ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು?
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: ASHOKKUMAR (Mar 21 2007 - 11:24am)
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
- ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
- ಮಳೆ By: mahesha (Mar 21 2007 - 3:21pm)
- ಅಸಮಂಜಸ ಕಾಮೆಂಟು By: hpn (Mar 22 2007 - 12:57am)
- ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
- Re: ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: ರವಿ (Mar 23 2007 - 2:09pm)
- Re: ಸ್ವತಃ ಬಿರುದು ಕೊಟ್ಟುಕೊಳ್ಳುವವರು! By: ASHOKKUMAR (Mar 22 2007 - 2:09pm)
- ಬಿರುದು By: mahesha (Mar 22 2007 - 2:38pm)
- ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇರುತ್ತದೆ. By: mahesha (Mar 22 2007 - 1:20am)
- ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು? By: tksbhat (Mar 21 2007 - 8:51pm)
- ಅಸಮಂಜಸ ಕಾಮೆಂಟು By: hpn (Mar 22 2007 - 12:57am)
- ಮಳೆ By: mahesha (Mar 21 2007 - 3:21pm)
- ಮುಂದೆ ಹರಿದ ಮುಂಗಾರು ಮಳೆ ನೀರು... By: Abhaya Simha (Mar 21 2007 - 1:38pm)
- ನೋಡುವ ಉತ್ಸಾಹ ತಗ್ಗಿಸಿದ ವಿಮರ್ಶೆ By: mahesha (Mar 21 2007 - 12:51pm)
- ಮುಂಗಾರು ಮಳೆಗೆ ಸಿಂಗಾರದ ವಿಮರ್ಶೆ By: mahesha (Mar 21 2007 - 10:36am)
- ಹದವಾದ ಮಳೆ By: anivaasi (Mar 21 2007 - 8:48am)

RSS:
ಕೆಟ್ಟ ಕನ್ನಡ ಸಿನಿಮಾ ಯಾಕೆ ಉಳಿಯಬೇಕು?
ಸಿನಿಮಾ ಒಂದು ಕಲಾಪ್ರಕಾರವಾಗಿರುವಂತೆಯೇ ಒಂದು ವ್ಯಾಪಾರವೂ ಹೌದು. ಸಿನಿಮಾವನ್ನು ನೋಡುವವನು ಅಥವಾ ರಸಗ್ರಾಹಿಗೆ ಸಿನಿಮಾ ಒಂದು ವ್ಯಾಪಾರವಾಗಿ ಏನು ಎಂಬುದಕ್ಕಿಂತ ಅದೊಂದು ಕಲಾಭಿವ್ಯಕ್ತಿಯಾಗಿ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಕನ್ನಡ ಸಿನಿಮಾ ಅದು ಮೂರನೇ ಒಂದರಷ್ಟು ಒಳ್ಳೆಯದಾಗಿದ್ದರೂ ಒಳ್ಳೆಯ ಸಿನಿಮಾ ಎಂದುಕೊಳ್ಳಬೇಕು, ಅದನ್ನು ಹೊಗಳಬೇಕು ಎಂದು ಒತ್ತಾಯಿಸುವುದರ ಹಿಂದೆ ಕನ್ನಡದ ಕುರಿತ ಕಳಕಳಿ ಅಲ್ಲ. ಅದೊಂದು ರೀತಿಯ ಮೂಲಭೂತವಾದ.
ಕೆಟ್ಟ ಸಿನಿಮಾಗಳನ್ನು ಒಳ್ಳೆಯವು ಎಂದು ಹೇಳಿ ಕನ್ನಡ ಚಿತ್ರರಂಗವನ್ನು ಉಳಿಸಬೇಕಾದ ಅಗತ್ಯವೇನೂ ಇಲ್ಲ. ಹಾಗೊಂದು ವೇಳೆ ಅದು ಸಾಯುವುದಿದ್ದರೆ ಸಾಯಲಿ. ಇದೇ ಅರ್ಥದ ಮಾತುಗಳನ್ನು ರಂಗಭೂಮಿಯ ಕುರಿತು ಅಪಾರ ಕಾಳಜಿಯಿಟ್ಟುಕೊಂಡಿದ್ದ ಕೆ.ವಿ. ಸುಬ್ಬಣ್ಣ ಕೂಡಾ ಹೇಳಿದ್ದರು. ಈ ಮಾತುಗಳನ್ನು ಅವರು ಕನ್ನಡ ಭಾಷೆ ಮತ್ತು ರಂಗಭೂಮಿಗಳೆರಡಕ್ಕೂ ಅನ್ವಯಿಸುವಂತೆ ಹೇಳಿದ್ದರು. ಯಕ್ಷಗಾನ ವರ್ತಮಾನಕ್ಕೆ ತನ್ನನ್ನು ಪ್ರಸ್ತುತಗೊಳಿಸಿಕೊಳ್ಳುತ್ತಾ ಉಳಿಯಿತು. ಇದರ ಸೋದರ ಕಲೆಗಳಾದ ದೊಡ್ಡಾಟ, ಸಣ್ಣಾಟಗಳು ಜೀವ ಉಳಿಸಿಕೊಂಡಿವೆಯಾದರೂ ಯಕ್ಷಗಾನದಷ್ಟು ಪ್ರಬಲವಾಗಿಲ್ಲ. ಕಂಪೆನಿ ನಾಟಕಗಳೂ ಅಷ್ಟೇ.
