ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

February 14, 2007 - 10:13pm — Sunil Jayaprakash

ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್!

Sunil Jayaprakash's picture

uniquesupri wrote:
ಅಸಲಿಗೆ ಪತ್ರಿಕೆಗಳಾದರೂ ತೀರ್ಪನ್ನು ವ್ಯವಸ್ಥಿತವಾಗಿ ಅಧ್ಯಯನ ನಡೆಸಿ ಒಂದು ನಿಲುವಿಗೆ ಬರುವ ಪ್ರಯತ್ನವನ್ನು ಮಾಡುತ್ತಿಲ್ಲ. ಒಂದು ದಿನ ಕರ್ನಾಟಕಕ್ಕೆ ಅನ್ಯಾಯ ಅಂತ ಬರೆದು ಮರುದಿನ ಕರ್ನಾಟಕಕ್ಕೂ ಲಾಭವಿಲ್ಲದಿಲ್ಲ ಅಂತ ಅಡ್ಡಗೋಡೆಯ ಮೇಲೆ ದಿವಿನಾಗಿ ದೀಪ ಹಚ್ಚಿಟ್ಟಿದ್ದಾರೆ.

ನಿಜಕ್ಕೂ ನಮ್ಮ ಪತ್ರಿಕೆಯವರಿಗೆ ಏನಾಗಿದೆ ಅಂತಲೇ ತಿಳಿಯುತ್ತಿಲ್ಲ. ನಾನು ಅಂದೇ, ಕನ್ನಡ ಪತ್ರಿಕೋದ್ಯಮದ ಸೋಲು ಎಂಬ ಎಳೆಯಲ್ಲಿ, ಸೃಜನಶೀಲತೆಯ ವಿಷಯದಲ್ಲಿಯೂ ನಮ್ಮ ಪತ್ರಿಕೋದ್ಯಮ ಎಷ್ಟು ಸೋತಿದೆ ಅಂತ ಹೇಳಿದ್ದೆ. ಕಳೆದ ವಾರದಿಂದ ಅಷ್ಟು ಲೇಖನಗಳು ಬರುತ್ತಿವೆಯಲ್ಲ, ಬರೇ ಉಪದೇಶದ ಮಾತುಗಳು ಮಾತ್ರವೇ ಹೆಚ್ಚಾಗಿ ಬರುತ್ತಿವೆ. ಕಾರ್ನಾಡರನ್ನು ಬಯ್ಯುವುದು ತಪ್ಪು ಎಂಬ ಅಂಶಕ್ಕೇ ಹೆಚ್ಚು ಒತ್ತು ಕೊಟ್ಟಿವೆ. ಅಲ್ಲ, ಈ ಪತ್ರಿಕೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲವೇ ? ಕಾರ್ನಾಡರಿಗೆ ಹೇಗೆ ಇಂಗ್ಲೀಷ್ ಚಾನೆಲ್ಲಿಗೆ ಸಂದರ್ಶನ ನೀಡುತ್ತಾ ಏನು ಬೇಕಾದರೂ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೋ ಅದೇ ರೀತಿ ಅವರ ನಿಲುವನ್ನು ಖಂಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಪತ್ರಿಕೆಗೂ ಇದೆ ಎಂಬುದನ್ನು ದಯವಿಟ್ಟು ನೆನಪಿಸಿಕೊಡೋಣ. ನಾನು ಕಾರ್ನಾಡರ ದ್ವೇಷಿಯಲ್ಲ, ಆದರೆ ಅವರು ದೂರವಾಣಿಯ ಮೂಲಕ ನೀಡಿದ ಹೇಳಿಕೆ ಲೈವ್ ಕೇಳಿದ್ದೆ. ಯಪ್ಪಾ ತುಂಬಾ ಕೆಟ್ಟದಾಗಿತ್ತು.

ಕೇವಲ ಕಾರ್ನಾಡ್ ಪ್ರಕರಣವಷ್ಟೇ ಅಲ್ಲ, ಕಳೆದೆರೆಡು ವಾರಗಳಿಂದ ಬರುತ್ತಿರುವ ಸುದ್ದಿಯಂತೂ ನಿಜಕ್ಕೂ ಬೇಸರ ತರುತ್ತಿದೆ. ನೆನ್ನೆಯ ಪೇಪರಿನಲ್ಲಿ ಬಂದಿದ್ದ ಸುದ್ದಿ ಹೇಗಿತ್ತು ಗೊತ್ತೇ. ಕಾವೇರಿ ತೀರ್ಪಿನಿಂದ ಕರ್ನಾಟಕಕ್ಕೆ ಮೂರರಲ್ಲಷ್ಟೇ ಅನ್ಯಾಯವಾಗಿದೆ, ಆದರೆ ಬರೋಬ್ಬರಿ ಐದು ಮುಖ್ಯ ವಿಷಯಗಳಲ್ಲಿ ನ್ಯಾಯಸಿಕ್ಕಿದೆ ಎಂಬಂತೆ ವರದಿ ಮಾಡಿತ್ತು. ಒಂಚೂರೂ ತಲೆ ಬೇಡವಾ. ಇಂತಹ ವರದಿಗಳನ್ನು ಓದಿ, ಮುಂದೆ ಹಾಸನದ ರೈತರು ಮಂಡ್ಯದ ರೈತರ ಸಹಾಯಕ್ಕೆ ನಿಲ್ಲದಿದ್ದರೆ ಆಗ ಬೇಕಿದ್ದರೆ, ಇದೆಲ್ಲ ದೇವೇಗೌಡರ ಕಿತಾಪತಿ ಮಣ್ಣುಮಸಿ ಎಂಬಂತಹ ಲೇಖನಗಳನ್ನು ಪುಂಖಾನುಪುಂಖವಾಗಿ ಅತ್ಯುತ್ಸಾಹದಿಂದ ಪ್ರಕಟಿಸುತ್ತಾರೆ ಬೇಕಿದ್ದರೆ. ರೈತರನ್ನು ಬದುಕುವುದಕ್ಕೆ ಬಿಡದೆ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸದೆ, ಪಾಪ ಅವರು ಸತ್ತಾಗ, ಆಗ ಇಂತವನು ಹೀಗ್ಹೀಗೆ ಸತ್ತ ಎಂಬ ವರದಿ ಮಾತ್ರ ಚೆನ್ನಾಗಿ ಪ್ರಕಟಿಸುತ್ತವೆ.

ಇನ್ನೊಂದು ವಿಚಾರ ಏನು ಗೊತ್ತೇ, ಕಳೆದ ವಾರ ಚೋಳರು ಹೇಗೆ ತಮ್ಮ ನಾಡನ್ನು ಶ್ರೀಮಂತಗೊಳಿಸಿದ್ದರು ಎಂಬುದರ ಬಗ್ಗೆ ವರದಿ ಪ್ರಕಟವಾಗಿತ್ತು.!@!@!@ ಯಪ್ಪಾ, ಇದನ್ನು ಪ್ರಕಟಿಸುವ ಹೊತ್ತೇ ಇದು ? ಸರಿ ಬೇರೆಯವರು ಮಾಡಿರಬಹುದಾದ ಒಳ್ಳೆಯ ಕೆಲಸಗಳನ್ನು ಹೊಗಳೋಣ. ಆದರೆ ನಮ್ಮನ್ನು ನಾವೇ ತೆಗಳಿಕೊಂಡು ಬೇರೆಯವರನ್ನು ಹೊಗಳುವ ಚಾಳಿ ಏಕೆ, ಅದೂ ಇಂತಹ ಹೊತ್ತಿನಲ್ಲಿ. ಕನ್ನಡ ಓದುಗರ ಆತ್ಮವಿಶ್ವಾಸ ಇನ್ನೂ ಕಡಿಮೆಯಾಗುವುದಿಲ್ಲವೇ ? ಅಥವಾ ಹೀಗಾಗಲೇ ಅಂತಲೇ ಪತ್ರಿಕೆಯವರ ಉದ್ದೇಶವೇ ? ತಿಳಿಯದು.

ಕಾವೇರಿಯದೊಂದೇ ನಿದರ್ಶನವಲ್ಲ. ಮತ್ತೊಂದು ಮಹತ್ವದ ವಿಚಾರವೆಂದರೆ ದಕ್ಷಿಣ ಕನ್ನಡದ್ದು ಉಡುಪಿ, ಮಂಗಳೂರು ಹೀಗೆ. ಈ ಊರುಗಳಲ್ಲಿ ಪತ್ರಿಕೆಗಳೇ ಇಲ್ಲವೇ ಎಂದು ಹೆದರಿಕೆಯಾಗುತ್ತದೆ. ಮಂಗಳೂರು ಸೇಲಂಗೆ ಎತ್ತಂಗಡಿ ಆಗುವ ವಿಚಾರವನ್ನು ಇಂಗ್ಲೀಷ್ ಪತ್ರಿಕೆಯನ್ನೋದಿ ತಿಳಿದುಕೊಳ್ಳುವ ಪರಿಸ್ಥಿತಿ ಬಂತು. ಮಂಗಳೂರನ್ನು ಸೇಲಂಗೆ ಎತ್ತಂಗಡಿ ಮಾಡುವುದರಿಂದ ಕನ್ನಡಿಗರಿಗೆ ಆಗುವ ನಷ್ಟಗಳೇನು ಎಂಬುದರ ಬಗ್ಗೆ ಚಕಾರವೇ ಇಲ್ಲ. ಇಂತಹ ವಿಷಯವನ್ನು ಸಾಮಾಜಿಕವಾಗಿಸುವಲ್ಲಿ ತುಂಬಾ ತುಂಬಾ ಎಡವಿದೆ ನಮ್ಮ ಪತ್ರಿಕೋದ್ಯಮ. ಕಾರಣ ಕೇಳಿ ನೋಡಿ, ಇಡೀ ಕರ್ನಾಟಕವೇ ಕಾವೇರಿಯ ಯೋಚನೆ(ಕೆಲವರು ಕೆಟ್ಟದಾಗಿ ಗಲಾಟೆ ಎನ್ನುತ್ತಾರೆ)ಯಲ್ಲಿ ಮುಳುಗಿದೆ ಎನ್ನುವ ಸಮಜಾಯಿಷಿ ಸಿಗಬಹುದು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: uniquesupri (6 replies) February 11, 2007 - 9:40pm
  • ಕಾವೇರಿ ನದಿ ಸಮಸ್ಯೆ, ಏನೂ ಅಂತ ಅರ್ಥ ಆಗೊದ್ ಕಷ್ಟ ಕಣಣ್ಣ ..! By: venkatesh (Feb 15 2007 - 5:25pm)
  • Re: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ASHOKKUMAR (Feb 15 2007 - 8:09am)
  • ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: Sunil Jayaprakash (Feb 14 2007 - 10:13pm)
    • Re: ದನಿ: ಕಾವೇರಿ ಸಮಸ್ಯೆ ಹಾಗೂ ಹಾಯ್ ಬೆಂಗಳೂರ್! By: ಶಿವ (Feb 15 2007 - 12:22pm)
      • ಮಂಗಳೂರ್ ಎತ್ತಂಗಡಿ By: Sunil Jayaprakash (Feb 15 2007 - 1:45pm)
        • Re: ಮಂಗಳೂರು ಎತ್ತಂಗಡಿ By: ASHOKKUMAR (Feb 15 2007 - 4:28pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
ಇನ್ನಷ್ಟು


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator