ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ...
- Re: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು? By: pavanaja (Mar 7 2007 - 11:35pm)
- Re : ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? By: suchara (Feb 8 2007 - 10:59am)
- A quick point to be noted your honour By: Sunil Jayaprakash (Feb 8 2007 - 10:36am)
- Re:point ಅದಲ್ಲ.. By: ASHOKKUMAR (Feb 8 2007 - 11:06am)
- Re:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು By: ASHOKKUMAR (Feb 8 2007 - 11:11am)
- ಉ:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು By: hpn (Feb 8 2007 - 11:59am)
- Re:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು By: ASHOKKUMAR (Feb 8 2007 - 11:11am)
- Re:point ಅದಲ್ಲ.. By: ASHOKKUMAR (Feb 8 2007 - 11:06am)
- ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ... By: Shyam Kishore (Feb 8 2007 - 8:52am)
- Re: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ. By: smurthygr (Mar 7 2007 - 8:12pm)
- ಉ: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ. By: hpn (Feb 8 2007 - 9:19am)
- re: random ಅಂತಹ ಪದ ಕನ್ನಡವಾಗಬಾರದು By: ASHOKKUMAR (Feb 8 2007 - 10:27am)
- ಉ: random ಅಂತಹ ಪದ ಕನ್ನಡವಾಗಬಾರದು By: hpn (Feb 8 2007 - 10:47am)
- re: random ಅಂತಹ ಪದ ಕನ್ನಡವಾಗಬಾರದು By: ASHOKKUMAR (Feb 8 2007 - 10:27am)
- ಉ: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? By: hpn (Feb 8 2007 - 12:36am)


RSS:
ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ...
ನನ್ನ ಅನಿಸಿಕೆ ಕೆಳಕಂಡಂತಿದೆ. ಚರ್ಚೆಯನ್ನು "ಉದ್ದಿಸುವ" ಉದ್ದೇಶ ನನ್ನದಲ್ಲ; ಆದರೆ ಕೆಲವೊಂದು ಸಂದೇಹಗಳು ಹಾಗೇ ಉಳಿದಿವೆ. ಹಾಗಾಗಿ ಬರೆಯುತ್ತಿದ್ದೇನೆ. ನಿಮಗೇನನ್ನಿಸಿತು ಅಂತ ಹೇಳಿ.
೧. ಹೌದು, ಕೆಲವೊಂದು ಪದಗಳಿಗೆ ಬದಲಾಗಿ, ಸುಮ್ಮನೆ ತರಲೇಬೇಕೂಂತ ನಾವು ಕನ್ನಡ ಪದಗಳನ್ನು ತಂದರೂ, ಜನ ಅವನ್ನು ತಿರಸ್ಕರಿಸಿದಲ್ಲಿ ನಮ್ಮ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಹಾಗೆಂದು ಎಲ್ಲಾ ಪದಗಳನ್ನೂ, "ಇದೇ, ಈಗಿರುವುದೇ ಸುಲಭ" ಅಂತ ಒಪ್ಪಿಕೊಂಡಲ್ಲಿ ಕೊನೆಗೆ ಕನ್ನಡೀಕರಣ, ಕನ್ನಡದ ಕಂಪ್ಯೂಟರ್ ಅನ್ನುವುದರ ಅರ್ಥ ಏನು? ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬರೆದ ಮಾತ್ರಕ್ಕೆ ಅವು ಕನ್ನಡದ್ದೇ ಆಗುತ್ತವೆಯೇ? ಅಲ್ಲದೇ ಇದರಿಂದ ನಾವು ಕನ್ನಡ ಬಳಕೆಯನ್ನು ಇನ್ನಷ್ಟು ಹಿಂದೆ ನೂಕಿದಂತೆ ಆಗುವುದಿಲ್ಲವೇ? ನಾನು ಮೊದಲೇ ಹೇಳಿದಂತೆ, ಇದು ಎಲ್ಲಾ ಪದಗಳಿಗೂ ಅನ್ವಯಿಸುವುದಿಲ್ಲ. ಕೆಲವೊಂದು ಪದಗಳನ್ನು ಹಾಗೆಯೇ (ಈಗಿರುವ ಇಂಗ್ಲಿಷ್ ಪದಗಳಂತೆ) ಬಳಸುವುದು ಖಂಡಿತ ಒಳ್ಳೆಯದು. ಆದರೆ ಈ ಒಂದು "ಆರೋಗ್ಯಕರ ಮಿಶ್ರಣ"ವನ್ನು (healthy mix of English and Kannada words) ಹೇಗೆ ಹದಕ್ಕೆ ತರೋದು? ಇದು ನಮ್ಮ ಮುಂದಿನ ದೊಡ್ಡ ಪ್ರಶ್ನೆ ಅಂತ ನನ್ನ ಅನಿಸಿಕೆ.
೨. ಕೆಲವು ಕನ್ನಡ ಪದಗಳನ್ನು, ಕೆಲವೊಮ್ಮೆ, ಕನ್ನಡಕ್ಕಾಗಿಯಾದರೂ ಬಳಕೆಗೆ ತರಬೇಕಾಗುತ್ತದೆ. ಇಲ್ಲವಾದಲ್ಲಿ ಈಗ ಪುಸ್ತಕಗಳಲ್ಲಿ ಮಾತ್ರ ಉಳಿದಿರುವ ಆ ಪದಗಳು ನಾಳೆ ಎಲ್ಲೂ ಕಣ್ಣಿಗೂ ಸಿಕ್ಕೋದಿಲ್ಲ.
೩. ಪುಸ್ತಕದ ಅನುವಾದ ತಲುಪುವುದಕ್ಕಿಂತ ಹೆಚ್ಚು ಜನರನ್ನು ಕಂಪ್ಯೂಟರಿನ ಅನುವಾದ ತಲುಪುತ್ತೆ ಅಲ್ಲವೇ? (ನಾಳೆ ಕನ್ನಡದ ಕಂಪ್ಯೂಟರ್ ಎಲ್ಲೆಡೆ ಬಳಕೆಗೆ ಬಂದಾಗ) ಹಾಗಿದ್ದಾಗ, ಇಂತಹ ಕಡೆ ನಾವು ಆದಷ್ಟೂ ಹೆಚ್ಚು ಕನ್ನಡ ಪದಗಳನ್ನು (ಸರಳವಾದ ಪದಗಳನ್ನು) ಬಳಸಿದರೆ ಒಳ್ಳೆಯದಲ್ಲವೇ? ಇದರಿಂದ ಕನ್ನಡದ ಬಳಕೆಗೆ ಇನ್ನಷ್ಟು ಬಲ ಬರುತ್ತದೆ ಅಲ್ಲವೇ?
ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ಅನುವಾದಕರಿಗೂ ಒಂದು "ಗೊತ್ತು-ಗುರಿ" ಸಿಕ್ಕಿದಂತಾಗುತ್ತದೆ. ಜನಾಭಿಪ್ರಾಯ ಯಾವ ಕಡೆಗಿದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ನಿಮ್ಮ ಅಭಿಪ್ರಾಯವನ್ನು, ಒಂದೆರಡು ಸಾಲುಗಳಲ್ಲಾದರೂ ಪರವಾಗಿಲ್ಲ, ತಪ್ಪದೇ ಬರೆಯಿರಿ.
- ಶ್ಯಾಮ್ ಕಿಶೋರ್