ಇಷ್ಟಕ್ಕೂ 30%-40% ಚೆನ್ನಾಗಿದ್ದರೂ ಅದಕ್ಕೆ ಪ್ರೋತ್ಸಾಹಿಸಬೇಕು ಎನ್ನುವ ಕನ್ನಡ ಸಿನಿಮಾಗಳು ಎಷ್ಟರ ಮಟ್ಟಿಗೆ ಕನ್ನಡದ್ದವೇ ಆಗಿವೆ ಎಂಬುದರ ಕುರಿತೂ ಚಿಂತಿಸಬೇಕಲ್ಲವೇ? ಕನ್ನಡ ಹೊಸ ಅಲೆಯ ಚಿತ್ರಗಳು ಮತ್ತು ಬೆರೆಳೆಣಿಕೆಯ ಸಂವೇದನಾ ಶೀಲ ವ್ಯಾಪಾರೀ ಚಿತ್ರಗಳ ನಿರ್ದೇಶಕರನ್ನು ಹೊರತು ಪಡಿಸಿದರೆ ಕನ್ನಡ ಚಿತ್ರಗಳಿಗೆ ಕನ್ನಡ ಐಡೆಂಟಿಟಿಯನ್ನು ಉಳಿಸಿಕೊಳ್ಳುವ ಯಾವ ಕೆಲಸವೂ ಮಾಡಲಿಲ್ಲ. ಇತ್ತೀಚೆಗಂತೂ ಬರೇ ತಮಿಳು, ತೆಲುಗು, ಮಲೆಯಾಳಂ, ಹಿಂದಿಗಳಿಂದ ಕಾಪಿ ಮಾಡುವ ಹುಚ್ಚು. ಈ ಕತೆಗಳನ್ನು ಸಾಂಸ್ಕೃತಿಕವಾಗಿ ಕನ್ನಡಕ್ಕೆ ಒಗ್ಗಿಸುವ, ಕನ್ನಡದ ಸಂದರ್ಭದಲ್ಲಿ ಗ್ರಹಿಸುವ ಕೆಲಸವೂ ಆಗುವುದಿಲ್ಲ. ಇಂಥ ಚಿತ್ರಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇದನ್ನು ಮಾಡಿದ್ದು 30%-40% ಚೆನ್ನಾಗಿದ್ದರೂ ಸಾಕು ಎನ್ನುವ ವೀಕ್ಷಕರಲ್ಲ. ಚೆನ್ನಾಗಿಲ್ಲ ಎಂದು ಥಿಯೇಟರ್ ಗಳಿಂದ ದೂರ ಉಳಿದ ಪ್ರೇಕ್ಷಕರು.
ವ್ಯಾಪಾರಿ ಸಿನಿಮಾ ಮಾರುಕಟ್ಟೆಯ ಸರಕು. ಮಾರುಕಟ್ಟೆಯೇ ಅದರ ಗುಣಮಟ್ಟವನ್ನು ಸರಿಪಡಿಸುತ್ತದೆ. ಇನ್ನು ಕನ್ನಡ ಚಿತ್ರರಂಗಕ್ಕೆ ಇರುವ ಪ್ರೋತ್ಸಾಹ ಬೇರಾವ ಚಿತ್ರರಂಗಕ್ಕೂ ಇಲ್ಲ. ಇಲ್ಲಿರುವ ತೆರಿಗೆ ವಿನಾಯಿತಿ, ಸಬ್ಸಿಡಿಗಳು ಬೇರೆಲ್ಲೂ ಇಲ್ಲ. ರೈತರಿಗೆ ಸಬ್ಸಿಡಿ ಕೊಟ್ಟರೆ ಅದನ್ನು ಕೆಟ್ಟ ಆರ್ಥಿಕ ನೀತಿಯೆನ್ನುವವರೇ ಮನರಂಜನಾ ಉದ್ಯಮಕ್ಕೆ ಮಿತಿ ಮೀರಿ (ಚಿತ್ರವೊಂದರ ಸರಾಸರಿ ಬಜೆಟ್ ನ ಶೇಕಡಾ 10ರಷ್ಟು) ಸಬ್ಸಿಡಿ ಕೊಡುವುದನ್ನು ಯಾಕಾದರೂ ಒಪ್ಪುತ್ತಾರೋ?