ನಾನು ೧೯೯೬ರಲ್ಲಿ ಒಂದು interviewಗೋಸ್ಕರ ಮುಂಬೈಗೆ ಬಂದು ಅಲ್ಲೇ ಸ್ನೇಹಿತನ ಮನೆಯಲ್ಲಿ ಒಂದು ತಿಂಗಳಿದ್ದೆ, ಆಗಿನ್ನೂ engineering ಮುಗಿಸಿದ್ದರಿಂದ ಕೆಲಸ ಹುಡುಕುವ ನೆವ ಬೇರೆ! ಒಮ್ಮೆ ನಾನು ಲೋಕಲ್ ಟ್ರೈನ್ ನಲ್ಲಿ ನನ್ನ ಸಣ್ಣ suitcase ಹಿಡಿದು ಪ್ರಯಾಣಿಸಬೇಕಾದರೆ ಸುಮಾರು ಒಂದು ೧೦ ಟ್ರೈನ್ ಗಳನ್ನು ಕಂಡು ಹೆದರಿ ಮುಂದಿನದಕ್ಕೆ ಕಾಯೋಣವೆಂದು, ಕೊನೆಗೆ ಒಂದನ್ನು ಹಿಡಿಯುವ ಧೈರ್ಯ ಮಾಡಿ ಬಾಗಿಲ ಹತ್ತಿರಕ್ಕೆ ಹೋದ ಕೂಡಲೇ ನನ್ನ suitcaseನ ಒಬ್ಬರು ಬಲವಂತವಾಗಿ ತೆಗೆದುಕೊಂಡರು, ಅವರ ಆ ಕ್ರಿಯೆ ನನಗೆ ಸಹಾಯ ಮಾಡಲೆಂದೇ ಆಗಿದ್ದರೂ ನನಗೆ ಆ ಜನಗಳ ಮಧ್ಯೆ ತೂರಿಕೊಂಡು ಆ ಟ್ರೈನ್ ಹತ್ತಲೇಬೇಕಾದ ಅನಿವಾರ್ಯವನ್ನೂ, ಗಾಬರಿಯನ್ನೂ ಅದು ಸೃಷ್ಟಿಸಿ ನನಗೆ ಮುಂಬೈ ಜೀವನದ ಪರಿಚಯ ಮಾಡಿಸಿತು!
ನನ್ನ ಮುಂಬೈ ಅನುಭವ..

-ನಾಗರಾಜ್.