~
ಸವಿ: ಕರ್ನಾಟಕ ಸಂಗೀತದ ರಸಾನುಭವ
- ಸವಿ: ಕರ್ನಾಟಕ ಸಂಗೀತದ ರಸಾನುಭವ By: Sunil Jayaprakash (Mar 6 2007 - 11:01am)
- Re: ಸವಿ: ಕರ್ನಾಟಕ ಸಂಗೀತದ ರಸಾನುಭವ By: hamsanandi (Mar 7 2007 - 2:34am)
- ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ By: Shyam Kishore (Mar 6 2007 - 8:15am)
- Re: ಸ್ವಾಗತ: ಕರ್ನಾಟಕ ಸಂಗೀತದ ರಸಾನುಭವ By: ಶ್ರೀನಿಧಿ (Mar 6 2007 - 11:08am)

RSS:
ಸವಿ: ಕರ್ನಾಟಕ ಸಂಗೀತದ ರಸಾನುಭವ
ನಮಸ್ಕಾರ ಹಂಸಾನಂದಿಯವರೆ,
ನೀವು ಈ ಕೆಲಸ ಮಾಡುವಿರಾದರೆ, ನಾನು ನಿಜಕ್ಕೂ ಅವುಗಳನ್ನು ಓದಿ ಆನಂದಪಟ್ಟು, ಅವುಗಳಿಗೆ ಸ್ಪಂದಿಸುವೆ. ಓದಿ ಆಸ್ವಾದಿಸುವ ವರ್ಗ ಖಂಡಿತವಾಗಿಯೂ ಸಂಪದದಲ್ಲಿ ಇದೆ. ನಾನು ಇನ್ನೂ ಸಂಗೀತದಲ್ಲಿ ಅಂಬೆಗಾಲಿಡುವ ಪ್ರಯತ್ನ ಮಾಡುತ್ತಿರುವವನು. ಸದ್ಯಕ್ಕೆ ನನಗೆ ತಾಳಗಳ ಪರಿಚಯವಿದೆ, ಆದರೆ ರಾಗಗಳು ಅಷ್ಟಾಗಿ ತಿಳಿದಿಲ್ಲ. ಒಂದು ಹಾಡು ಕೇಳಿದಾಗ, ನೀವು ಪ್ರಸ್ತಾಪಿಸಿದ Pattern Matchingನಿಂದ ಆ ಕೃತಿ, ಯಾವ ರಾಗದಲ್ಲಿದೆ ಎಂದು ಕಂಡುಹಿಡಿಯುವ ಕುತೂಹಲ ಸಾಕಷ್ಟಿದೆ. ನೀವು ಈ ದಿಸೆಯಲ್ಲಿ ಪ್ರಯತ್ನಪಡುವಿರಾದರೆ ನಾನು ತುಂಬಾ ಕೃತಜ್ಞನಾಗಿರುತ್ತೇನೆ.
ಈಗ್ಗೆ ಸುಮಾರು ತಿಂಗಳುಗಳ ಹಿಂದೆ, ನಾನು ಸಂಗೀತ ಪಾಠದ ಮೊದಲ ಗೀತೆ ಎಂಬುದಾಗಿ ನನ್ನ ಮೊದಲ ಕಲಿಕೆಯ ಬಗ್ಗೆ ಬ್ಲಾಗಿದ್ದೆ. ಏನಾದರೂ ತಪ್ಪುಗಳಿದ್ದರೆ ತಿಳಿಸಿಕೊಡಿ. ಆ ಲೇಖನವನ್ನು ಬರೆದಾಗ ನನಗೆ ತಾಳಜ್ಞಾನ ಅಷ್ಟಿರಲಿಲ್ಲ. ಈಗ ತಾಳಜ್ಞಾನ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಆದರೆ ರಾಗಗಳ ವಿಷಯದಲ್ಲಿ ಇನ್ನೂ ಅಜ್ಞಾನಿಯೇ.