~
Re: ವಲಯ ತಂಡದಲ್ಲಿ ರಾಜ್ಯದ ಐವರು
- ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Feb 26 2007 - 9:46am)
- Re: ವಲಯ ತಂಡದಲ್ಲಿ ರಾಜ್ಯದ ಐವರು By: rajeshnaik111 (Mar 12 2007 - 5:09pm)
- Re: ಕರ್ನಾಟಕ ಕ್ರಿಕೆಟ್ - ೧ By: srivathsajoshi (Jan 10 2007 - 1:41am)
- Re: ಕರ್ನಾಟಕ ಕ್ರಿಕೆಟ್ - ೧ By: rajeshnaik111 (Jan 10 2007 - 12:47pm)
- Re: ಕರ್ನಾಟಕ ಕ್ರಿಕೆಟ್ - ೧ By: mrkryan (Jan 9 2007 - 2:09am)
- Re: ಕರ್ನಾಟಕ ಕ್ರಿಕೆಟ್ - ೧ By: Prabhu Murthy (Jan 11 2007 - 8:04am)

RSS:
Re: ವಲಯ ತಂಡದಲ್ಲಿ ರಾಜ್ಯದ ಐವರು
ದೇವಧರ್ ಟ್ರೋಫಿ ಪಂದ್ಯಾಟ ಮುಗಿದಿದೆ. ಪಶ್ಚಿಮ ವಲಯ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ದಕ್ಷಿಣ ವಲಯ, ಆಡಿದ ೪ ಪಂದ್ಯಗಳಲ್ಲಿ ೩ನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿ ಮುಖಕ್ಕೆ ಮಸಿ ಬಳಿದುಕೊಳ್ಳುವಂತಹ ಸಾಧನೆ ಮಾಡಿ ಹಿಂತಿರುಗಿದೆ. ನಾಯಕನಾಗಿದ್ದ ವಿ.ವಿ.ಎಸ್.ಲಕ್ಷ್ಮಣ್ ಪೂರ್ತಿ ಮನಸನ್ನು ವೆಸ್ಟ್ ಇಂಡೀಸ್ ನಲ್ಲಿರಿಸಿ, ಹೆಸರು ಕೆಡಿಸಿಕೊಳ್ಳಬಾರದೆಂಬ ಏಕೈಕ ಕಾರಣದಿಂದ ಕಾಟಾಚಾರದ ಸಲುವಾಗಿ ಆಡಿದರೆ ಬೇರೇನನ್ನು ತಾನೇ ನಿರೀಕ್ಷಿಸಬಹುದು?
ರಾಜ್ಯದ ಆಟಗಾರರಲ್ಲಿ ಬೌಲಿಂಗ್ ವಿಭಾಗದಲ್ಲಿ ಅಖಿಲ್ ಉತ್ತಮ ಪ್ರದರ್ಶನ ನೀಡಿದರೆ ಬ್ಯಾಟಿಂಗ್ ವಿಭಾಗದಲ್ಲಿ ತಿಲಕ್ ನಾಯ್ಡು ಸಾಧಾರಣ ಪ್ರದರ್ಶನ ನೀಡಿದರು. ಬ್ಯಾರಿಂಗ್ಟನ್ ಮತ್ತು ವಿನಯ್ ಕುಮಾರ್ ಕಳಪೆ ಪ್ರದರ್ಶನ ನೀಡಿದರು. ರಘುಗೆ ಒಂದೇ ಪಂದ್ಯದಲ್ಲಿ ಆಡಿಸಿ, ವಿ.ವಿ.ಎಸ್.ಲಕ್ಷ್ಮಣ್ ಅನ್ಯಾಯ ಮಾಡಿದರು. ರಾಜ್ಯದ ಐವರು ಆಟಗಾರರ ಸಾಧನೆ ಹೀಗಿತ್ತು:
ರೋಲಂಡ್ ಬ್ಯಾರಿಂಗ್ಟನ್: ೪ ಪಂದ್ಯಗಳಲ್ಲಿ ೨೪.೨೫ ಸರಾಸರಿಯಲ್ಲಿ ೯೭ ಓಟಗಳು.
ತಿಲಕ್ ನಾಯ್ಡು: ೪ ಪಂದ್ಯಗಳಲ್ಲಿ ೩೬.೦೦ ಸರಾಸರಿಯಲ್ಲಿ ೧೦೮ ಓಟಗಳು.
ಚಂದ್ರಶೇಖರ್ ರಘು: ೧ ಪಂದ್ಯದಲ್ಲಿ ಶೂನ್ಯ ಸಂಪಾದನೆ ಮತ್ತು ೫ ಓವರ್ ಎಸೆದು ೧೬ ಓಟಗಳಿಗೆ ಯಾವುದೇ ಹುದ್ದರಿಯಿಲ್ಲ.
ಬಾಲಚಂದ್ರ ಅಖಿಲ್: ೩ ಪಂದ್ಯಗಳಲ್ಲಿ ೧೬.೩೩ ಸರಾಸರಿಯಲ್ಲಿ ೪೯ ಓಟಗಳು ಮತ್ತು ೨೮ ಓವರ್ ಎಸೆದು ೨೫.೧೬ ಸರಾಸರಿಯಲ್ಲಿ ೬ ಹುದ್ದರಿಗಳು.
ವಿನಯ್ ಕುಮಾರ್: ೩ ಪಂದ್ಯಗಳಲ್ಲಿ ೦೨.೦೦ ಸರಾಸರಿಯಲ್ಲಿ ೪ ಓಟಗಳು ಮತ್ತು ೨೯ ಓವರ್ ಎಸೆದು ೩೪.೦೦ ಸರಾಸರಿಯಲ್ಲಿ ೪ ಹುದ್ದರಿಗಳು.