ್ಥವಾಯಿತು.
ಈ ದೇವಳದ ವಿಶೇಷತೆಯೆಂದರೆ ದೇವಳದ ಪ್ರಾಂಗಣದಲ್ಲಿ ( ಒಳ ಹೊಕ್ಕರೆ ಬಲಭಾಗದಲ್ಲಿ) ಒಂದು ಸುಂದರವಾದ ಕಲ್ಲಿನ ಮಂಟಪವಿದೆ( ಬಹುಶಃ ಒಂದು ಶಿಲೆದು ಇರಬೇಕು). ಆ ಕಲ್ಲಿಗೆ( ಶಿಲೆ) ವಿಶಿಷ್ಟವಾದ ಬಣ್ಣವಿದೆ. ಪಕ್ಕದಲ್ಲೇ ಒಂದು ಕನ್ನಡ ಶಿಲಾಶಾಸನವಿದೆ. ಅದನ್ನು ಓದಲು ಪ್ರಯತ್ನ ಪಟ್ಟೆ. ಅದರೆ ಅದು ಬಹಳ ಶೋಚನೀಯ ಸ್ಥಿತಿಯಲ್ಲಿತ್ತು. ಆಗಲಿಲ್ಲ.
-ಜೈ ಕರ್ನಾಟಕ