Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?
- Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು? By: ಶಶಾಂಕ (Feb 9 2007 - 1:22pm)
- Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು? By: prapancha (Feb 9 2007 - 1:51pm)
- Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು? By: keshavamurali (Feb 9 2007 - 12:59pm)
- Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು? By: Anand K (Feb 9 2007 - 1:19pm)

RSS:
Re: ನಮ್ಮ ದೇಶದಲ್ಲಿ ಬುದ್ದಿ ಜೀವಿಗಳು ಯಾರು?
ನಮಸ್ಕಾರ,
ಕಾರ್ನಾಡರಂಥವರನ್ನು "ಬುದ್ಧಿಜೀವಿಗಳು" ಎನ್ನುವ ಬದಲು "ಸುದ್ದಿಜೀವಿಗಳು" ಎನ್ನುವುದು ಸೂಕ್ತ ಅನ್ನಿಸುತ್ತದೆ. ಅವರ ಈ ತರಹದ ಪ್ರವೄತ್ತಿ ಟಿಪ್ಪು ಸುಲ್ತಾನನ ಮೇಲಿನ ಚರ್ಚೆಯಲ್ಲಿ ವ್ಯಕ್ತವಾಗಿತ್ತು. ಮೊದಲಿಗೆ ಶಂಕರಮೂರ್ತಿಯವರ ಹೇಳಿಕೆಯನ್ನು ಖಂಡತುಂಡವಾಗಿ ವಿರೋಧಿಸಿದ ಅವರು ಭೈರಪ್ಪನವರು ಸಾಧಾರವಾಗಿ ವಿವರಣೆ ನೀಡಿದ ನಂತರ "ನನಗೆ ನಾಟಕ ಬರೆಯಲು ಒಂದು ಒಳ್ಳೆ ಕಥೆ ಬೇಕಾಗಿತ್ತು ಅಷ್ಟೇ, ನಾನೇನು ಇತಿಹಾಸಕಾರನಲ್ಲ" ಎಂದು ತಿಪ್ಪೆ ಸಾರಿಸಿದ್ದರು.
ಇದೇ ತರಹದ ನಡವಳಿಕೆ ಕಾವೇರಿ ವಿವಾದದಲ್ಲು ವ್ಯಕ್ತವಾಗುವುದರಲ್ಲಿ ಏನು ಆಶ್ಚರ್ಯವಿಲ್ಲ.
ನನ್ನ ಉದ್ದೇಶ ಶ್ರೀ ಗಿರೀಶ್ ಕಾರ್ನಾಡ್ ಅವರ ವೈಯುಕ್ತಿಕ ನಿಂದನೆ ಅಲ್ಲ. ಸಾಹಿತ್ಯಕಾರರು, ಬುದ್ಧಿಜೀವಿಗಳು ಅಂದ ಮೇಲೆ ಅವರು ಜವಾಬ್ದಾರಿಯುತ ವಾದ ನಡವಳಿಕೆ ಪ್ರದರ್ಶಿಸುವುದು ಅವರ ಕರ್ತವ್ಯ. ನಾವು ಸಾಮಾನ್ಯ ಜನರು ಅಂಥವರಿಂದ ಉನ್ನತ ಆದರ್ಶಗಳನ್ನು ನಿರೀಕ್ಶಿಸುತ್ತಿರುತ್ತೇವೆ. ಸಾಹಿತಿಯೊಬ್ಬನಿಗೆ ಯಾವಾಗಲು ಸಾಮಾಜಿಕ ಜವಾಬ್ದಾರಿ ಇರುತ್ತದೆ ಎಂಬುದನ್ನು ಅವರು ಮರೆಯಬಾರದು.