Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: hamsanandi (Mar 1 2007 - 5:17am)
- ಉ: Re: ಅಖಂಡ ಕರ್ನಾಟಕ - ಪುಸ್ತಕದ ಕೊಂಡಿ ಸರಿಯಿದೆ, ಆದರೆ... By: Shyam Kishore (Mar 1 2007 - 8:05am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: anupkumart (Feb 27 2007 - 1:35pm)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- ಉ: Re: ಅಖಂಡ ಕರ್ನಾಟಕ By: Shyam Kishore (Mar 2 2007 - 5:31am)
- ದನಿಗೂಡು: Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ By: Shyam Kishore (Feb 28 2007 - 3:05am)
- ಅಖಂಡ ಕರ್ನಾಟಕ By: hpn (Mar 2 2007 - 12:51am)
- Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: ವೈಭವ (Feb 25 2007 - 8:52pm)
- ಉ: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು By: Shyam Kishore (Feb 27 2007 - 3:51am)


RSS:
Re: ಅಖಂಡ ಕರ್ನಾಟಕ - ಒಂದು ಇಣುಕು ನೋಟ --- ದನಿಗೂಡು
ಅ.ನ.ಕೃ ರವರ "ಸಂಧ್ಯಾರಾಗ" ಕಾದಂಬರಿಯಲ್ಲೂ ಇದರ ಬಗ್ಗೆ ಪ್ರಸ್ತಾಪವಿದೆ.
ಕೆಲವು ಸಂಭಾಷಣೆಗಳು ಹೀಗಿವೆ: -
೧. "ಏನು ಸಂಗೀತವೊ? ಅದರಲ್ಲಿ ಏನಾಗುತ್ತೆ ಹೇಳಿ. ಮೈಸೂರಿನ ತುಂಬ ಸಂಗೀತಗಾರರು. ಹೊರಗಿನಿಂದ ಯಾವ "ಅಯ್ಯರು" ಬಂದರೂ ಹಣ ಕೊಡುತ್ತಾರೆ ನಮ್ಮ ಜನ. ಹಿತ್ತಲ ಗಿಡ ಮದ್ದಲ್ಲ" ( ಕನ್ನಡಿಗರ ನಿರಭಿಮಾನ)
೨. "ಅದೆಲ್ಲಿ ಸಾಧ್ಯ ಭೀಮರಾಯರೆ? ನಮ್ಮ ಜನಕ್ಕೆ ಅಭಿಮಾನವಿಲ್ಲ. ಹೊರಗಿನಿಂದ ಬಂದರೂ ಅವರಿಗೆ ಪಥ್ಯ. ತಂಜಾವೂರು ತಿರುಚನಾಪಳ್ಳಿಯ ಜನರ ರೀತಿಯೇ ಬೇರೆ- ಅವರಿಗೆ ತಮ್ಮವರು ಎಂದರೆ ಪ್ರಾಣ. ಹೊರಗಿನವರಿಗೆ ಒಂದು ಪಂಚಪಾತ್ರೆ ಕೂಡ ಕೊಡುವುದಿಲ್ಲ" (ಕನ್ನಡಿಗರ ನಿರಭಿಮಾನ)
೩. "ಬಸವಣ್ಣನವರು, ಮಹಾದೇವಿಯಕ್ಕ ಮೊದಲಾದ ಶಿವಶರಣ ಶರಣೆಯರ ವಚನಗಳು, ನಿಜಗುಣ ಶಿವಯೋಗಿ, ಸಹಜಾನಂದ, ಮುಪ್ಪಿನ ಷಡಕ್ಷರಿ ಮೊದಲಾದವರ ಕೀರ್ತನೆಗಳನ್ನೇತಕ್ಕೆ ನಮ್ಮ ಸಂಗೀತಗಾರರು ಬಳಕೆಗೆ ತರಬಾರದು?"
"ಖಂಡಿತವಾಗಿಯೂ ತರಬೇಕು. ತಾಯಿಭಾಷೆ ಹಾಡುವವನ ಹೃದಯದಿಂದ ಬರುವ ಹಾಗೆ ಬೇರೆ ಯಾವ ಭಾಷೆಯೂ ಬರುವುದಿಲ್ಲ. ನೀನು ಸ್ವಲ್ಪ ಸಹಾಯಮಾಡಿದರೆ ನಾನು ಆ ಕೀರ್ತನೆಗಳನ್ನು ಕೂಡಿಸುತ್ತೇನೆ"