ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ
- ಸವಿ: ಕರ್ನಾಟಕ ಸಂಗೀತದ ರಸಾನುಭವ By: Sunil Jayaprakash (Mar 6 2007 - 11:01am)
- Re: ಸವಿ: ಕರ್ನಾಟಕ ಸಂಗೀತದ ರಸಾನುಭವ By: hamsanandi (Mar 7 2007 - 2:34am)
- ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ By: Shyam Kishore (Mar 6 2007 - 8:15am)
- Re: ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ By: ಶ್ರೀನಿಧಿ (Mar 6 2007 - 11:08am)


RSS:
ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ
ಹಂಸಾನಂದಿಯವರೆ,
ನಾನೂ ಒಬ್ಬ ಸಂಗೀತಪ್ರೇಮಿ. ಆದರೆ ರಾಗಗಳ ಬಗ್ಗೆ ಅಂತಹಾ ತಿಳುವಳಿಕೆಯೇನಿಲ್ಲ. ತಿಳಿದುಕೊಳ್ಳಬೇಕೆಂಬ ಹಂಬಲವೇನೋ ಇದೆ. ನಿಮ್ಮ ವಿಚಾರಧಾರೆ ಬಹಳ ಚೆನ್ನಾಗಿದೆ. ಖಂಡಿತ ಕಾರ್ಯಗತಗೊಳಿಸಿ.
ಆದಷ್ಟೂ ಸರಳವಾಗಿ (ಆದರೆ diluted ಆಗಿಯಲ್ಲ!), ಜನಪ್ರಿಯ ಹಾಡುಗಳ-ಕೀರ್ತನೆಗಳ ಮೂಲಕ, ರಾಗಗಳ ಬಗ್ಗೆ ನೀವು ವಿವರವಾಗಿ ಬರೆದರೆ, ಆಸಕ್ತರು ಅದನ್ನೋದಿ, ಜತೆಗೇ ಆ ಹಾಡುಗಳನ್ನು ಕೇಳಿ, ಆ ನಿಟ್ಟಿನಲ್ಲಿ ಸ್ವಲ್ಪ ಪರಿಶ್ರಮ ಮತ್ತು ಅಭಿರುಚಿಗಳನ್ನು ರೂಢಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಸಂಪದಿಗರಲ್ಲಿ ಸಂಗೀತದ ಬಗ್ಗೆ ತಿಳಿದವರು ತಂತಮ್ಮ ರಾಗಜ್ಞಾನವನ್ನು ಹಂಚಿಕೊಳ್ಳಲು ಇದೊಂದು ವೇದಿಕೆಯಾದಂತಾಗುತ್ತದೆ ಅಲ್ಲವೇ?
- ಶ್ಯಾಮ್ ಕಿಶೋರ್