ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಚಿಂತನಾ ಬರಹದ ಆಶಯ

March 14, 2007 - 9:42pm — Sunil Jayaprakash

ಚಿಂತನಾ ಬರಹದ ಆಶಯ

Sunil Jayaprakash's picture

ಮೊಟ್ಟಮೊದಲಿಗೆ ಕ್ಷಮೆಯಿರಲಿ. ಈ ಎಳೆಯನ್ನು ಪ್ರಾರಂಭಿಸಿದರೂ, ಪ್ರತಿಕ್ರಿಯೆ ನೀಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡೆ.

ನಲ್ಮೆಯ ಹೆಚ್.ಎಸ್.ಆರ್.ರಾಘವೇಂದ್ರ ರಾವ್ ಅವರೇ,
ಬಸವಣ್ಣನವರ ವಚನವನ್ನು ಹಾಕಿದ್ದು ತುಂಬಾ ನೆರವಿಗೆ ಬಂತು. ಅದಕ್ಕಾಗಿ ಸವಿನೆರವು ಮತ್ತು ಸವಿಯೊದಗು. (ಸರಿಯಾದ ಸಮಯದಲ್ಲಿ ಒದಗಿ ಬಂದ ಸವಿಯಾದ ವಚನ. ನಾನು ಗಮನಿಸಿದ ಹಾಗೆ ಬರವಣಿಗೆಯಲ್ಲಿ ಕೆಲವೊಮ್ಮೆ ಧನ್ಯವಾದಗಳಿಗಿಂತ ಸವಿಯೊದಗು ಸೂಕ್ತವಾಗಿ ಹೊಂದುತ್ತದೆ). ಹಾಂ!, ಖಂಡಿತವಾಗಿಯೂ ಸಮಯ ಸಿಕ್ಕಾಗ ಬಸವಣ್ಣನವರ ವಚನಗಳನ್ನು ಓದುವ ಜತುನಗೈಯುತ್ತೇನೆ.

[ಉದಾ: Status Message = 'ಹದುಳ ಸಂದೇಶ' ವೇ?

ಅಂದ ಹಾಗೆ ನಿಮ್ಮ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದೇನೆ. ನೀವೀಗಾಗಲೇ ಗ್ರಹಿಸಿರುವಂತೆ, ನಾನು ಹಳಗನ್ನಡದಲ್ಲಿರಬಹುದಾದ ಸರಳ ಕನ್ನಡ ಪದಗಳನ್ನು ಈಗಿನ ವ್ಯವಹಾರದಲ್ಲಿ ಹೇಗೆ ನಾಮಪದಗಳನ್ನಾಗಿ ಬಳಸಬಹುದು ಎಂಬುದರ ಬಗ್ಗೆ ಚಿಂತನೆಗೈಯುತ್ತಿದ್ದೇನೆ. ಈ ಚಿಂತನೆಯಲ್ಲಿ ನಾನು ಉದಾಹರಣೆಯಾಗಿ ಹೇಳಬಯಸಿದ್ದು, Status Message = ಪದುಳ, ಅಂದರೆ ಪದುಳ ಎಂಬುದೇ Message ಅನ್ನು ಒಳಗೊಂಡಂತಹ ಪದವಾಗಬಹುದೇ ?.

ಏಕೆಂದರೆ ನೀವೂ ಪ್ರಸ್ತಾಪಿಸಿದ ಹಾಗೆ, ಪದುಳ = ಯೋಗಕ್ಷೇಮ.
ಡಿಕ್ಷನರಿ ಪ್ರಕಾರ,
[http://dsal.uchicago.edu/cgi-bin/philologic/getobject.pl?c.1:1:1323.burrow|paduḷa well-being, prosperity, happiness, tranquillity, security, safety;]

ಹಾಗಾಗಿ, ಪದುಳ ಎಂಬುದನ್ನೇ ನಾಮಪದ ಮಾಡಿದರೆ, ಅದು ಒಬ್ಬ ವ್ಯಕ್ತಿಯ well-being (ಸುಸ್ಥಿತಿ ಎಂದು ಅರ್ಥೈಸಿದರೂ, ಸ್ಥಿತಿ ಗತಿ ಎಂದೂ ಅರ್ಥೈಸಬಹುದು) ಪದುಳ ಸಂದೇಶ ಎಂದು explicit ಆಗಿ ಹೇಳಬೇಕಿರುವುದಿಲ್ಲ. ಪದುಳ ಎಂಬುದೇ ಸಂದೇಶವನ್ನು ಒಳಗೊಂಡಿರುತ್ತದೆ, ಹಾಗಾಗಿ Status Message = ಪದುಳ. ಪದುಳ ಸಂದೇಶವಲ್ಲ.

ಹಿಂದೆ - ಸ್ಟೇಟಸ್ ಮೆಸೇಜಿನಲ್ಲಿ ಏನು ಸೂಚಿಸಿದ್ದೀಯಾ ನೋಡು ?
ಈಗ - ಪದುಳದಲ್ಲಿ ಏನು ಬರ್ದೀದ್ದೀಯಾ ನೋಡು ? ಅಥವಾ ವೇಗವಾಗಿ ಮಾತನಾಡುವಾಗ ಪದದಲ್ಲಿ ಏನು ಬರ್ದಿದ್ದೀಯಾ ನೋಡು ಎಂದರೂ ಅರ್ಥವಾಗುತ್ತದೆ.
ಮತ್ತೊಂದು ಬಳಕೆ - ಸ್ಥಿತಿ ಸಂದೇಶದಲ್ಲಿ ಏನೆಂದು ಸೂಚಿಸಿದ್ದೀಯಾ ನೋಡು (??)

@ಎಲ್ಲರೂ,

ಪದುಳ ಎನ್ನುವದನ್ನು ನಾವು conceptualizationಗೆ ಬಳಸಬೇಕು. ಪದುಳ ಪದದ ಹಕಾರಾದಿಗಳು ಪದುಳದ ವಿವಧ ಸ್ಥಿತಿಯನ್ನು ನಿರೂಪಿಸಬೇಕು.
೧. ಹದುಳದಿಂದಿದ್ದೇನೆ ಎಂದರೆ ಚೆನ್ನಾಗಿದ್ದೇನೆ ಎಂದರ್ಥೈಸಬಹುದು.
೨. ಹದುಳ ಬನ್ನಿ ಎಂಬ ಬಳಕೆ ಅಶೋಕ್ ಅವರು ಪ್ರಸ್ತಾಪಿಸಿದ ಹಾಗೆ ಇನ್ನೂ ಬಳಕೆಯಲ್ಲಿದೆ. welcome ಎನ್ನುವುದಕ್ಕೆ ಕನ್ನಡದ ಸೊಗಡಿನಲ್ಲಿ ಕನ್ನಡ ನಾಡಿನ ಬೇರೆ ಬೇರೆ ಸೀಮೆಗಳಲ್ಲಿ ಈ ರೀತಿಯ ಬಳಕೆಗಳಿರಬಹುದು. ಕೇವಲ ಮೈಸೂರು ಸೀಮೆ ಮಾತ್ರವೇ ಕನ್ನಡನಾಡಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕಷ್ಟೇ.

ಅದೂ ಅಲ್ಲದೆ,
೧. Status Message ಅನ್ನು ಸಂದೇಶ ಎನ್ನುವಾಗ, ಸಂದೇಶವನ್ನು ಯಾರಿಗಾದರೂ ಕಳುಹಬೇಕು. ಆದರೆ ನಾವು ಚಾಟ್ ಮಾಡುವಾಗ Status Message ಅನ್ನು Set ಮಾಡುತ್ತೇವೆಯೇ ಹೊರತು ಯಾರಿಗೂ ನಮ್ಮ ಸಂದೇಶ ಕಳುಹುವುದಿಲ್ಲ. ಹಾಗಾಗಿ Status Message ಎನ್ನುವದನ್ನು ಸ್ಥಿತಿ ಸಂದೇಶ ಎನ್ನುವದು ಕನ್ನಡದ ಮಟ್ಟಿಗೆ ತರವಲ್ಲ ಎಂಬುವದು ನನ್ನ ಅಂಬೋಣ.

೨. ಇಂತಹ ಪ್ರಯೋಗಗಳನ್ನು (Status Message = ಪದುಳ, ಕೇವಲ ಒಂದು ಉದಾಹರಣೆ) ಮಾಡುವದರಿಂದ ಅನೇಕ ಪ್ರಯೋಜನಗಳುಂಟು.
೨.೧ ಕನ್ನಡ ನಾಡು ಭಾವನಾತ್ಮಕವಾಗಿ ಒಂದಾಗಲು ಒಂದು ಕಣ ಮರಳಿನಷ್ಟಾದರೂ ಸಹಾಯಕವಾಗುತ್ತದೆ. ಈ ಮೇಲಿನ ಮಾತನ್ನು ಓದಿ ಕೆಲವರಿಗೆ ನಗು ಬರಬಹುದು. ಆದರೆ, ಇದು ಕೇವಲ ಪದುಳ ಪದದ ಕುರಿತಾಗಿ ಅಲ್ಲ. ಅದಕ್ಕಿಂತ ದೊಡ್ಡ ಆಶಯದ್ದು. ಈಗಾಗಲೇ, ಅಶೋಕ್ ಕುಮಾರ್ ಅವರು ಪ್ರಸ್ತಾಪಿಸಿದ ಹಾಗೆ ಪದುಳ ಎಂಬುವದು ಇನ್ನೂ ಬಳಕೆಯಲ್ಲಿದೆ. ಮೈಸೂರು ಸೀಮೆಯಲ್ಲಿ ಪದುಳವಿಲ್ಲದಿದ್ದ ಮಾತ್ರಕ್ಕೆ ಅದು ಕನ್ನಡಿಗರಿಂದ ದೂರವಾಗಿದೆ ಎಂದು ಅರ್ಥೈಸಲು ಆಗದು.
೨.೨ ಬಹುಶಃ ವಚನಗಳನ್ನು, ಹಳೆಗನ್ನಡ ಕಾವ್ಯಗಳನ್ನು ಓದಿ, ಅದರಲ್ಲಿರಬಹುದಾದ ಪದಗಳನ್ನು ಹೆಕ್ಕಿ ಈಗಿನ ಕಾಲಕ್ಕೆ ಪ್ರಸ್ತುತವಾಗಿಸಿದರೆ, ಕನ್ನಡ ನಾಡಿನ ವಿವಿಧ ಸಮುದಾಯಗಳು ಕಡೇಪಕ್ಷ ಭಾಷೆಯ ವಿಷಯವಾಗಿಯಾದರೂ ಒಂದಾಗಬಹುದು. ಹಿಂದೆ ಒಕ್ಕಲಿಗರೂ, ಲಿಂಗಾಯತರೂ ಒಂದಾಗಲು ಸಾಧ್ಯವೇ ಎಂಬುದಾಗಿ ಚರ್ಚೆ ನಡೆದದ್ದು ನಿಮ್ಮ ಗಮನದಲ್ಲಿರಬಹುದು.

ನೆನಪಿರಲಿ, ಇದು ಒಂದು ಚಿಂತನಾ ಬರಹ. ಎಲ್ಲದಕ್ಕೂ ಸಮಯದ ಅಭಾವ ಮತ್ತು Globalization ಮೇಲೆ ಬೊಟ್ಟುಮಾಡಿ, ಬೇರೆ ಬೇರೆ ಭಾಷೆಗಳಿಂದ ಸ್ವೀಕರಿಸಬೇಕಾದ್ದು, ಸ್ವೀಕರಿಸಬೇಡದ್ದು ಎಲ್ಲವನ್ನೂ ಸ್ವೀಕರಿಸುತ್ತಿರುವ ನಾವುಗಳು, ನಮ್ಮದೇ ಕನ್ನಡವನ್ನು (ಮುಖ್ಯವಾಗಿ ಹಳೆಗನ್ನಡವನ್ನು) ಯಾವ ರೀತಿ conceptualizationಗೆ ಬಳಸಬಹುದು ಎಂಬುದನ್ನು ತಿಳಿಸಲು ಬರೆದದ್ದು.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (13 replies) March 9, 2007 - 3:11pm
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ವೈಭವ (Nov 29 2007 - 2:32pm)
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 1:04pm)
    • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 1:43pm)
      • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Nov 29 2007 - 3:34pm)
      • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: shreekant.mishrikoti (Nov 29 2007 - 2:46pm)
        • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Sunil Jayaprakash (Nov 29 2007 - 4:07pm)
  • ಉ: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: mahesha (Jul 14 2007 - 11:20pm)
  • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: pavanaja (Mar 12 2007 - 12:15am)
    • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: Khavi (Mar 22 2007 - 2:50pm)
  • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: ASHOKKUMAR (Mar 11 2007 - 9:22pm)
    • Re: ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ By: H.S.R.Raghavendra Rao (Mar 11 2007 - 10:29pm)
      • ಚಿಂತನಾ ಬರಹದ ಆಶಯ By: Sunil Jayaprakash (Mar 14 2007 - 9:42pm)
        • Status Message By: mahesha (Mar 15 2007 - 12:09am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Nagaraj.G
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:49pm
  • Narayana
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:46pm
  • Nagaraj.G
    ಉ: ಸ್ನೇಹಮಿಲನ ಹಾಜರಾತಿ
    January 7, 2009 - 10:44pm
  • prasannasp
    ಉ: ಮತ್ತೊಂದು ತಂತ್ರಜ್ಞಾನದ ಪರಾಕಾಷ್ಟೆ
    January 7, 2009 - 10:39pm
  • apr
    ಉ: ’ಕಿಂಗ್ ಕತೆ’
    January 7, 2009 - 10:27pm
  • gnanadev
    ಉ: ತೊಟ್ಟು ಕಿತ್ತ ಹೂವು
    January 7, 2009 - 10:09pm
  • anil.ramesh
    ಉ: ನಗುವ ನಯನ, ಮಧುರ ಮೌನ
    January 7, 2009 - 10:03pm
  • palachandra
    ಉ: ನಗುವ ನಯನ, ಮಧುರ ಮೌನ
    January 7, 2009 - 10:01pm
  • anil.ramesh
    ಉ: ನಗುವ ನಯನ, ಮಧುರ ಮೌನ
    January 7, 2009 - 9:58pm
  • palachandra
    ಉ: ನಗುವ ನಯನ, ಮಧುರ ಮೌನ
    January 7, 2009 - 9:53pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator