ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

January 31, 2007 - 7:01pm — hpn

Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ?

hpn's picture

mishrikoti wrote:
ಮೊದಲನೇಯದಾಗಿ ನೀವು ಕೊಟ್ಟ ಎರಡನೆಯ ಲಿಂಕೂ ಮೊದಲನೆಯದನ್ನೇ ಸಂಪರ್ಕಿಸುತ್ತದೆ .

ಇದನ್ನು ಸರಿಪಡಿಸಲಾಗಿದೆ.

Quote:
ನಮ್ಮ ಈ ಲೋಕಲೈಸೇಷನ್ ಉದ್ದೇಶ ಜನ ಕಂಪ್ಯೂಟರ್ ಅನ್ನು ಬಳಸುವಲ್ಲಿ ಅನುಕೂಲವಾಗಲಿ ಎಂದೇ ಹೊರತು ತಾಂತ್ರಿಕ ವಿಷಯಗಳನ್ನು ಕಲಿಯಲಿ ಎಂದಲ್ಲ.

ವಿಷಯ ಅನುಕೂಲದ್ದಲ್ಲ. ಮರ ಹತ್ತಲು ಅನುಕೂಲ ಮಾಡಿಕೊಡುವುದು ಬೇರೆ. ಮರವನ್ನು ಹತ್ತಿಸಿ ಬರುವುದು ಬೇರೆ.*

ಎಲ್ಲ ಸುಲಭ ಮಾಡಿಬಿಟ್ಟರೆ ಉಳಿದವರು ಮೂರಾಣೆ ತಲೆಕೆಡಿಸಿಕೊಳ್ಳುವುದಿಲ್ಲ. ಸುಮ್ಮನೆ ಹಾಕ್ಕೊಳ್ತಾರೆ, ಬಳಸ್ತಾರೆ, "ಓಹೋ, ಚೆನ್ನಾಗಿದೆ ಅಂತಾರೆ", ತೆಗೆದು ಬಿಸಾಕ್ತಾರೆ. Passion ಉಳಿಯೋದಿಲ್ಲ. ಕೆಲವರು ಕೆಲಸ ಮಾಡ್ತಾನೇ ಇರ್ತಾರೆ - ಇನ್ನುಳಿದವರು ನೋಡ್ತಾನೇ ಇರ್ತಾರೆ.

ಅದೇ ಒಂದಷ್ಟು ಕಷ್ಟ ಪಟ್ಟ ಅನಂತರ ಕಂಡುಕೊಂಡರೆ "ಅಹಾ" ಎಂದುಕೊಂಡು ಸಂತಸಪಟ್ಟುಕೊಂಡು passionate ಆಗಿ ಬಳಸ್ತಾರೆ, ತಾವೂ ತೊಡಗಿಕೊಳ್ತಾರೆ. ಕಷ್ಟ ಪಟ್ಟು ಕಲೆತು ಮಾಡಿದ ಖುಷಿ ಸುಲಭವಾಗಿ ದೊರೆತದ್ದರಲ್ಲಿರುವುದಿಲ್ಲ.

ಹಾಗೆಯೇ ವಿಷಯ "ಎಲ್ಲ ಜನರ"ದ್ದಲ್ಲ ವಿಷಯ ನಮ್ಮಗಳದ್ದು - ಇದನ್ನು ಟೆಸ್ಟ್ ಮಾಡಿ ನೋಡಬೇಕಿರುವವರದ್ದು. ಹೊಸ ಲಿನಕ್ಸ್ ಆವೃತ್ತಿಗಳಲ್ಲಿ ಕನ್ನಡ ಲೊಕಾಲೆಯೊಂದಿಗೆ ಕನ್ನಡದಲ್ಲಿ ಗೈಮ್ ಹೇಗಿದ್ದರೂ ಬಂದೇ ಬರುತ್ತದೆ. ಆಗ ಅವರೇನೂ ಹೆಚ್ಚು ಮಾಡಬೇಕಾದದ್ದಿಲ್ಲ

Quote:
ಹೇಗೆ ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕು ಇತ್ಯಾದಿಗಳನ್ನು ಸಾಮಾನ್ಯ ಜನ ಕಲಿಯುವದಾದರೆ ಲೋಕಲೈಸೇಷನ್ ಏಕೆ ಬೇಕು ? ಎಲ್ಲರಿಗೂ ಕಲಿಯುವ ತಾಳ್ಮೆ , ಶಕ್ತಿ , ಪುರುಸೊತ್ತು ಇರುವದೇ ?

ಸಾಮಾನ್ಯ ಜನರು ಎಂದು ಬೌಂಡರಿ ಯಾಕೆ ಎಳೆಯಬೇಕು? ಜನ ಟಿವಿ ರಿಮೋಟು ಕಲಿಯೋದು ಕಷ್ಟ ಅಂತ ನೋಡೋದು ಬಿಟ್ಟಿದ್ದಾರೆಯೆ? ವಾಷಿಂಗ್ ಮೆಶೀನ್ ಬಳಸೋದು ಕಷ್ಟ, ತಾಳ್ಮೆ ಇಲ್ಲ ಅಂತ ಬಳಸೋದು ಬಿಟ್ಟಿದ್ದಾರೆಯೆ? ಕಾರಲ್ಲಿರೋ ಸ್ಟೀರಿಯೋ ಬಳಸೋದನ್ನ ಕಲಿಯೋದು ಬಿಟ್ಟಿದ್ದಾರೆಯೇ? ಮೊಬೈಲು ಬಳಸೋದನ್ನ ಕಲೆಯೋದು ಬಿಟ್ಟಿದ್ದಾರೆಯೆ?

ಇಂದಿನ ಜೀವನದಲ್ಲಿ ಯಾರಿಗೆ ತಾಳ್ಮೆಯಿದೆ? ಯಾರಿಗೆ ಪುರುಸೊತ್ತಿದೆ? ಎಲ್ಲರಿಗೂ ಪುರುಸೊತ್ತಿಲ್ಲ!
ನನಗೂ ಪುರುಸೊತ್ತಿಲ್ಲ, ನಿಮಗೂ ಪುರುಸೊತ್ತಿಲ್ಲ! ಆದರೆ ಇದರ ಬಗ್ಗೆ ಮಾತನಾಡುತ್ತಿದ್ದೇವೆಯಲ್ಲವೆ? ಯಾಕೆ? ನಮಗಿದರ ಬಗ್ಗೆ ಉತ್ಸಾಹ ಇದೆ, ನಮಗಿದು ಬೇಕು ಅನ್ಸತ್ತೆ, ಅದಕ್ಕೆ!

ಪುರುಸೊತ್ತು ಎಲ್ಲರೂ *ಮಾಡಿಕೊಳ್ಳಬೇಕು* - ಯಾರಿಗೂ‌ ಪುರುಸೊತ್ತಿರೋದಿಲ್ಲ. ಪುರುಸೊತ್ತಾಗೋದು ನಾವು ಕೆಲಸ ಮಾಡಲೇಬೇಕಾದಾಗ ಅಥವ ಅದರ ಬಗ್ಗೆ ನಮಗೆ ಉತ್ಸಾಹ ಇದ್ದಾಗ.

ಎಲ್ಲವೂ ಮಾಡಿಕೊಟ್ಟರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಮುದಾಯಗಳ ವಿಷಯವನ್ನು ಎತ್ತಿಕೊಂಡರೆ ನಾನು ಈ ಹಿಂದೆ ಹಲವು ಬಾರಿ ಹೇಳಿದಂತೆ - ಎಲ್ಲರದ್ದು ಒಂದಷ್ಟು ಜವಾಬ್ದಾರಿ ಇರುತ್ತದೆ. ಅದನ್ನು ಅವರವರುಗಳು ಮರೆಯಬಾರದು. ಪ್ರತಿಯೊಂದೂ ಕೆಲವರೇ ಮಾಡುವ ಸಮುದಾಯ "ಒಳ್ಳೆಯ ಸಮುದಾಯ" ಎನಿಸಿಕೊಳ್ಳುವುದಿಲ್ಲ.

ಶ್ಯಾಮ್ ಕಶ್ಯಪ್ ಸಮಾಜದಲ್ಲಿನ ನಮ್ಮ ಜವಾಬ್ದಾರಿಯ ಬಗ್ಗೆ ಒಂದು ಲೇಖನ ಬರೆದಿದ್ದರು. ಸಮುದಾಯಗಳಲ್ಲಿಯೂ ಹಾಗೆಯೇ. ಪ್ರತಿಯೊಬ್ಬರೂ ಅದನ್ನು ಸ್ವತಃ ಕಂಡುಕೊಳ್ಳಬೇಕು.

--
* ಕಂಪ್ಯೂಟರ್ ಕಲಿಯದೆ ಕಂಪ್ಯೂಟರ್ ಹೇಗೆ ಬಳಸುತ್ತೀರಿ? ತಂತ್ರಜ್ಞಾನದ ಸುಳಿವೇ ಇಲ್ಲದೆ ತಂತ್ರಜ್ಞಾನವನ್ನಾದರೂ ಹೇಗೆ ಬಳಸುತ್ತೀರಿ? ಕಲಿಯುವಿಕೆ ಬಿಟ್ಟು ಕೆಲಸ ಮಾಡಲಾಗದು. ಹಲವರನ್ನು ನೋಡಿದ್ದೇನೆ - ಅವರಿಗೆ ಲಿನಕ್ಸ್ ಬೇಕು, ಆದರೆ ಲಿನಕ್ಸ್ ಕಲಿಯಲು ಇಷ್ಟವಿಲ್ಲ. ಅವರು ಕೊಡುವ ಸಬೂಬು - "ನಮಗೆ ಕಲಿಯುವ ತಾಳ್ಮೆ ಇಲ್ಲ" ಅಂತಲೋ ಅಥವ "ನಮಗದು ತಲೆಗೆ ಹೋಗುವುದಿಲ್ಲ" ಅಂತಲೋ. ಕೆಲವರಂತೂ ಇನ್ನೂ pathetic - "ಲಿನಕ್ಸೇ ಸರಿ ಇಲ್ಲ" ಎಂದುಬಿಡುತ್ತಾರೆ - fox grape storyಯ ನರಿೆ ತರಾ!

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಗೈಮ್ ಕನ್ನಡದಲ್ಲಿ ಲಭ್ಯ By: hpn (9 replies) January 29, 2007 - 4:01pm
  • Re: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ? By: shreekant.mishrikoti (Jan 29 2007 - 4:53pm)
    • ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ? By: hpn (Jan 29 2007 - 6:12pm)
      • Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ? By: shreekant.mishrikoti (Jan 31 2007 - 2:42pm)
        • Re: ಉ: ಗೈಮ್ ಕನ್ನಡದಲ್ಲಿ ಲಭ್ಯ:- ಡೌನ್‍ಲೋಡ್ ಹೇಗೆ ? By: hpn (Jan 31 2007 - 7:01pm)
  • Re: ಗೈಮ್ ಕನ್ನಡದಲ್ಲಿ ಲಭ್ಯ By: ರಘುನಂದನ (Jan 29 2007 - 4:19pm)
    • ಉ: ಗೈಮ್ ಕನ್ನಡದಲ್ಲಿ ಲಭ್ಯ By: hpn (Jan 29 2007 - 4:31pm)
      • Re: ಉ: ಗೈಮ್ ಕನ್ನಡದಲ್ಲಿ ಲಭ್ಯ By: ರಘುನಂದನ (Jan 29 2007 - 6:11pm)
        • Re: ಉ: ಗೈಮ್ ಕನ್ನಡದಲ್ಲಿ ಲಭ್ಯ: ಕಿಡಿಗೇಡಿತನ ;) By: ರಘುನಂದನ (Feb 2 2007 - 1:08am)
        • ಉ: ಗೈಮ್ ಕನ್ನಡದಲ್ಲಿ ಲಭ್ಯ By: hpn (Jan 29 2007 - 6:17pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:08pm
  • Deeparavishankar
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 8, 2008 - 1:59pm
  • venkatesh
    ಉ: ವಿಮಾನದಿಂದ ಕೆಳಗೆ ಕಾಣುವ ಚಿತ್ರ !
    October 8, 2008 - 1:55pm
  • Deeparavishankar
    ಉ: ನನ್ನ ಮನಸ್ಸಿನ ಅಜ್ಞಾನ
    October 8, 2008 - 1:55pm
  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
  • Deeparavishankar
    ಉ: ಮರಳಿ ಬರಲಿ ಬಾಲ್ಯ
    October 8, 2008 - 1:44pm
  • siddharam
    ಉ: ಗಜಲ್
    October 8, 2008 - 1:30pm
  • Deeparavishankar
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 1:24pm
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 1:07pm
  • rasheedgm
    ಉ: ದಾನದ ಹಬ್ಬ ಈದ್ -ಉಲ್ - ಫಿತರ್
    October 8, 2008 - 12:46pm
ಇನ್ನಷ್ಟು


ಗುಣಕ್ಕೆ ಮಚ್ಚರಮುಂಟೇ?

— ರನ್ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator