~
Re: ರಾಜಕಾರಣ ಮತ್ತು ಜಾತಿ
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 2:07am)
- Re: ರಾಜಕಾರಣಿಗಳೂ ಕಾವೇರಿಯೂ By: anant pandit (Mar 23 2007 - 4:26pm)
- ಉ: ಬದಲಾಗಬೇಕಿರುವ ಪ್ರಜಾತಂತ್ರ By: hpn (Feb 23 2007 - 9:52pm)
- Re: ಉ: ಬದಲಾಗಬೇಕಿರುವ ಪ್ರಜಾತಂತ್ರ By: Khavi (Mar 22 2007 - 5:06pm)
- Re: ರಾಜಕಾರಣಿಗಳೂ ಕಾವೇರಿಯೂ By: anivaasi (Feb 23 2007 - 4:37am)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: shreekant.mishrikoti (Feb 20 2007 - 5:32pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 24 2007 - 12:00am)
- ಧನ್ಯವಾದಗಳು By: Yamini (Feb 22 2007 - 11:33pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 23 2007 - 9:01am)
- Re: ರಾಜಕಾರಣ ಮತ್ತು ಜಾತಿ By: muralihr (Feb 22 2007 - 7:21pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 11:05pm)
- Re: ರಾಜಕಾರಣ ಮತ್ತು ಜಾತಿ By: Yamini (Feb 22 2007 - 10:46pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: ಸಂಗನಗೌಡ (Feb 22 2007 - 1:47pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ಹೀಗಾದರೆ ಹೇಗೆ? By: ASHOKKUMAR (Feb 22 2007 - 10:13pm)
- Re: ಕರ್ನಾಟಕದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಬೇಕೇಕೆ? By: sathishcv (Feb 22 2007 - 6:08pm)
- Re: ಹೀಗಾದರೆ ಹೇಗೆ? By: ವೈಭವ (Feb 22 2007 - 9:49pm)
- Re: ರಾಜಕಾರಣ ಮತ್ತು ಜಾತಿ By: ವೈಭವ (Feb 21 2007 - 9:25pm)
- Re: ರಾಜಕಾರಣ ಮತ್ತು ಜಾತಿ By: anant pandit (Feb 22 2007 - 9:24am)
- Re: ರಾಜಕಾರಣ ಮತ್ತು ಜಾತಿ By: H.S.R.Raghavendra Rao (Feb 22 2007 - 10:49pm)
- ರಾಜಕಾರಣ ಮತ್ತು ಜಾತಿ By: Yamini (Feb 21 2007 - 8:12pm)
- Re: ರಾಜಕಾರಣಿಗಳೂ ಕಾವೇರಿಯೂ- ಸಮಸ್ಯೆಯ ಪರಿಹಾರ By: kannadiga_1956 (Feb 21 2007 - 3:23pm)

RSS:
Re: ರಾಜಕಾರಣ ಮತ್ತು ಜಾತಿ
ನಿಮ್ಮ ಪ್ರತಿಕ್ರಿಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಬ್ರಾಹ್ಮಣರಲ್ಲಿಯೂ ಸಾಕಷ್ಟು ಅಸಮಾನತೆ ಮತ್ತು ಕಂದಾಚಾರಗಳಿರುವುದು ಖಂಡಿತವಾಗಿಯೂ ನಿಜ. ಆದರೆ ಅವರು ಮೊದಲಿನಿಂದಲೂ ವ್ಯಾವಹಾರಿಕ ಜಾಣತನ ಮತ್ತು ಧಾರ್ಮಿಕ ನಂಬಿಕೆಗಳ ನಡುವೆ ಹೊಂದಾಣಿಕೆಯೊಂದನ್ನು ರೂಪಿಸಿಕೊಂಡಿದ್ದಾರೆ. ಬ್ರಿಟಿಷ್ ಆಳರಸರಿಗೂ ಪ್ರಿಯವಾಗಿ, ಧಾರ್ಮಿಕವಾಗಿಯೂ ಮುಂಚೂಣಿಯಲ್ಲಿರಲು ಅವರಿಗೆ ಸಾಧ್ಯವಾಗಿದ್ದು ಹೀಗೆಯೇ. ಈಚೆಗಿನ ಮೂಲಭೂತವಾದವು ಅದಕ್ಕೆ ಮತ್ತೊಂದು ಬಗೆಯಲ್ಲಿ ನೀರೆರಿದಿದೆ. ಉಳಿದ ಸಮುದಾಯಗಳಲ್ಲಿಯೂ ಈ ನಿಲುವುಗಳು ನಿಧಾನವಾಗಿ ರೂಪಿತವಾಗಿವೆ. ಎಲ್ಲ ಜಾತಿಗಳಲ್ಲಿಯೂ ಹೆಣ್ಣುಮಕ್ಕಳು ಶೋಷಿತರೇ ಆಗಿದ್ದಾರೆ.
ಅವರು "ಎಲ್ಲೋ ಹೇಗೋ ಬದುಕಿಕೊಳ್ಳುತ್ತಾರೆ" ಎಂದರೆ, ಅದು ಅವರ ನೆಟ್ ವರ್ಕ್ ಮತ್ತು ಸ್ಥಿತಿಸ್ಥಾಪಕ ಗುಣಗಳ ಬಗೆಗಿನ ಮಾತೇ ವಿನಾ ಅವರಿಗೆ ಜವಾಬ್ದಾರಿಗಳು ಇಲ್ಲವೆಂದಾಗಲೀ ಇರಬಾರದೆಂದಾಗಲೀ ಅರ್ಥವಲ್ಲ. ಅವರು ಎಲ್ಲ ರಂಗಗಳಲ್ಲಿಯೂ ಮುಂದುವರೆದಿಲ್ಲವೆಂದರೂ ಅವರ ಸಂಖ್ಯೆಗೆ ಹೋಲಿಸಿದರೆ, ಹಲವು ಬಗೆಯ ಸಂಪನ್ಮೂಲಗಳ ಮೇಲಿನ ಅವರ ಒಡೆತನ ಸಾಕಷ್ಟು ಜಾಸ್ತಿಯಾಗಿದೆಯೆಂದು ಅರ್ಥವಷ್ಟೆ.
ನಾನು ಹೇಳಿರುವ ಈ ಎಲ್ಲ ಮಾತುಗಳು ಆ ಒಂದು ಜಾತಿಯ ಎಲ್ಲರಿಗೂ ಅನ್ವಯಿಸುವುದಿಲ್ಲವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅಂಥ ಸಾರಾಸಗಟಾದ ತೀರ್ಮಾನಗಳನ್ನು ಕೊಡಲು ನಾನು ಸಿದ್ಧನಿಲ್ಲ. ಆದರೆ ಇತಿಹಾಸದ ಮತ್ತು ಸಮಕಾಲೀನ ಸನ್ನಿವೇಶದ ಹೊರೆ/ಹೊಣೆಗಳನ್ನು ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
H.S.Raghavendra Rao