ಶ್ಲೇಷಾಲಂಕಾರವಿದೆ?
- ಶ್ಲೇಷಾಲಂಕಾರವಿದೆ? By: mahesha (Mar 15 2007 - 3:47pm)
- Re: ಕಬ್ಬಿಗರ ಕಾವದ ಮೊದಲ ಪದ್ಯ By: ವೈಭವ (Feb 25 2007 - 2:42pm)
- ಕಂದಾಚಾರಗಳನ್ನು ಮೀರಿ ನಿಲ್ಲೋಣ By: Sunil Jayaprakash (Feb 26 2007 - 4:50pm)
- ನನೆವಿಲ್ಲಬಲ್ಲಹಂ ಅಂದರೆ ಏನು? By: mahesha (Mar 15 2007 - 3:30pm)
- ಕಂದಾಚಾರಗಳನ್ನು ಮೀರಿ ನಿಲ್ಲೋಣ By: Sunil Jayaprakash (Feb 26 2007 - 4:50pm)

RSS:
ಶ್ಲೇಷಾಲಂಕಾರವಿದೆ?
ಇಲ್ಲಿ ಶ್ಲೇಷಾಲಂಕಾರವಿದೆ ಎನ್ನಬಹುದೇ ತಿಳಿಯದು, ಆದರೆ ಕೊನೆಯ ಸಾಲಿಗೆ ಎರಡರ್ಥವಿದೆ.
೧. ಆವಗಂ ಮೆಯ್ಸಿರಿಯಂ ಈಗೆ - ಯಾವಾಗಲೂ ಸಂಪತ್ತನ್ನು ನೀಡುತ್ತಾ ಇರಲಿ.
೨. ಆವಗಂ ಮೆಯ್ಸಿರಿಯಂ ಈಗೆ - ಅಧಿಕ ಶ್ರೀಮಂತಿಕೆಯನ್ನು ಕರುಣಿಸಲಿ.
ನನಗಿದು ಶ್ಲೇಷ ಅನ್ನಿಸುವುದಿಲ್ಲ. ಶ್ಲೇಷದಲ್ಲಿ ಒಂದೇ ಸಾಲು ಎಂದು ಸನ್ನಿವೇಶಗಳನ್ನು ಹೇಳುವುದು ಅಂತ ಓದಿದ ನೆನೆಪು.
ನಾನು ಹತ್ತನೇ ತರಗತಿಯಲ್ಲಿ ಓದಿದ ಒಂದು ಶ್ಲೇಷಾಲಂಕಾರ ಉದಾಹರಣೆ ನೆನೆಪಿದೆ.
"ಸುಯೋಧನನು ಸಾಯುತ್ತಾ ಇರುತ್ತಾನೆ, ಆಗ ನೇಸರನೂ ಮುಳುಗುತ್ತಿರುತ್ತಾನೆ"
ಈಯೆರಡು ಸಂಗತಿಗಳನ್ನು ರನ್ನನು ಒಂದೇ ಸಾಲಿನಲ್ಲಿ
"ಕುರುಕುಲಾರ್ಕನುಂ ಅರ್ಕನುಂ ಅಸ್ತಮೇಯ್ದಿದರ್" ಎಂದು ಹೇಳ್ತಾನೆ. ಅಂದರೆ
ಕುರುಕುಲದ ಸೂರ್ಯನಾದ ಸುಯೋಧನನು ಮತ್ತು ಸೂರ್ಯನೂ ಇಬ್ಬರೂ ಮುಳುಗಿದರು ಎಂದು.