ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ!
- ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ! By: Shyam Kishore (Mar 7 2007 - 5:38am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: shreekant.mishrikoti (Dec 12 2006 - 3:16pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಕಾರ್ತಿಕ್ ವೀರಾಜ್ (Mar 6 2007 - 10:48am)
- Re: ಕನ್ನಡ ಬಳಕೆ ವ್ಯಾಪಿಸಲಿ. By: ASHOKKUMAR (Mar 6 2007 - 11:24am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಕಾರ್ತಿಕ್ ವೀರಾಜ್ (Mar 6 2007 - 10:48am)
- ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: Sunil Jayaprakash (Dec 12 2006 - 1:49pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಶಶಾಂಕ (Dec 12 2006 - 1:32pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: veereshraya (Dec 12 2006 - 2:20pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: hpn (Dec 12 2006 - 5:29am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (Dec 12 2006 - 7:03am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: kannadiga_1956 (Dec 12 2006 - 1:17pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (Dec 12 2006 - 7:03am)

RSS:
ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ!
ನಿಜಕ್ಕೂ ನನ್ನ ಎದೆಯಾಳದ ಆಶಯ ಅಂದರೆ, ಇನ್ನು ಮೂರು ವರ್ಷದಲ್ಲಿ ಅಲ್ಲ, ಅದಕ್ಕಿಂತಲೂ ಬೇಗ ನಮ್ಮ ಹೃದಯಗಳಲ್ಲಿ ಕನ್ನಡ ನೆಲಸಲಿ ಅನ್ನುವುದು. "ಇದೇನಪ್ಪಾ ಎಂಥ ವಿಚಿತ್ರ ಉತ್ತರ?" ಎಂದು ಹುಬ್ಬೇರಿಸಬೇಡಿ. ನನ್ನ ಅನಿಸಿಕೆಯನ್ನು ಸ್ವಲ್ಪ ವಿವರಿಸುತ್ತೀನಿ.
೧. ಕನ್ನಡ ಕೇವಲ ನಮ್ಮ ಮನಸ್ಸು-ಬುದ್ಧಿಗಳ ಚೌಕಟ್ಟಿನಲ್ಲಿ ಮಾತ್ರ ನೆಲೆಗೊಂಡಿದ್ದರೆ ಆಗ "ಕನ್ನಡಕ್ಕಾಗಿ" ಅಂತ (ಹೌದು ನನ್ನ ಸ್ವಂತ ಉಪಯೋಗಕ್ಕಾಗಿ ಅಂತಲ್ಲ; ನನಗೆ ಸ್ವಲ್ಪ ತೊಂದರೆ, ಶ್ರಮ ಆದರೂ ಚಿಂತೆಯಿಲ್ಲ, ಕನ್ನಡಕ್ಕಾಗಿ ಅಂತ) ಯಾವುದೇ ಕೆಲಸವನ್ನು ಮಾಡುವ ಹುಮ್ಮಸ್ಸು ಅಷ್ಟಾಗಿ ಇರುವುದಿಲ್ಲ. ಅದೇ ಕನ್ನಡ ನಮ್ಮ ಹೃದಯಕ್ಕೆ ಹತ್ತಿರವಾದರೆ, ಆಗ ನಮ್ಮಲ್ಲಿ ಕನ್ನಡದ ಕುಂದು-ಕೊರತೆಗಳ ಬಗ್ಗೆ ಯೋಚಿಸುವ ಮನಸ್ಸು-ಬುದ್ಧಿಗಳಿಗಿಂತ ಮೊದಲು ಹೃದಯ ತನ್ನ ಪ್ರೀತಿಯನ್ನು ತೋರಿಸುತ್ತದೆ. ನೀವೇ ಹೇಳಿ, ಎಂದಿಗೂ ಹೃದಯಕ್ಕೆ ಹತ್ತಿರವಾದದ್ದರ ಬಗ್ಗೆ ನಮಗೆ ಹೆಚ್ಚು ಆಸಕ್ತಿ ಅಲ್ಲವೇ?
೨. ಹಾಗೆಂದ ಮಾತ್ರಕ್ಕೆ ಕನ್ನಡಕ್ಕೆ ಸಂಬಂಧಪಟ್ಟ ವಿಚಾರಗಳ ಬಗೆಗೆ, ಭಾವನೆಗಳ ಆವೇಶವಿಲ್ಲದ, ಅತಿರೇಕಗಳಿಲ್ಲದ, ಶುದ್ಧ ವಿಚಾರವಾದ ಬೇಡವೆಂದು ಖಂಡಿತ ನಾನು ಹೇಳುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕನ್ನಡದ ನಾಡು-ನುಡಿಗೆ ಅಗತ್ಯವಿರೋದು ವಿಚಾರವಾದಕ್ಕಿಂತ ಮೊದಲು ಅಗಾಧ ಕನ್ನಡ ಪ್ರೀತಿ ಅಂತ ನನ್ನ ಅನಿಸಿಕೆ. ಒಂದಷ್ಟು ವರುಷ ಈ "ಕನ್ನಡ ಪ್ರೀತಿ" ನಮ್ಮನ್ನು ಆವರಿಸಿಕೊಳ್ಳಲಿ. ಈ ಪ್ರೀತಿಯಿಂದಾಗಿ, ಒಂದು ರೀತಿಯ ಕುರುಡು ನಂಬಿಕೆ ಅಂತಾರಲ್ಲ ಹಾಗಾದರೂ ಚಿಂತೆಯಿಲ್ಲ, ಕನ್ನಡದ ಪರ ಕೆಲಸಗಳು ಭರದಿಂದ ನಡೆಯಲಿ. ಆನಂತರ ಕನ್ನಡದ ಕುಂದು-ಕೊರತೆಗಳ ಬಗ್ಗೆ ನಿರ್ಭಾವುಕರಾಗಿ ಚರ್ಚೆ ನಡೆಸೋಣ, ಏನಂತೀರಾ?
೩. ಒಮ್ಮೆ ಕನ್ನಡ ನಮ್ಮ ಹೃದಯಕ್ಕೆ ಹತ್ತಿರವಾದರೆ, ತಾನಾಗಿಯೇ ಅದು ನಮ್ಮ ಮನಸ್ಸನ್ನೂ ಆಕ್ರಮಿಸುತ್ತದೆ. ನಾಲಗೆಯ ಮೇಲೆ, ಬರವಣಿಗೆಯಲ್ಲಿ, ನಡೆ-ನುಡಿಗಳಲ್ಲಿ, ಆಚಾರ-ವಿಚಾರಗಳಲ್ಲಿ, ಹೀಗೆ ಎಲ್ಲೆಲ್ಲೂ ನಲಿದಾಡುತ್ತದೆ. ಅದರಿಂದ ಕೊಂಚ ಶ್ರಮವಾಗಬಹುದು ನಿಜ. ಆದರೆ ಪ್ರೀತಿಯ ವಿಚಾರ ಬಂದಾಗ ಶ್ರಮದ ಮಾತೆಲ್ಲಿ, ಅಲ್ಲವೇ?
ನಿಮಗೇನನ್ನಿಸಿತು ಅಂತ ಹೇಳುತ್ತೀರಾ? ಕೊಂಚ ಶ್ರಮವಾದರೂ ಪರವಾಗಿಲ್ಲ, ಎರಡು ಸಾಲು ಕನ್ನಡದಲ್ಲಿ ಗೀಚೀಪ್ಪಾ!
- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)