ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ)
- ಎಷ್ಟು ಡಾಲರ್ ಭೇಟಿ? By: pavanaja (Sep 14 2005 - 12:08am)
- ಅಗಣಿತ By: tvsrinivas41 (Sep 14 2005 - 5:41am)
- ಪವನಜ -> ಬಿಲ್ ಗೇಟ್ಸ್ By: hpn (Sep 14 2005 - 2:11am)
- ಒಳ್ಳೆಯದೋ ಕೆಟ್ಟದೋ? By: pavanaja (Sep 14 2005 - 10:11am)
- ಒಳ್ಳೆಯ ದೃಷ್ಟಿಯಲ್ಲಿ By: tvsrinivas41 (Sep 14 2005 - 10:21pm)
- ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ) By: modmani (Sep 15 2005 - 1:46pm)
- ನಿಷ್ಟುರವಾದ ಉತ್ತರ, ಕ್ಷಮಿಸಬೇಕು By: (Sep 15 2005 - 2:32pm)
- ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ) By: modmani (Sep 15 2005 - 1:46pm)
- ಒಳ್ಳೆಯ ದೃಷ್ಟಿಯಲ್ಲಿ By: tvsrinivas41 (Sep 14 2005 - 10:21pm)
- ಒಳ್ಳೆಯದೋ ಕೆಟ್ಟದೋ? By: pavanaja (Sep 14 2005 - 10:11am)


RSS:
ಹೊಸ ಝೆನ್ ಕತೆ (ಕ್ಷಮಿಸಿ ಇದು ತಮಾಶೆಗಾಗಿ)
ಹಾಂ...
ಹಾಗಿದ್ದರೆ ಹೊಸ ಝೆನ್ ಕತೆ ಹೀಗಿರಬಹುದಾ..?
ಒಬ್ಬ ಝೆನ್ ಗುರು ಇದ್ದ. ಅವನ ಬಳಿ ಒಬ್ಬ ಸಾಫ಼್ಟ್‍ವೇರ್ ಎಂಜಿನಿಯರ್ ಬಂದ. "ಗುರುವೇ ನನಗೆ ಮನಶ್ಯಾಂತಿ ಬೇಕಾಗಿದೆ.. ದಾರಿ ತೋರು.." ಎಂದ.
ಗುರು ಅದಕ್ಕೆ "ನಾಳೆ ನಿನ್ನ ಲ್ಯಾಪ್‍ಟಾಪ್‍ನಲ್ಲಿ ವಿಂಡೋಸ್ ಲೋಡ್ ಮಾಡಿಕೊಂಡು ಬಾ.. ಮನಶ್ಯಾಂತಿ ತೋರಿಸುತ್ತೀನಿ" ಅಂದ.
ಮಾರನೇ ದಿನ ಎಂಜಿನಿಯರ್ ಲ್ಯಾಪ್‍ಟಾಪ್‍ನಲ್ಲಿ ವಿಂಡೋಸ್ ಲೋಡ್ ಮಾಡಿಕೊಂಡು ಹೋದ. ಗುರು ಏನೂ ಮಾತಾಡದೆ ನೂರು ಪುಟಗಳ ಒಂದು ಗ್ರಂಥವನ್ನು ಅವನ ಕೈಗಿತ್ತು "ಇದೆಲ್ಲವನ್ನೂ ಟೈಪಿಸು" ಎಂದ.
ಎಂಜಿನಿಯರ್ ಅದೆಲ್ಲವನ್ನೂ ಮುಗಿಸಿದ. ಆದರೂ ಆತನಿಗೆ ಮನಶ್ಯಾಂತಿ ಸಿಗಲಿಲ್ಲ.
ಮತ್ತೆ ಗುರುವನ್ನು ಕಂಡ. ಆಗ ಗುರು ಅವನಿಗೆ " ಇದೆಲ್ಲಾ ಟೈಪಿಸುವಾಗ ಎಷ್ಟು ಬಾರಿ ಸಿಸ್ಟಮ್ ರಿಬೂಟ್ ಮಾಡಿದೆ?" ಎಂದು ಕೇಳಿದ.
ಶಿಷ್ಯ ಬುದ್ದಿವಂತ. ಅವನು ಅದೆಲ್ಲವನ್ನೂ ಲೆಕ್ಕದಲ್ಲಿಟ್ಟುಕೊಂಡಿದ್ದ. "ಒಟ್ಟು ಹತ್ತು ಬಾರಿ ರಿಬೂಟ್ ಮತ್ತು ಎರಡು ಬಾರಿ ರಿಲೋಡ್" ಎಂದ.
"ಹಾಗಿದ್ದರೆ ನಿನ್ನ ಲ್ಯಾಪ್‍ಟಾಪ್ ಅನ್ನು ಎಸೆದುಬಿಡು" ಎಂದು ಗುರು ಹೇಳಿದ.
ಶಿಷ್ಯನಿಗೆ ಮನಶ್ಯಾಂತಿ ಸಿಕ್ಕಿತು ..