Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
- ಉ: ಜನವರಿ ತಿಂಗಳ ಅಂಕಿ ಅಂಶಗಳು - ನಮ್ಮ ಬೆನ್ನನ್ನು ನಾವೇ... By: Shyam Kishore (Feb 8 2007 - 8:23am)
- ಮಿಲಿಯನ್ ಹಿಟ್ಸ್ ದಾಟಿದ ಆನಂದ By: Sunil Jayaprakash (Feb 7 2007 - 5:56pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 6:16pm)
- Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: srivathsajoshi (Feb 7 2007 - 7:38pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 8:17pm)
- Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: srivathsajoshi (Feb 7 2007 - 8:24pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 8:35pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: agilenag (Apr 2 2008 - 4:40pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Apr 3 2008 - 12:23pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: agilenag (Apr 2 2008 - 4:40pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 8:35pm)
- Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: srivathsajoshi (Feb 7 2007 - 8:24pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 8:17pm)
- Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: srivathsajoshi (Feb 7 2007 - 7:38pm)
- ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ By: hpn (Feb 7 2007 - 6:16pm)

RSS:
Re: ಉ: ಮಿಲಿಯನ್ ಹಿಟ್ಸ್ ದಾಟಿದ ಆನಂದ
'ಹಿಟ್ಸ್'ಗೆ - ಮುಖ್ಯವಾಗಿ ಅಂತರ್ಜಾಲಪುಟವೊಂದಕ್ಕೆ ಸಂದರ್ಶಕರು ಭೇಟಿ ನೀಡುವ ವಿಷಯದಲ್ಲಿ - 'ಒದೆತ' ಸ್ವಲ್ಪ ಲಘುಮಟ್ಟದ್ದೆನಿಸಿದರೆ (ಅಸತ್ಯಾನ್ವೇಷಿಯ ಬ್ಲಾಗ್‍ನಲ್ಲಿ ಈ ಪದ ಸಮಂಜಸ ರೀತಿಯಲ್ಲಿ ಬಳಸಲ್ಪಡುತ್ತದೆ) ಗಾಂಭೀರ್ಯ ಹೆಚ್ಚಿರುವ ಇತರ ಪದಗಳನ್ನು ಬಳಸಬಹುದೇನೊ.
೧. ಸ್ಪರ್ಶ : ಸ್ಪರ್ಶಿಸುವವರಿಗೂ ಸ್ಪರ್ಶಿಸಲ್ಪಡುವವರಿಗೂ ಪುಳಕ ಕೊಡುವ ಪ್ರಕ್ರಿಯೆ. ಅಂತೆಯೇ 'ಸಂಪದ' ಪುಟಗಳಿಗೆ ಭೇಟಿ - ಸಂದರ್ಶಕನಿಗೂ, ಪುಟದೊಡೆಯನಿಗೂ ಪುಳಕ ತರುವಂಥದು.
೨. ಚುಂಬನ : ಸ್ಪರ್ಶದ್ದೇ ಸಮರ್ಥನೆ. ಇನ್ನಷ್ಟು ರೋಮಾಂಚನಗೊಳಿಸಬೇಕಿದ್ದರೆ ಈ ಪದ. ಚುಂಬನದಲ್ಲೂ ಕರ್ತೃ-ಕರ್ಮ ಎರಡಕ್ಕೂ ರೋಮಾಂಚನವಲ್ಲವೇ?
೩. ತಟ್ಟು : ಸ್ಪರ್ಶ, ಚುಂಬನ ಇತ್ಯಾದಿ ಸಂಸ್ಕೃತ ಪದಗಳು ಬೇಡವೆನಿಸಿದರೆ ಮತ್ತು ಅವನ್ನು ಈ ಸಂದರ್ಭದಲ್ಲಿ ನಾಮಪದ ರೂಪದಲ್ಲಷ್ಟೇ ಉಪಯೋಗಿಸಬಹುದು ಎಂದೆನಿಸಿದರೆ ಅಚ್ಚಕನ್ನಡದ 'ತಟ್ಟು' (ಕ್ರಿಯಾಪದ ಮತ್ತು ನಾಮಪದ ರೂಪಗಳಲ್ಲಿ hit ನಂತೆಯೇ) ಸಹ ಸೂಕ್ತವೆನಿಸೀತು. ಚಪ್ಪಾಳೆತಟ್ಟು, ಬೆನ್ನುತಟ್ಟು ಇದ್ದಂತೆ... "ಇವತ್ತು ಸಂಪದದಲ್ಲೊಂದು ಪುಟವನ್ನು ತಟ್ಟಿದೆ, ಬಹಳ ಚೆನ್ನಾಗಿತ್ತು..." ಅಥವಾ "ಸಂಪದದಲ್ಲಿ ನನ್ನ ಬ್ಲಾಗ್‍ಗೆ ಇತ್ತೀಚೆಗೆ ತಟ್ಟುಗಳ ಸಂಖ್ಯೆ ಹೆಚ್ಚಿದೆ..." ಇತ್ಯಾದಿ.