ಉ: Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: rajeshnaik111 (Mar 3 2007 - 11:05am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: ಸಂಗನಗೌಡ (Mar 5 2007 - 9:23am)
- ಪ್ರತಿಕ್ರಿಯೆ: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: Shyam Kishore (Mar 5 2007 - 10:16am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: ಸಂಗನಗೌಡ (Mar 5 2007 - 9:23am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: kannadiga_1956 (Mar 3 2007 - 5:06am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: hamsanandi (Mar 3 2007 - 5:17am)
- ಉ: Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: Shyam Kishore (Mar 3 2007 - 6:06am)
- Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ? By: hamsanandi (Mar 3 2007 - 5:17am)

RSS:
ಉ: Re: ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?
ಯದು ಅವರೆ,
ನಿಜ ನಾವೇ ಆರಿಸಿದ್ದು; ಆ ಬಗ್ಗೆ ಎರಡು ಮಾತಿಲ್ಲ. ಚುನಾವಣೆಯ ಕಣದಲ್ಲಿದ್ದವರಲ್ಲಿ, "ಇವರು ಇದ್ದುದರಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ" ಎಂದು ನಮಗನ್ನಿಸಿದವರಿಗೆ ನಾವು ವೋಟು ಹಾಕುತ್ತೀವಿ. ಆದರೆ ಎಲ್ಲರೂ ಗೆದ್ದು, ಗಾದಿಯೇರಿದ ನಂತರ ಕ್ರಮೇಣ ತಮ್ಮ ಬಣ್ಣವನ್ನು ಸಂಪೂರ್ಣ ಬದಲಾಯಿಸುತ್ತಾರಲ್ಲಾ, ಏನು ಮಾಡೋದು? ಯಾವ ಆಧಾರದ ಮೇಲೆ ಇವರನ್ನು ನಂಬಬೇಕು? ಒಂದೂ ತೋಚೋದಿಲ್ಲ.
ಹಂಸಾನಂದಿಯವರೆ,
ಹೌದು, ಪ್ರಾಣಿದಯ ಎಂದರೆ ಸುಮ್ಮನೆ ಬೀದಿನಾಯಿಗಳಿಗೆ ನಮ್ಮ ಮನೆಯಲ್ಲಿ ಉಳಿದ ಅನ್ನವನ್ನೋ, ಮತ್ತೊಂದನ್ನೋ ಹಾಕೋದಲ್ಲ. ನಿಜಕ್ಕೂ ಬೀದಿನಾಯಿಗಳ ಬಗ್ಗೆ ದಯೆಯಿದ್ದಲ್ಲಿ, ಅವುಗಳಲ್ಲಿ ಒಂದನ್ನು ಆರಿಸಿ, ನಮ್ಮದಾಗಿಸಿಕೊಂಡು, ಮನೆಯಲ್ಲಿ ಸಾಕಿ, ಕುತ್ತಿಗೆ ಪಟ್ಟಿ ಕಟ್ಟಿ ಚೆನ್ನಾಗಿ ನೋಡಿಕೊಳ್ಳಬೇಕು. ಅದು ಬಿಟ್ಟು ಸುಮ್ಮನೆ ಬೀದಿನಾಯಿಗಳನ್ನು ಪ್ರೋತ್ಸಾಹಿಸಿದರೆ ತಪ್ಪಾಗುತ್ತದೆ ಅಂತ ನನ್ನ ಅನಿಸಿಕೆ.
ಒಂದು ನಿಮಿಷ ಯೋಚಿಸೋಣ: ಇದೇ ರೀತಿ ನಮ್ಮ ಮನೆಯ ಪುಟ್ಟ ಮಗುವೊಂದು, ನಮ್ಮದೇ ಬೀದಿಯ ನಾಯಿಗಳಿಂದ ಕಚ್ಚಿ ಸಾಯಿಸಲ್ಪಟ್ಟರೆ (ಬಿಡ್ತು, ಹಾಗಾಗದಿರಲಿ), ಆಗ ಕೂಡಾ ನಾವು ಮಾರನೆಯ ದಿನದಿಂದ ಇದೇ ಪ್ರಾಣಿದಯೆ ತೋರಿಸಿ, ಹೀಗೇ ಅನ್ನ ಹಾಕಿ ಓಲೈಸುತ್ತೀವಾ? ಖಂಡಿತ ಇಲ್ಲ. ಆ ಕ್ಷಣವೇ ನಮ್ಮ ಬೀದಿಯಲ್ಲಿನ ಎಲ್ಲ ಬೀದಿನಾಯಿಗಳನ್ನೂ ಹೊಡೆದೋಡಿಸಿ ಇನ್ನೊಮ್ಮೆ ನಮ್ಮ ಬೀದಿಗೆ ಕಾಲಿಡದ ಹಾಗೆ ಮಾಡುತ್ತೇವೆ, ಅಲ್ವಾ?
- ಶ್ಯಾಮ್ ಕಿಶೋರ್