ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ

March 15, 2007 - 10:21am — Shyam Kishore

ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ

Shyam Kishore's picture

ಇಲ್ಲಾರೀ, ನನಗಂತೂ "ಬದ್ಧ" ಅಂದ ತಕ್ಷಣ, ಎಲ್ಲಾ ಬಿಟ್ಟು ನೀವು ಉದಾಹರಿಸಿದ "--ಬದ್ಧತೆ"ಯನ್ನು ನೆನಪಿಗೆ ತಂದುಕೊಳ್ಳಲು ಸ್ವಲ್ಪ ಹಿಂಸೆಯೆನಿಸುತ್ತೆ! Wink

"ಬದ್ಧ" ಅನ್ನುವುದನ್ನು ಗುಣವಾಚಕವಾಗಿ ಉಪಯೋಗಿಸಿದಾಗ "ಶ್ರೇಷ್ಠ" ಎನ್ನುವ ಅರ್ಥ ಕೊಡುತ್ತದೆ. ನಿಜ ಒಂದು ಪದಕ್ಕೆ ಹಲವಾರು ಅರ್ಥಗಳಿವೆ, ಇಲ್ಲವೆಂದಲ್ಲ. ಆದರೆ ವ್ಯಾಕರಣ ಬದ್ಧತೆಗೂ ಮತ್ತು ಇನ್ನೊಂದು ಬದ್ಧತೆಗೂ, ಅಜಗಜಾಂತರವಿದೆ. ಇದೊಂಥರ "ವ್ಯಾಕರಣ" ಅನ್ನುವ ಪದದಲ್ಲಿ "ವ್ಯಾ" ಇದೆ, ಅದು ಇನ್ಯಾವುದೋ ಶಬ್ದವನ್ನು ನೆನಪಿಸೋದಿಲ್ವೇ ಅಂದ ಹಾಗಾಯಿತು. Laughing ಇದು "ಭಯಂಕರ" ಹೋಲಿಕೆಯಾಯಿತು ಅನಿಸಿದಲ್ಲಿ ಬೇಜಾರಾಗಬೇಡಿ ಸ್ವಾಮೀ.

ಸಂಸ್ಕೃತ ಅಂತಲ್ಲ, ಯಾವುದೇ ಭಾಷೆಗಾದರೂ ವ್ಯಾಕರಣ ಬೇಕೇ ಬೇಕು ಅಲ್ಲವೇ? ೧೦೦% ವ್ಯಾಕರಣಕ್ಕೆ ಬದ್ಧವಾಗಿರುವುದು ಖಂಡಿತಾ ಸಾಧುವೂ ಅಲ್ಲ, ಸಾಧ್ಯವೂ ಅಲ್ಲ. ನಾನೂ ಒಪ್ಪುತ್ತೀನಿ. ಹೊಸತನವನ್ನು ಮೈಗೂಡಿಸಿಕೊಳ್ಳಲಿಲ್ಲ ಅಂದ್ರೆ ಭಾಷೆ ನಿಂತ ನೀರಾಗುತ್ತದೆ. ಹಾಗಂತ ಇರುವ ಎಲ್ಲವನ್ನೂ ಕಿತ್ತೊಗೆದರೆ ಅದರಿಂದ ಉಂಟಾಗುವ "ವೇಗದ ಹರಿವೂ" ಒಂದು ರೀತಿ ಒಡ್ಡು ಕಿತ್ತ ಪ್ರವಾಹದ ತರಹ; ಅಷ್ಟೇ ಕೆಡುಕನ್ನು ಮಾಡುತ್ತದೆ. ಹಾಗಾಗಿ ಈ ಎರಡು ಅತಿಗಳ (ಸಂಪೂರ್ಣ ವ್ಯಾಕರಣ ಬದ್ಧ v/s ವ್ಯಾಕರಣದ ಹಂಗೇ ಇಲ್ಲದ) ನಡುವೆ ಒಂದು ಹಿತವಾದ ಮಿತಿಯನ್ನು ಕಾಯ್ದುಕೊಳ್ಳುವುದು ಒಳ್ಳೆಯದು ತಾನೇ? ಮಾತನಾಡುತ್ತಾ "ಎರಡು ಹಣ್ಣಿದೆ" ಅನ್ನೋದು ಸರಿ. ಆದರೆ ಬರೆಯುತ್ತಾ "ಎರಡು ಹಣ್ಣುಗಳಿವೆ" ಎನ್ನುವ ಪ್ರಯೋಗವೂ ಇದೆಯೆನ್ನುವುದು ತಿಳಿದಿರುವುದು ನಮಗೇ ಒಳ್ಳೆಯದು ತಾನೇ?

- ಶ್ಯಾಮ್ ಕಿಶೋರ್

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: mahesha (12 replies) March 15, 2007 - 12:24am
  • ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: kishorpatwardhan (May 13 2007 - 11:03pm)
    • ಉ: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: mahesha (May 14 2007 - 10:53am)
  • Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: H.S.R.Raghavendra Rao (Mar 15 2007 - 11:03am)
    • Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: hamsanandi (Mar 15 2007 - 11:25am)
  • Re: ಕನ್ನಡದ ಆಡು ಮಾತಿಗೂ, ಬರೆಯುವ ಮಾತಿಗೂ ಏಕೆ ಬಹಳ ಅಂತರ??? By: ವೈಭವ (Mar 15 2007 - 9:08am)
    • ತಮಿಳು ಚಂಗ By: mahesha (Mar 15 2007 - 11:10am)
      • Re: ತಮಿಳು ಚಂಗ By: hamsanandi (Mar 15 2007 - 11:37am)
      • ದನಿಗೂಡು: ತಮಿಳು ಚಂಗ...ಇಂಗ್ಲೀಷು ಕೂಡಾ ಹಾಗೇ ಅಲ್ವಾ? By: Shyam Kishore (Mar 15 2007 - 11:17am)
  • ಪ್ರತಿಕ್ರಿಯೆ: ಕನ್ನಡದ ಆಡು ಮಾತಿಗೂ...ಸರ್ಕಾರೀ ಕನ್ನಡ By: Shyam Kishore (Mar 15 2007 - 2:49am)
    • ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 9:02am)
      • ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: Shyam Kishore (Mar 15 2007 - 10:21am)
        • Re: ಅಯ್ಯೋ! ಸ್ವಲ್ಪ ವ್ಯಾಕರಣ ಬದ್ಧ By: mahesha (Mar 15 2007 - 10:49am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • rasikathe
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 8, 2009 - 12:26am
  • bhasip
    ಉ: ನಿಮ್ಮನ್ನು ತುಂಬಾ ಕಾಡಿದ ಚಲನ ಚಿತ್ರ ಯಾವುದು?
    January 7, 2009 - 11:54pm
  • bhasip
    ಉ: ನಾವು ಅದೆಷ್ಟು ಬಡವರು!
    January 7, 2009 - 11:49pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:41pm
  • ಗಣೇಶ
    ಉ: ಎಂದರೋ ಮಹಾನುಭಾವುಲು ಅಂದರಿಕಿ ವಂದನಮುಲು
    January 7, 2009 - 11:17pm
  • Nagaraj.G
    ಉ: ನಾವು ಅದೆಷ್ಟು ಬಡವರು!
    January 7, 2009 - 11:12pm
  • ಗಣೇಶ
    ಉ: ನಗುವ ನಯನ, ಮಧುರ ಮೌನ
    January 7, 2009 - 11:08pm
  • ಗಣೇಶ
    ಉ: ವೈಕುಂಠ ಏಕಾದಶಿ
    January 7, 2009 - 10:57pm
  • Nagaraj.G
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:49pm
  • Narayana
    ಉ: Microwave Oven ನಲ್ಲಿ ಅನ್ನ ಮಾಡಿದ್ದರಾ??
    January 7, 2009 - 10:46pm
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator