ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು
- Re: ರೇಡಿಯೋ ಪುರಾಣ... By: sathishcv (Feb 20 2007 - 7:44pm)
- ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು By: Shyam Kishore (Feb 20 2007 - 3:42am)
- Re: ಅನಿಸಿಕೆ: ರೇಡಿಯೋ ಪುರಾಣ...ಡಿಎಂಕೆ ಕುತಂತ್ರ By: ವೈಭವ (Feb 20 2007 - 2:09pm)
- Re: ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು By: ಸಂಗನಗೌಡ (Feb 20 2007 - 2:05pm)
- Re: ರೇಡಿಯೋ ಪುರಾಣ... By: anupkumart (Feb 19 2007 - 2:30pm)
- ಉ: ರೇಡಿಯೋ ಪುರಾಣ... By: hpn (Feb 19 2007 - 11:31pm)
- ರೇಡಿಯೋ ಪುರಾಣ: ನಾರ್ಥಿಗಳ ಧೋರಣೆ By: ಸಂಗನಗೌಡ (Feb 19 2007 - 2:05pm)


RSS:
ಅನಿಸಿಕೆ: ರೇಡಿಯೋ ಪುರಾಣ...ಕೆಲವು ಪ್ರಶ್ನೆಗಳು
ನನ್ನನ್ನು ಕಾಡುತ್ತಿರೋ ಒಂದೆರಡು ಪ್ರಶ್ನೆಗಳು ಹೀಗಿವೆ:
೧. ನಾವು ಕನ್ನಡಿಗರು ಈ ಕನ್ನಡ ರೇಡಿಯೋ ವಾಹಿನಿಗಳನ್ನು ಕೇಳುತ್ತೀವಾ? ನಾವು ಅಂದರೆ, ಬರೀ ನೂರಾರು ಜನರಲ್ಲ; ಭಾರೀ ಪ್ರಮಾಣದಲ್ಲಿ, ಸಾವಿರಾರು, ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಅಂತ. ಕನ್ನಡಿಗರೇ ಹಾಗೆ ಕನ್ನಡ ವಾಹಿನಿಗಳನ್ನು ಕೇಳದೇ ಇದ್ದ ಪಕ್ಷದಲ್ಲಿ ಆ ರೇಡಿಯೋ ವಾಹಿನಿಗಳು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳೋದ್ರಲ್ಲಿ ಅರ್ಥ ಇದೆ ಅಲ್ವಾ? ಯಾಕೇಂದ್ರೆ ಅದು ಅವರಿಗೆ "ವ್ಯಾಪಾರ". ಲಾಭ ಅವರಿಗೆ ಮುಖ್ಯವೇ ವಿನಃ "ಕನ್ನಡ ಸೇವೆ" ಅಲ್ಲ. ಆದರೆ ಒಂದನ್ನು ನಾವು ನೆನಪಿನಲ್ಲಿಡಲೇಬೇಕು. ಎಲ್ಲ ಕನ್ನಡ ವಾಹಿನಿಗಳೂ ಆರಂಭದಲ್ಲೇ, FM 91 ತರಹ ಪೂರ್ಣ ಪ್ರಮಾಣದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಆದರೆ ನಾವು ಕನ್ನಡಿಗರು ಕೇಳಿ ಪ್ರೋತ್ಸಾಹ ನೀಡಿದರೆ ಇದು ಖಂಡಿತ ಸಾಧ್ಯ.
೨. ಕನ್ನಡಿಗರು ಮುಗಿಬಿದ್ದು ಕೇಳುತ್ತಿದ್ದೂ, ಈ ವಾಹಿನಿಗಳು ನಮಗೆ ಬೇರೆ ಭಾಷೆಗಳ "ರಸದೌತಣ" ಬಡಿಸಲು ಹೊರಟಿದ್ದಾರೆ ಅಂದರೆ, ಅದು ನಿಜಕ್ಕೂ ಖಂಡನೆಗೆ ಅರ್ಹವಾದದ್ದೇ.
೩. ಗೂಗಲ್ ಟ್ರೆಂಡ್‍ನಲ್ಲಿ ಮತ ಚಲಾವಣೆಗೆ ನಾವು ಕನ್ನಡಿಗರೂ ಯಾಕೆ ಮುಂದಾಗಬಾರದು. ಎಲ್ಲರೂ ಒಮ್ಮೆ ಅಭಿಪ್ರಾಯ ಹಾಕಿದಲ್ಲಿ "ಟ್ರೆಂಡ್" ತಿರುಗಿಬೀಳುತ್ತೆ ಅಲ್ವಾ? ಅಷ್ಟಕ್ಕೂ "ಗೂಗಲ್ ಟ್ರೆಂಡ್"ನ ಫಲಿತಾಂಶಗಳು ಅಷ್ಟು ಪ್ರಭಾವವನ್ನು ಹೊಂದಿವೆಯಾ? ನನಗೆ ಈ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ತಿಳಿದವರು ದಯವಿಟ್ಟು ಈ ಬಗ್ಗೆ ಬರೆಯಿರಿ.
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)