ಮೊದಲ ತಲೆಮಾರಿನ ಕನ್ನಡ ವೈಯಾಕರಣಿಗಳೆಲ್ಲರೂ ಸಂಸ್ಕೃತವನ್ನು ಮಾದರಿಯಾಗಿಟ್ಟುಕೊಂಡು ಕನ್ನಡ ವ್ಯಾಕರಣ ರಚಿಸಿದರು. ಇದಕ್ಕು ಶಬ್ದಮಣಿದರ್ಪಣ ಬರೆದ ಕೇಶಿರಾಜನೂ ಹೊರತಲ್ಲ. ಸಂಸ್ಕೃತ ವ್ಯಾಕರಣವನ್ನು ಕನ್ನಡಕ್ಕೆ ಒಗ್ಗಿಸಲು ಪ್ರಯತ್ನಿಸಿದ್ದರಿಂದ ಇದು ಸಂಭವಿಸಿತು. ಸಂಸ್ಕೃತದಂತೆಯೇ ಕನ್ನಡದಲ್ಲಿಯೂ ಒಂಬತ್ತು ಬಗೆಯ ಲಿಂಗಗಳಿವೆ. ಮೂರು ಬಿಟ್ಟರೆ ಉಳಿದವು ಅವ್ಯಕ್ತ ಮುಂತಾಗಿ ಕೇಶಿರಾಜ ಹೇಳುವುದರ ಹಿಂದಿನ ಮರ್ಮವೂ ಇದುವೇ. ಈಕಾಲದ ಪಂಡಿತರೆಲ್ಲರೂ ಇಂಗ್ಲಿಷ್ ಕಲಿತಿದ್ದಂತೆ ಆ ಕಾಲದ ಪಂಡಿತರೆಲ್ಲರೂ ಸಂಸ್ಕೃತ ಬಲ್ಲವರಾಗಿದ್ದರು. ಮೂಲಭಾಷೆ, ದೇವಭಾಷೆ ಇತ್ಯಾದಿ ನಂಬಿಕೆಗಳೂ ಇದ್ದುದರಿಂದ ಹೀಗೆಲ್ಲಾ ಆಗಿರಬಹುದು. ಈಗ ನಾವು ವ್ಯಾಕರಣವನ್ನು ರೂಪಿಸಲು ಬಳಸುತ್ತಿರುವ ಟೂಲ್ ಗಳು ಆಗ ಲಭ್ಯವಿರಲಿಲ್ಲ. ವಿದ್ವಾಂಸರು ತಮಗನ್ನಿಸಿದ್ದನ್ನು ಹೇಳಿದರು. ಈ ಬಗೆಯ ಪ್ರಯತ್ನಗಳಿಂದ ಕನ್ನಡಕ್ಕೊಂದು ವರ್ಣನಾತ್ಮಕ ವ್ಯಾಕರಣ ರೂಪಿಸುವ ಕ್ರಿಯೆಗಳು ಇಲ್ಲಿಯವರೆಗೂ ಬೆಳೆದಿವೆ. ಕ್ಷ, ತ್ರ ಜ್ಞ ಗಳನ್ನು ಕನ್ನಡ ವರ್ಣ ಮಾಲೆಯ ಭಾಗವೆಂದು ಈಗ ಯಾರೂ ಭಾವಿಸುವುದಿಲ್ಲ.
ಇಸ್ಮಾಯಿಲ್
Re: ಕ್ಷ , ತ್ರ ಮತ್ತು ಜ್ಞ

ನನ್ನ ಬ್ಲಾಗ್: http://ismail.sampada.net