Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ
- ಅಭಯಸಿಂಹರ ಲೇಖನ ಓದಿ By: ASHOKKUMAR (Feb 18 2007 - 12:41pm)
- Re: ಅಭಯಸಿಂಹರ ಲೇಖನ ಓದಿ By: Abhaya Simha (Feb 18 2007 - 2:51pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: bloggerkannadiga (Feb 18 2007 - 1:15am)
- ಒಂದು ಸಮಸ್ಯೆ-ಸಹಾಯ ಬೇಕು: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ... By: Shyam Kishore (Feb 17 2007 - 2:12pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ಸಂಗನಗೌಡ (Feb 16 2007 - 10:57am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: Abhaya Simha (Feb 16 2007 - 12:43pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: tarlesubba (Feb 28 2007 - 10:16am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ By: ವೈಭವ (Feb 19 2007 - 9:40am)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: ASHOKKUMAR (Feb 16 2007 - 2:13pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. --- ಒಂದು ಕೇಳಿಕೆ... By: Abhaya Simha (Feb 16 2007 - 12:43pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Rohit (Feb 15 2007 - 9:12pm)
- ಮೆಚ್ಚುಗೆ: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ... By: Sunil Jayaprakash (Feb 15 2007 - 8:36pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: kannadiga_1956 (Feb 15 2007 - 8:12pm)
- Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ. ನಿಮ್ಮ ಅಭಿಪ್ರಾಯ ತಿಳಿಸಿ. By: Abhaya Simha (Feb 15 2007 - 8:15pm)
- ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: venkatesh (Feb 15 2007 - 5:07pm)
- Re: ನಿಮ್ ಚಿತ್ರಗೊಳು ಅಂದ್ರೇನು. ಬೊ ಸಂದಾಗೈತೆ, ಇಂಗೇ ಮುಂದ್ ವರ್ದ್ರೆ, ರಾಜ By: Abhaya Simha (Feb 15 2007 - 6:41pm)

RSS:
Re: ನನ್ನ ಕೆಲವು ಕಿರು ಚಿತ್ರಗಳನ್ನು ನೋಡಿ - ವಿಶ್ಲೇಷಣೆ, ಸಲಹೆ, ಕೋರಿಕೆ
ಅಭಯಸಿಂಹರವರೆ,
ನಿಮ್ಮ ಸುಬ್ಬು, ಯಕ್ಷೋತ್ತಮ ನೋಡಿದೆ. ಒಳ್ಳೆಯ ಪ್ರಯತ್ನಗಳು.
ಸುಬ್ಬುವು ಯೂತ್ ಫುಲ್ ಆಗಿದ್ದು ಅಬ್ಬರದಿಂದ ಕೂಡಿದೆ. ಸಿಗರೇಟಿನ ಹೊಗೆ ಸ್ವಲ್ಪ ಜಾಸ್ತಿಯಾಯಿತು ಅನ್ಸುತ್ತೆ.!!
ಇನ್ನು ಯಕ್ಷೋತ್ತಮ ತುಂಬ ಒಳ್ಳೆಯ ಚಿತ್ರ. ಆಧುನಿಕತೆ v/s ಸಾಂಪ್ರದಾಯಿಕ ಕಲೆಗಳ ನಡುವಿನ ತಿಕ್ಕಾಟ ಅರ್ಥಪೂರ್ಣವಾಗಿ ಹಾಗೂ ವಾಸ್ತವಕ್ಕೆ ಹತ್ತಿರವಾಗಿ ಚಿತ್ರಿತವಾಗಿದೆ.
ಸಂಭಾಷಣೆಯ ಮಧ್ಯೆ ಆ Pause ಗಳು ಮತ್ತು ಯಕ್ಷಗಾನದ ಹಿಮ್ಮೇಳ ಸಾಂದರ್ಭಿಕವಾಗಿ ಮೂಡಿ ಬಂದಿದೆ. ಈ ಯಕ್ಷೋತ್ತಮ ನನಗೆ ಗಿರೀಶ್ ಕಾಸರವಳ್ಳಿಯ "ದ್ವೀಪ"ದ ವಾಸುದೇವರಾವರನ್ನು ಙ್ನಾಪಕಕ್ಕೆ ತಂದಿತು. ನಿರೀಕ್ಷೆ ಮಾಡಬಲ್ಲ (predictable) ಕಥೆಯಾದರೂ ನೀವು ನಿರೂಪಿಸಿರುವ ರೀತಿ ಇಷ್ಟವಾಯಿತು. ಕೊನೆಗೆ ಅಜ್ಜನು ತನ್ನ ಮೊಮ್ಮಕ್ಕಳೊಂದಿಗೆ ಕುಣಿಯುವ ದೃಶ್ಯವನ್ನು ತುಂಬ ಸೊಗಸಾದ ಕ್ಯಾಮೆರಾ ಕೋನದಿಂದ ಸೆರೆ ಹಿಡಿದಿದ್ದೀರ.
ನಿಮ್ಮ ಚಿತ್ರಗಳಲ್ಲಿ ನಿಮ್ಮ ಪ್ರತಿಭೆ ಕಾಣುತ್ತದೆ. ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಬಹುದು.
ನನ್ನ ಕೆಲವು ಸಲಹೆಗಳು
೧) ಪರಿಸರದ ಕಥೆಗಳು,ಸಮಸ್ಯೆಗಳು ಮತ್ತು ಅದರ ಸೌಂದರ್ಯವನ್ನು ಸೆರೆಹಿಡಿಯುವಂತಹ ಕೆಲವು ಕಿರುಚಿತ್ರ(ಸಾಕ್ಷ್ಯಾಚಿತ್ರ)ಗಳನ್ನು ದಯವಿಟ್ಟು ಮಾಡಿ
೨) ಹಾಗೆಯೆ ನಮ್ಮ ನಾಡಿನ ಹಲವು ಐತಿಹಾಸಿಕ ಸ್ಥಳಗಳ ಬಗ್ಗೆಯೂ ನಿಮ್ಮ ಇನ್ನೋವೇಶನ್ ಶಕ್ತಿಯನ್ನು ಉಪಯೋಗಿಸಿ ಚಿತ್ರ ಮಾಡಿ.
ಹಾಗೂ ನನ್ನ ಇನ್ನೊಂದು ಕೋರಿಕೆ ಏನೆಂದರೆ ಹೇಗೆ ಕಿರುಚಿತ್ರ ಮಾಡುತ್ತೀರ ಹಾಗೂ ಯಾವ ಯಾವ ಸಾಧನಗಳನ್ನು ಉಪಯೋಗಿಸುತ್ತೀರಾ ಇದರ ಬಗ್ಗೆ ಒಂದು ಲೇಖನ ಬರೆದರೆ ನಮಗೂ ಇದರ ಬಗ್ಗೆ ತಿಳಿಯುತ್ತದೆ.
-ಜೈ ಕರ್ನಾಟಕ