ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!

March 27, 2007 - 2:59pm — ismail

Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ!

ismail's picture

ಈ ಗೊಂದಲಕ್ಕೆ ಕಾರಣವಾದದ್ದು ಇಂಗ್ಲಿಷ್ ನ ನಿಘಂಟು ಪಿತಾಮಹ ಸ್ಯಾಮ್ಯುಯೆಲ್ ಜಾನ್ಸನ್ ಎಂದು ಎಲ್ಲಿಯೋ ಓದಿದ ನೆನಪು. ಬಹುಶಃ ಶಂಕರಭಟ್ಟರ ಪುಸ್ತಕದಲ್ಲಿರಬೇಕು. ಪದಗಳನ್ನು ಬರೆವಾಗ ಅವುಗಳ ಇತಿಹಾಸವೂ ತಿಳಿಯುವಂತೆ ಇರಲಿ ಎಂದು ಭಾವಿಸಿ ಅವನು ಈ ಬಗೆಯ ಸ್ಪೆಲ್ಲಿಂಗ್ ಪದ್ಧತಿಯನ್ನು ರೂಢಿಸಿದನಂತೆ. ನಮ್ಮ ಮಧ್ಯೆಯೂ ಈ ಬಗೆಯ ಸ್ಪೆಲ್ಲಿಂಗ್ ಪದ್ಧತಿ ಇದೆ. ಇದು ಸಂಸ್ಕೃತ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ 'ಪದ್ಧತಿ' ಎಂಬುದನ್ನು ಪದ್ದತಿ ಎಂದೂ ಬರೆಯಬಹುದು. ಆದರೆ ಸಂಸ್ಕೃತದಲ್ಲಿ ಅದು 'ಪದ್ಧತಿ' ಆಗಿರುವುದರಿಂದ 'ದ' ಅಕ್ಷರಕ್ಕೆ ಮಹಾಪ್ರಾಣದ ಒತ್ತನ್ನು ಕೊಡುವುದರಿಂದ ಅದು ಮಾತ್ರ ಸರಿ ಎಂದು ವೈಯಾಕರಣಿಗಳು ವಾದಿಸುತ್ತಾರೆ.

ಈ ವಾದದ ತಪ್ಪು-ಸರಿಗಳನ್ನು ನಾನೀಗ ವಿಮರ್ಶಿಸಲು ಹೋಗುವುದಿಲ್ಲ. ಈ ಬಗೆಯ ನಿಲುವುಗಳ ಹಿಂದೆ ಸಾಮಾಜಿಕ ಕಾರಣಗಳಿರುವುದಂತೂ ಹೌದು. ಸಂಸ್ಕೃತದಲ್ಲಿರುವುದು ಸರಿ ಎಂದು ಭಾವಿಸುವುದನ್ನು ಎಂ.ಎನ್. ಶ್ರೀನಿವಾಸ್ ಅವರು ಅಂಥ್ರೋಪಾಲಜಿಯ ಸಂದರ್ಭದಲ್ಲಿ ಹೇಳುವ ಸಂಸ್ಕೃತೀಕರಣ ಕ್ರಿಯೆಗೆ ಹೋಲಿಸಬಹುದೇನೋ. 

ಈಗ ಇಂಗ್ಲಿಷ್ ನಲ್ಲಿ ಇರುವುದು ಸರಿ ಎಂಬ ಭಾವನೆಯೂ ನೆಲೆಯೂರತೊಡಗಿದೆ. ರವೀಂದ್ರನಾಥ ಟ್ಯಾಗೋರ್ ಎಂದು ಬರೆಯುವುದನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ತೀರಾ ಇತ್ತೀಚಿನವರೆಗೂ ಕನ್ನಡ ಬರೆವಣಿಗೆಯಲ್ಲಿ ಇದು ರವೀಂದ್ರನಾಥ ಠಾಕೂರ್ ಎಂದು ಬರೆಯಲಾಗುತ್ತಿತ್ತು. ಈಗ ಇಂಗ್ಲಿಷ್ ನಲ್ಲಿ ಬರೆಯುವಂತೆ ಟ್ಯಾಗೋರ್ ಎಂದು ಬರೆಯುತ್ತಿದ್ದೇವೆ. ವಿದೇಶಾಂಗ ಕಾರ್ಯದರ್ಶಿಯಾಗಿದ್ದ ರವಿ ರಾಯ್, ರಬಿ ರಾಯ್ ಆಗಿ ಈಗಂತೂ ರೊಬಿ ರಾಯ್ ಎಂದು ಬರೆಯುವ ಮಟ್ಟಕ್ಕೆ ಮುಟ್ಟಿದ್ದೇವೆ.

ಇದರಲ್ಲಿ ಯಾವುದೋ ಒಂದು ಸರಿ, ಮತ್ತಾವುದೋ ಒಂದು ತಪ್ಪು ಎಂದು ಹೇಳಲು ನಾನು ಸಮರ್ಥನಲ್ಲ. ಒಂದು ಬದಲಾವಣೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನಷ್ಟೆ.

ಇಸ್ಮಾಯಿಲ್ ನನ್ನ ಬ್ಲಾಗ್: http://ismail.sampada.net

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: ಸಂಗನಗೌಡ (20 replies) March 27, 2007 - 9:31am
  • Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: ಸಂಗನಗೌಡ (Mar 27 2007 - 1:28pm)
    • Re: ಕನ್ನಡ ಲಿಪಿ ಮತ್ತು ಸಂಸ್ಕೃತ By: hamsanandi (Mar 27 2007 - 1:42pm)
      • Re: ಕನ್ನಡ ಲಿಪಿ ಮತ್ತು ಸಂಸ್ಕೃತ By: mahesha (Mar 27 2007 - 3:49pm)
        • ಸಂಸ್ಕ್ರುತದ ತಾಯ್ ಕನ್ನಡ?? By: ಸಂಗನಗೌಡ (Mar 27 2007 - 4:00pm)
          • ಸಂಸ್ಕ್ರುತ, ಕನ್ನಡ ಯಾರ ತಾಯಿ ಯಾರೂ ಅಲ್ಲ By: mahesha (Mar 28 2007 - 11:23am)
      • ದನಿಗೂಡು: ಕನ್ನಡ ಲಿಪಿ ಮತ್ತು ಸಂಸ್ಕೃತ By: Shyam Kishore (Mar 27 2007 - 2:04pm)
    • ದೇವನಾಗರಿಗಿಂತ ಕನ್ನಡದ ಲಿಪಿ ಹಳತು By: mahesha (Mar 27 2007 - 1:39pm)
  • Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: Shyam Kishore (Mar 27 2007 - 12:22pm)
    • Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: ವೈಭವ (Mar 27 2007 - 12:38pm)
      • Re: Cut = ಕಟ್ ಆದರೆ Put = ಪುಟ್; ಗೊಂದಲವೋ ಗೊಂದಲ! By: ismail (Mar 27 2007 - 2:59pm)
  • Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: mahesha (Mar 27 2007 - 12:38pm)
    • a,e,i,o,u By: ಸಂಗನಗೌಡ (Mar 27 2007 - 3:24pm)
      • Re: a,e,i,o,u By: mahesha (Mar 27 2007 - 3:41pm)
        • Re: a,e,i,o,u By: ಸಂಗನಗೌಡ (Mar 27 2007 - 3:44pm)
          • Re: a,e,i,o,u By: mahesha (Mar 27 2007 - 3:53pm)
    • Re: ಕನ್ನಡ-ಇಂಗ್ಲಿಸ್ ಹೋಲಿಕೆ ಮತ್ತು ಬೇರೆತನಗಳು By: ismail (Mar 27 2007 - 3:03pm)
      • ಅರಬಿ, ಫಾರಸಿಗಳಲ್ಲಿ ವಿಸರ್ಗವಿಲ್ಲ. By: mahesha (Mar 27 2007 - 3:55pm)
  • Re: ಕನ್ನಡ v/s ಇಂಗ್ಲಿಷ್ By: ASHOKKUMAR (Mar 27 2007 - 11:35am)
    • Re: ಕನ್ನಡ v/s ಇಂಗ್ಲಿಷ್ By: ಸಂಗನಗೌಡ (Mar 27 2007 - 1:07pm)
      • ವೆಂಜನ vs ವ್ಯಂಜನ By: mahesha (Mar 27 2007 - 1:25pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:13pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:06pm
  • keerthi2kiran
    ಉ: ನವ್ಯ, ನವೋದಯ, ಬಂಡಾಯ.....
    July 24, 2008 - 5:05pm
  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
ಇನ್ನಷ್ಟು


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator