ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

RE: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?

March 20, 2007 - 7:26am — anivaasi

RE: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ?

anivaasi's picture

ಮನುಷ್ಯ ತನ್ನ ಕತೆಯನ್ನು ಇನ್ನೊಬ್ಬನೊಡನೆ ಹಂಚಿಕೊಳ್ಳುವುದು ಒಂದು ಅಭಿಜಾತ ಒತ್ತಡ ಅನಿಸುತ್ತದೆ. ಅದಕ್ಕೆ ಬ್ಲಾಗ್ ಇನ್ನೊಂದು ಸಾಧನ ಎಂದು ತಿಳಿಯುತ್ತೇನೆ. ಆದರೆ ಬ್ಲಾಗನ್ನು ನಮಗೆ ಗೊತ್ತಿಲ್ಲದವರೂ ಓದುತ್ತಾರೆ ಎನ್ನುವುದು ಹೊಸ ಅಂಶವಷ್ಟೆ. ನೀವು ಮೋಬೈಲ್ ಮಾತುಕತೆಯ ಬಗ್ಗೆ ಹೇಳಿದ ಹಾಗೆ, ಫುಟ್‌ಪಾತ್, ಬಸ್ಸು, ರೈಲಿನಲ್ಲಿ ಗೊತ್ತಿಲ್ಲದವರ ಖಾಸಗಿ ಜೀವನದ ವಿವರಗಳು ನಮಗೆ ಈ ಹಿಂದೆಯೂ ತಿಳಿಯುತ್ತಿತ್ತು. ಈಗ ಅದು ಮಿಂಚಿನ ವೇಗದಲ್ಲಿ ಸಾವಿರಾರು ಮೈಲುಗಳಾಚೆ ಇರುವವರಿಗೂ ಕೇಳಿಸುತ್ತದೆ ಅಷ್ಟೆ Smiling
ವಯ್ಯಕ್ತಿಕವಾಗಿ ಬೇರೆ ಬೇರೆ ಕಾರಣಕ್ಕೆ ಬ್ಲಾಗ್‌ಗಳನ್ನು ಜನ ಬರೆಯುತ್ತಾರೆ. ಕೆಲವರು ವಯಕ್ತಿಕ, ಆಪ್ತ ವಿವರಗಳನ್ನು ಬರೆಯುತ್ತಾರೆ. ಬಹುಶಃ ಅದನ್ನು ಗೊತ್ತಿರುವವರಿಗೆ ಹೇಳಲು ಆಗದೇ ಇರಬಹುದು. ಅನಾಮಿಕವಾಗಿ ಬ್ಲಾಗ್‌ಗಳಲ್ಲಿ ಹೇಳುವುದೂ ಕೂಡ ಒಂದು ಸವಲತ್ತೇ! ಬ್ಲಾಗ್ ಒದಗಿಸುವ ಅನಾಮಿಕತೆ ಕೆಲವರಿಗೆ ವರವೇ ಇರಬೇಕು.
ಇನ್ನು ಸಾಮಾಜಿಕವಾಗಿಯಂತೂ ಬ್ಲಾಗ್‌ ಎಷ್ಟು ಕೆಲಸ ಮಾಡುತ್ತದೆ ನೋಡಿ. ಪತ್ರಿಕೆ, ರೇಡಿಯೋ, ಟೀವಿ ಸರ್ಕಾರದ ಹುಕುಮ್ಮಿಗೆ ನಮಿಸಿ ಸುಳ್ಳು ಹೇಳುತ್ತಿರುವಾಗ ಬ್ಲಾಗ್‌ಗಳು ಅಮೂಲ್ಯವಾದ ವಿವರಗಳನ್ನು ಯಾರ ಹಂಗೂ ಇಲ್ಲದಂತೆ ಲೋಕಕ್ಕೇ ತಿಳಿಸಬಹುದು. ಯುದ್ಧದಂಥ ಸನ್ನಿವೇಶದಲ್ಲಂತೂ ಇವುಗಳು ಎಷ್ಟು ಮುಖ್ಯವಲ್ಲವೆ?
ವೆಬ್ಬಿನುದ್ದಗಲಕ್ಕೂ ಲಕ್ಷಾಂತರ ಬ್ಲಾಗುಗಳು ಹುಟ್ಟುತ್ತಲೇ ಇವೆ. ಅದರೊಳಗೆ ಬೇಕಾದಷ್ಟು ಜೊಳ್ಳುಪೊಳ್ಳು ಇರಬಹುದು. ಆದರೆ ನಮಗೆ ಹೇಳಬೇಕಾದಂಥ ವಿವರಗಳನ್ನು ಬೇರೆಯವರ ವ್ಯಾಖ್ಯಾನದ ಜರಡೆಯ ಮೂಲಕ ಹಾಯದೇ ಉಳಿದವರಿಗೆ ಮುಟ್ಟಿಸಬಹುದಾದ ಸೌಲಭ್ಯ, ಗುಂಪಿನಲ್ಲಿ ಮಾತಾಡುವಾಗ ಸಿಕ್ಕುವ ಅವಕಾಶದ ಮತ್ತೊಂದು ಮಜಲು.
ಇನ್ನು ನಾನೇಕೆ ಬ್ಲಾಗ್‌ ಮಾಡುತ್ತೇನೆ? ವಯಕ್ತಿಕವಾಗಿ ನಾನಿನ್ನೂ ಹೆಚ್ಚು ಬ್ಲಾಗ್ ಮಾಡಿಲ್ಲ. ನನಗೆ ಬಂದ ಯೋಚನೆಗಳು, ಮಾಡಿದ ಕೆಲಸಗಳು ಇನ್ನೊಬ್ಬರಿಗೆ ಇಷ್ಟ/ಅನುಕೂಲವಾಗಬಹುದು ಅನ್ನಿಸಿದರೆ ಅದನ್ನು ಬ್ಲಾಗ್‌ ಮಾಡಬೇಕೆಂದು ನನ್ನ ಯೋಚನೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ? By: Abhaya Simha (7 replies) March 19, 2007 - 7:15pm
  • ಉ: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ? By: nityapralaya (Sep 26 2008 - 1:44am)
  • ಉ: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ? By: narendra (Oct 14 2007 - 7:56pm)
  • ಅಭಯ್,  ನನ್ನ By: ವೈಭವ (Mar 20 2007 - 10:00am)
  • RE: ನೀವ್ಯಾಕೆ ಬ್ಲಾಗ್ ಬರೆಯುತ್ತೀರಿ? By: anivaasi (Mar 20 2007 - 7:26am)
  • ಬ್ಲಾಗುಗಳ ಕಥೆ By: hpn (Mar 20 2007 - 2:05am)
    • ಪ್ರಶ್ನೆಗೆ ಉತ್ತರ By: hpn (Mar 20 2007 - 2:15am)
  • ಬ್ಲಾಗ್ ಅಂದರೆ ದಿನಚರಿಯೇ ಅಲ್ಲ ಅನ್ನಿಸುತ್ತದೆ.. By: ASHOKKUMAR (Mar 19 2007 - 8:49pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 7, 2008 - 12:18pm
  • savithasr
    ಉ: ಕಳೆದ ನೆನೆಪುಗಳು
    October 7, 2008 - 11:44am
ಇನ್ನಷ್ಟು


ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator