ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಅನಿಸಿಕೆ: ಮಾಯಾಲೋಕ-೧: ವಿಹಾರಾನಂದ

March 6, 2007 - 12:10pm — Shyam Kishore

ಅನಿಸಿಕೆ: ಮಾಯಾಲೋಕ-೧: ವಿಹಾರಾನಂದ

Shyam Kishore's picture

ನಿಜಕ್ಕೂ ಈ ಪುಸ್ತಕದ ಶೀರ್ಷಿಕೆ "ಮಾಯಾಲೋಕ" ಅನ್ವರ್ಥನಾಮವೇ! ಒಂದು ಹಂದರವಾಗಲೀ, ಕ್ರಮವಾಗಲೀ ಇಲ್ಲದೆ ವಿಭಿನ್ನವಾಗಿ ಸಾಗುವ ನಿರೂಪಣೆ ಉಂಟುಮಾಡುವ ಗೊಂದಲ-ಗೋಜಲು ಒಂದು ಕಡೆಯಾದರೆ, ಪ್ರತಿ ಪುಟದಲ್ಲೂ ಇರುವ ಕಪ್ಪು-ಬಿಳುಪು ಚಿತ್ರಗಳು ಸೃಷ್ಟಿಸುವ ಭ್ರಮೆ ಇನ್ನೊಂದೆಡೆ. ಎಲ್ಲವೂ ಸೇರಿ ಒಂದು ವಿಭಿನ್ನ ಮಾಯಾಲೋಕವನ್ನೇ ನಮ್ಮ ಮುಂದಿಡುತ್ತವೆ. ಕಾದಂಬರಿಯನ್ನು ಓದಿ ಮುಗಿಸಿದ ನಂತರ ನನಗಾದ ಅನುಭವ ಒಂದು ಹದ ಮಳೆಯಲ್ಲಿ ನೆಂದು ಬಂದಂತೆ, ಟೆಂಟೊಂದರಲ್ಲಿ ಸಿನೆಮಾ ನೋಡಿ ಬಂದಂತೆ, ನನ್ನದೇ ನೆನಪಿನ ಓಣಿಗಳಲ್ಲಿ ಸುತ್ತಾಡಿ ಬಂದಂತೆ. ಹೇಳಲು ಸಾಧ್ಯವಿಲ್ಲ, ಆದರೆ ಅದರ ರಸಾನುಭವ ಉಂಟಾದದ್ದು ಮಾತ್ರ ಸತ್ಯ.

ಏಡಿಗಳನ್ನು ಗುಡ್ಡೆಹಾಕಿ ಹಿಡಿಯುವ ಸಂದರ್ಭ, ಹಾವು ಓಡಿಸುವುದು ಇವೆರಡೂ ತೇಜಸ್ವಿಯವರ ಹಾಸ್ಯಭರಿತ ಅನನ್ಯ ನಿರೂಪಣಾ ವಿಧಾನದ ಎರಡು ಉದಾಹರಣೆಗಳಷ್ಟೇ. ಮೇಲ್ನೋಟಕ್ಕೆ ಹಾಸ್ಯದ ಹಾಗೆ ಕಾಣುವ ಈ ಕಥೆ, ಉದ್ದಕ್ಕೂ ಕಂಡೂ ಕಾಣದ ಹಾಗೆ (ಗುಪ್ತಗಾಮಿನಿಯಂತೆ) ಜಾಗತೀಕರಣದ ಪರಿಣಾಮಗಳನ್ನು ಯಾವುದೇ ಭಾಷಣಗಳಿಲ್ಲದೆ, ಗಹನವಾದ ಉದಾಹರಣೆಗಳಿಲ್ಲದೆ, ಅತ್ಯಂತ ಸರಳವಾಗಿ ಬಿಚ್ಚಿಡುತ್ತಾ ಹೋಗುತ್ತದೆ. ಇದರ ಪರಾಕಾಷ್ಠೆಯೆಂದರೆ ಕೊನೆಯಲ್ಲಿ ತಾವೇತಕ್ಕೆ ಮುಷ್ಕರ ಮಾಡುತ್ತಿದ್ದೇವೆ ಎನ್ನುವುದನ್ನೂ ತಿಳಿಯದೇ, ಮುಷ್ಕರಕ್ಕಿಳಿದು, ಅಸಹಾಯಕರಾಗಿ ಒದ್ದಾಡುವ ಜನರ ಚಿತ್ರಣ. ಮಾಯಾಲೋಕದ ಈ ಹಂತದಲ್ಲಿ, ಕಥೆಗಾರರ ಮೂಲ ಆಶಯ ಹಾಸ್ಯ ಅಥವಾ ಒಂದು ರಮ್ಯ ಕಥಾನಕವಷ್ಟೇ ಅಲ್ಲ ಅಂತನ್ನಿಸಿ, ಚಿಂತನೆಗೆ ಹಚ್ಚುತ್ತದೆ.

ಪೂರಕ ಓದಿಗೆ, "ಮಾಯಾಲೋಕ"ದ ಬಗ್ಗೆ ಜಾನಕಿಯವರ ಈ ಪರಿಚಯಾತ್ಮಕ ಬರಹವನ್ನೂ ಓದಿ ನೋಡಿ: ಥ್ಯಾಂಕ್ಯೂ ಮಿಸ್ಟರ್ ತೇಜಸ್ವಿ!

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಮಾಯಾಲೋಕ-೧: ವಿಹಾರಾನಂದ By: anivaasi (1 replies) March 6, 2007 - 11:09am
  • ಅನಿಸಿಕೆ: ಮಾಯಾಲೋಕ-೧: ವಿಹಾರಾನಂದ By: Shyam Kishore (Mar 6 2007 - 12:10pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rameshbalaganchi
    ಉ: ಬಹು - ಭಾಷಾ - ತಮಾಷಾ!!!
    January 8, 2009 - 4:41am
  • mahesha
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 2:14am
  • rasikathe
    ಉ: ನಗುವ ನಯನ, ಮಧುರ ಮೌನ
    January 8, 2009 - 1:12am
  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator