ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: pavanaja (Mar 8 2007 - 11:27am)
- ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: Shyam Kishore (Mar 8 2007 - 12:11pm)
- Re: ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: vasista2k (Mar 8 2007 - 7:24pm)
- ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು By: Shyam Kishore (Mar 8 2007 - 12:11pm)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 4:38am)
- ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: Shyam Kishore (Mar 8 2007 - 5:10am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: avlokana (Mar 8 2007 - 5:47am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: ಶ್ರೀನಿಧಿ (Mar 8 2007 - 6:37am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 7:03am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: ಶ್ರೀನಿಧಿ (Mar 8 2007 - 6:37am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: hamsanandi (Mar 8 2007 - 5:33am)
- Re: ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: avlokana (Mar 8 2007 - 5:47am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:47am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ismail (Mar 8 2007 - 11:12pm)
- ಮಾಹಿತಿ: Re: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 9 2007 - 2:56am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: anivaasi (Mar 8 2007 - 5:10am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ismail (Mar 8 2007 - 11:12pm)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: hamsanandi (Mar 8 2007 - 4:51am)
- Re: ಎಸ್. ಎಲ್. ಭೈರಪ್ಪನವರ ’ಆವರಣ’ By: ವೈಭವ (Mar 8 2007 - 9:06am)
- ಅನಿಸಿಕೆ: ಎಸ್. ಎಲ್. ಭೈರಪ್ಪನವರ ’ಆವರಣ’ - ಓದಲು ಹಿಂಜರಿಕೆಯೇಕೆ?! By: Shyam Kishore (Mar 8 2007 - 5:10am)
- ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: Shyam Kishore (Mar 8 2007 - 3:47am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 3:52am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: ಶ್ರೀನಿಧಿ (Mar 8 2007 - 4:22am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 4:35am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: ಶ್ರೀನಿಧಿ (Mar 8 2007 - 4:22am)
- Re: ಉ: ಎಸ್. ಎಲ್. ಭೈರಪ್ಪನವರ ’ಆವರಣ’ By: avlokana (Mar 8 2007 - 3:52am)

RSS:
ಪ್ರ: ಭೈರಪ್ಪನವರ ’ಆವರಣ’ - ಅದರ ಬೆನ್ನಿಗೊಂದಷ್ಟು ಪ್ರಶ್ನೆಗಳು
ಪವನಜ ಅವರೆ,
ನೀವು ತೋರಿದ ಬೇಳೂರು ಸುದರ್ಶನರವರ ಲೇಖನ ಓದಿದೆ. "ಆವರಣ"ವನ್ನು ಓದುವ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ನಿಜ, ಕೆಲವೊಂದು ವಿಚಾರಗಳಲ್ಲಿ ಭೈರಪ್ಪನವರು ಕೊಂಚ ಬದಲಾಗಿರುವುದು ಕಾಣುತ್ತದೆ. ತಮ್ಮದೇ ಚಿಪ್ಪಿನೊಳಗೆ ಹುದುಗಿರುತ್ತಿದ್ದ ಅವರು ಈಗೀಗ ಸಂದರ್ಶನಗಳು, ಸಂವಾದಗಳಲ್ಲಿ ಭಾಗವಹಿಸತೊಡಗಿದ್ದಾರೆ.
ಆದರೆ ನನಗನ್ನಿಸಿದಂತೆ ನಮ್ಮ ಭಾರತೀಯ (ಹೌದು ಕನ್ನಡ ಮಾತ್ರವಲ್ಲ, ಇಡಿಯ ಭಾರತೀಯ) ಸಾರಸ್ವತ ಲೋಕದ ವಿಚಿತ್ರವೆಂದರೆ, ಯಾರದ್ದಾದರೂ ಬರಹವನ್ನು ಖಂಡಿಸುವವರು (ಭೈರಪ್ಪ ಅಂತಲ್ಲ, ಸಾಮಾನ್ಯವಾಗಿ ಕೆಲವೊಂದು ಸತ್ಯಗಳನ್ನು ಹೊರಹಾಕಲು ಯಾರೇ ಪ್ರಯತ್ನಪಟ್ಟರೂ) ಆ ಲೇಖಕ ತನ್ನ ಕೃತಿಯಲ್ಲಿ ಬರೆದಿರುವ ವಿಚಾರಗಳ ಬಗ್ಗೆ ಇನ್ನೂ ವ್ಯಾಪಕ ಅಧ್ಯಯನ ಮಾಡಿ, ಇನ್ನಷ್ಟು ಪುರಾವೆಗಳನ್ನು ಕಲೆಹಾಕಿ, "ನೋಡಯ್ಯಾ, ನೀನು ಬರೆದದ್ದು ಬರೀ ಪೊಳ್ಳು, ಸುಳ್ಳಿನ ಕಂತೆ. ನಿಜ ಇಲ್ಲಿದೆ; ತಾಕತ್ತಿದ್ದರೆ ಈಗ ವಾದ ಮಾಡು ಬಾ" ಎಂದು ತಾವು ಗುಡ್ಡೆಹಾಕಿದ ಪುರಾವೆಗಳನ್ನು ಆ ಲೇಖಕನ ಮುಂದಿಟ್ಟು, ತಾತ್ವಿಕವಾಗಿ ವಿರೋಧಿಸುವುದೇ ಇಲ್ಲ. ನಮ್ಮ ಸೋ ಕಾಲ್ಡ್ ಬುದ್ಧಿಜೀವಿಗಳು ಯಾಕೆ ಈ ನೇರವಾದ ಮಾರ್ಗ ಅನುಸರಿಸುವುದಿಲ್ಲ ಎಂಬ ಪ್ರಶ್ನೆ ಬಹಳ ದಿನಗಳಿಂದ ನನ್ನನ್ನು ಕಾಡುತ್ತಿದೆ. "ಆ ಲೇಖಕ ಕೋಮುವಾದಿ", "ಇವನು ಜಾತಿವಾದಿ", "ಇವನು ಆ ಬಣ್ಣದ ಗುಂಪಿಗೆ ಸೇರಿದವನು" ಅಂತೆಲ್ಲ ಬರಹಗಾರನನ್ನೇ ಮೂದಲಿಸಿ, ಆತನಿಗೊಂದು ಹಣೆಪಟ್ಟಿ ಕಟ್ಟಿ, ಹೋರಾಟಕ್ಕಿಳಿಯುತ್ತಾರೆ. ಒಂದು ರೀತಿಯಲ್ಲಿ ಇಂತಹ ಬೆಳವಣಿಗೆಗಳು ಜನರನ್ನು ಭಾವೋದ್ವೇಗಗಳಿಗೆ ಒಳಪಡಿಸಿ ದಾರಿ ತಪ್ಪಿಸುತ್ತೆ ಅಲ್ಲವೆ? ಅಂತೆಯೇ ಲೇಖಕರ ಪರವಾಗಿ ಕೇವಲ "ಅಭಿಮಾನದಿಂದ" (ಲೇಖಕರ ಬಗೆಗಿನ ಅಭಿಮಾನ, ಅವರು ಬರೆದಿದ್ದರ ಬಗೆಗಲ್ಲ!) ವಾದಿಸುವ ಗುಂಪೂ ಸಹ ಅಷ್ಟೇ ಅಪಾಯಕಾರಿಯಾದದ್ದೇನೋ?
ಯಾವ ಲೇಖಕರೇ ಆಗಿರಲಿ, ಅವರು ಬರೆದಿದ್ದರ ಸತ್ಯಾಸತ್ಯಗಳ ಬಗ್ಗೆ ಯಾವುದೇ ಪೂರ್ವಾಗ್ರಹಗಳಿಲ್ಲದ ಚರ್ಚೆ ನಡೆದು, ಲೇಖಕನದ್ದು ತಪ್ಪು ಗ್ರಹಿಕೆ ಎಂದು ತೀರ್ಮಾನವಾದಲ್ಲಿ, ಆಗ ಎಲ್ಲರೂ ಆ ಬರಹಗಾರರನ್ನು "ನಿಮ್ಮ ಬರಹವನ್ನು ವಾಪಸು ತಗೊಳ್ಳಿ" ಎಂದು ಒತ್ತಾಯ ಮಾಡುವುದರಲ್ಲಿ ಅರ್ಥವಿದೆ. ಅಥವಾ ಈ ರೀತಿಯ ಸ್ಥಿತಿ ಒಂದು "ಯುಟೋಪಿಯಾ" ಮಾತ್ರವೇನೋ? ಸತ್ಯ ನಮಗೆ ಅಷ್ಟು "ಕಹಿ" ಎನ್ನುವ ಹಂತಕ್ಕೆ ನಾವೇಕೆ ಬಂದು ತಲುಪಿದ್ದೇವೆ?
ಇನ್ನಷ್ಟು ಅನ್ನಿಸಿದ್ದನ್ನು ಬರೆಯೋಣವೆನಿಸಿದರೂ, "ಸಂಪದ"ದಂತಹ ವೇದಿಕೆಯಲ್ಲಿ ಅವುಗಳ ಬಗ್ಗೆ ಉಲ್ಲೇಖ ಮಾಡಬಹುದೇ ಬೇಡವೇ, ಮಾಡಿದರೂ ಅದರ ಔಚಿತ್ಯವೇನು, ಎಂಬ ಗೊಂದಲಗಳು ಕಾಡುತ್ತಿವೆ.
- ಶ್ಯಾಮ್ ಕಿಶೋರ್