~
Re: ರಾಜಕಾರಣಿಗಳೂ ಕಾವೇರಿಯೂ
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 2:07am)
- Re: ರಾಜಕಾರಣಿಗಳೂ ಕಾವೇರಿಯೂ By: anant pandit (Mar 23 2007 - 4:26pm)
- ಉ: ಬದಲಾಗಬೇಕಿರುವ ಪ್ರಜಾತಂತ್ರ By: hpn (Feb 23 2007 - 9:52pm)
- Re: ಉ: ಬದಲಾಗಬೇಕಿರುವ ಪ್ರಜಾತಂತ್ರ By: Khavi (Mar 22 2007 - 5:06pm)
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 4:37am)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: shreekant.mishrikoti (Feb 20 2007 - 5:32pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 24 2007 - 12:00am)
- ಧನ್ಯವಾದಗಳು By: Yamini (Feb 22 2007 - 11:33pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: muralihr (Feb 22 2007 - 7:21pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 11:05pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: ಸಂಗನಗೌಡ (Feb 22 2007 - 1:47pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ಹೀಗಾದರೆ ಹೇಗೆ? By: ASHOKKUMAR (Feb 22 2007 - 10:13pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: sathishcv (Feb 22 2007 - 6:08pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 21 2007 - 9:25pm)
- Re: ರಾಜಕಾರಣ ಮತ್ತು ಜಾತಿ By: anant pandit (Feb 22 2007 - 9:24am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)

RSS:
Re: ರಾಜಕಾರಣಿಗಳೂ ಕಾವೇರಿಯೂ
ವರ್ಗ/ಜಾತಿ/ಭಾಷೆಯ ವಿಭಿನ್ನತೆ ಸದ್ಯಕ್ಕಂತೂ ನಮ್ಮ ಸಮುದಾಯದ ಸತ್ಯಗಳು. ಅದನ್ನು ಯಾಮಿನಿಯವರು ಹೇಳಿದ ಸೊಷಿಯಲ್ ಕ್ಯಾಪಿಟಲ್ ಆಗಿ ಅನುಭೋಗಿಸುವವರು(ಭಾಷೆಯನ್ನೂ ಕೂಡ), ವಿರೋಧಿಸುತ್ತಾ ತೊಡೆದು ಹಾಕಲು ಹವಣಿಸುವವರು, ರಾಘವೇಂದ್ರರಾಯರು ಹೇಳಿದ ಹಾಗೆ ಅಕ್ಕಿ-ನೆಂಟ ಸಂಬಂಧದಲ್ಲಿ ತೊಡಗಿಕೊಂಡವರೂ ಕೂಡ ನಮ್ಮ ಸಮುದಾಯದ ಸದ್ಯದ ಸತ್ಯಗಳು. ನಾವು ನೋಡಿರುವ ಹಾಗೆ ವರ್ಗ/ಜಾತಿ/ಭಾಷೆಯ ಹೆಸರಲ್ಲಿ ಸಮುದಾಯವನ್ನು ದೋಚುವ ಕೆಲಸ ನಿರಂತರವಾಗಿ ನಡೆದಿದೆ. ಇವುಗಳನ್ನು ಮನಗಂಡು ಆಲೋಚಿಸುವುದು ತುಂಬಾ ಮುಖ್ಯ. ನನಗೆ ಇತ್ತೀಚೆಗೆ ಅನ್ನಿಸುತ್ತಿರುವುದು ಹೀಗೆ. ಬಹುಶಃ ಪ್ರಜಾತಂತ್ರವೇ ಹೊಸ ರೂಪ ಪಡಕೊಳ್ಳಬೇಕಾದ ಅಗತ್ಯವಿದೆ. ಅಂದರೆ, ಪ್ರಜಾತಂತ್ರ ಕೆಲಸ ಮಾಡುವ ಮೆಕ್ಯಾನಿಸಂಸ್ ಅದನ್ನು ಭ್ರಷ್ಟಗೊಳ್ಳಿಸುವುದನ್ನು ತಡೆಗಟ್ಟುವ ಶಕ್ತಿಯನ್ನು ಹೊಂದುವುದು. ಇದು ಹೇಗೆಂದು ನನಗಿನ್ನೂ ಗೊತ್ತಾಗುತ್ತಿಲ್ಲ. ಆದರೆ ಯಾವುದೋ ಅಮೂರ್ತವಾದ್ದು ಮಿಸಿಂಗ್ ಎಂದಂತೂ ಭಾಸವಾಗುತ್ತಿದೆ. ಮತ್ತು ಇದು ಬರೇ ರಾಜಕೀಯ ಪ್ರಕ್ರಿಯೆ ಮಾತ್ರವಲ್ಲ ಅಂತಲೂ ಗೊತ್ತಾಗುತ್ತಿದೆ. ಹಾಗಂತ ರಾಜಕೀಯವಾಗಿಯೇ ಅದನ್ನು ಸಂಧಿಸುವ ಕೆಲಸದ ಅನಿವಾರ್ಯತೆಯೂ ಕಾಣುತ್ತಿದೆ. ಭಾರತದಂತ ಪಾರಂಪರಿಕ ಸಮುದಾಯದಲ್ಲಂತೂ ಇದು ದ್ವಿಗುಣಗೊಳ್ಳುವ ಸವಾಲು. ಅಂದ ಹಾಗೆ, ಮೇಲೆ ಹೇಳಿದ ಪ್ರಜಾತಂತ್ರದ ಹೊಸ ರೂಪ ಸಮುದಾಯಗಳು ಸದ್ಯದ ತೊಂದರೆಗಳಿಗೆ ತೋರಿಸುವ ಪ್ರತಿಕ್ರಿಯಗಳಲ್ಲಿ ಅಡಗಿರಬಹುದ? ಹಾಗಾಗಿಯೇ ನನಗೆ ಯಾವತ್ತೂ ಚಿಕ್ಕ ಘಟನೆಯನ್ನು ತಳ್ಳಿಹಾಕದೆ ಸೂಕ್ಷ್ಮವಾಗಿ ನೋಡುವ ಅಗತ್ಯ ಕಾಣುತ್ತದೆ. ನನ್ನ ಯೋಚನಾಲಹರಿಯೇ ತುಂಬಾ ಅಮೂರ್ತವಾಯಿತೇನೋ