ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ
- ಸೇಡು ತೀರಿಸುವ ಅವಕಾಶ By: rajeshnaik111 (Feb 26 2007 - 10:00am)
- ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ By: rajeshnaik111 (Feb 16 2007 - 6:41pm)
- ಕರ್ನಾಟಕಕ್ಕೆ ಸತತ ೪ನೇ ಜಯ By: rajeshnaik111 (Feb 14 2007 - 9:43pm)
- ಕರ್ನಾಟಕಕ್ಕೆ ಗೆಲುವು ತಮಿಳುನಾಡಿನ ವಿರುದ್ಧ By: rajeshnaik111 (Feb 13 2007 - 7:27pm)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 9 2007 - 12:29am)
- Re: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Feb 12 2007 - 2:58pm)
- ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: Sunil Jayaprakash (Jan 28 2007 - 11:37am)
- Re: ದನಿಗೂಡು: ರಣಜಿ ಟ್ರೋಫಿ ೨೦೦೬-೦೭: ಕರ್ನಾಟಕದ ಅಭಿಯಾನ ಅಂತ್ಯ By: rajeshnaik111 (Jan 29 2007 - 4:17pm)

RSS:
ಕೊನೆಯ ಲೀಗ್ ಪಂದ್ಯದಲ್ಲೂ ಕರ್ನಾಟಕಕ್ಕೆ ಜಯ
ರಣಜಿ ಏಕದಿನ ಟ್ರೋಫಿಗಾಗಿ ನಡೆಯುತ್ತಿರುವ ದಕ್ಷಿಣ ವಲಯ ಲೀಗ್ ಪಂದ್ಯಗಳಲ್ಲಿ ಕರ್ನಾಟಕ ಇಂದು ಹೈದರಾಬಾದ್ ತಂಡವನ್ನು ಸೋಲಿಸಿ ತನ್ನ ಸತತ ೫ನೇ ಗೆಲುವನ್ನು ದಾಖಲಿಸಿ ದಕ್ಷಿಣ ವಲಯದಲ್ಲಿ ಅಗ್ರಸ್ಥಾನಿಯಾಗಿ ಮುಂದಿನ ಹಂತಕ್ಕೆ (ನಾಕ್ ಔಟ್) ತೇರ್ಗಡೆ ಹೊಂದಿದೆ. ದ್ವಿತೀಯ ಸ್ಥಾನಿಯಾಗಿ ತಮಿಳುನಾಡು ತೇರ್ಗಡೆ ಹೊಂದಿದೆ. ಹೈದರಾಬಾದ್ ವಿರುದ್ಧದ ಪಂದ್ಯದ ಸಂಕ್ಷಿಪ್ತ ಸ್ಕೋರು ವಿವರ:
ಹೈದರಾಬಾದ್ ೫೦ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ೧೮೯ (ವಿನಯ್ ಕುಮಾರ್ ೩೯ಕ್ಕೆ ೧ ಹುದ್ದರಿ, ಧನಂಜಯ ೫೩ಕ್ಕೆ ೨ ಹುದ್ದರಿಗಳು, ರಾಜು ಭಟ್ಕಳ್ ೨೦ಕ್ಕೆ ಯಾವುದೇ ಹುದ್ದರಿಯಿಲ್ಲ, ಸುನಿಲ್ ಜೋಶಿ ೧೮ಕ್ಕೆ ೨ ಹುದ್ದರಿಗಳು, ಚಂದ್ರಶೇಖರ್ ರಘು ೩೨ಕ್ಕೆ ೨ ಹುದ್ದರಿಗಳು ಮತ್ತು ಭರತ್ ಚಿಪ್ಲಿ ೧೭ಕ್ಕೆ ೧ ಹುದ್ದರಿ).
ಕರ್ನಾಟಕ ೪೬.೫ ಓವರುಗಳಲ್ಲಿ ೪ ಹುದ್ದರಿಗಳ ನಷ್ಟಕ್ಕೆ ೧೯೦ ಓಟಗಳು (ಭರತ್ ಚಿಪ್ಲಿ ೪೫, ಕೆ.ಬಿ.ಪವನ್ ೨, ರೋಲಂಡ್ ಬ್ಯಾರಿಂಗ್ಟನ್ ೩೬, ಚಂದ್ರಶೇಖರ್ ರಘು ೪೫, ದೀಪಕ್ ಚೌಗುಲೆ ೪೪ ಅಜೇಯ ಮತ್ತು ದೇವರಾಜ್ ಪಾಟೀಲ್ ೧೧ ಅಜೇಯ)
ಕರ್ನಾಟಕಕ್ಕೆ ೬ ಹುದ್ದರಿಗಳಿಂದ ಜಯ.
ನಾಕ್ ಔಟ್ ಹಂತದ ಮೊದಲ ಪಂದ್ಯದ ದಿನಾಂಕ ಮತ್ತು ಎದುರಾಳಿ ಇನ್ನೂ ನಿರ್ಧಾರವಾಗಿಲ್ಲ. ನೋಡೋಣ ರಾಜ್ಯ ತಂಡದ ವಿಜಯದ ಓಟ ಎಲ್ಲಿಯವರೆಗೆ ಮುನ್ನಡೆಯುತ್ತದೆ ಎಂದು.....